ಅಂಗನವಾಡಿ ಕಾರ್ಯಕರ್ತೆಯರಿಗೆ ಹೆರಿಗೆ ರಜೆ

Posted By:
Subscribe to Oneindia Kannada

ಬೆಂಗಳೂರು, ಜೂನ್ 23 : ಅಂಗನವಾಡಿ ಕಾರ್ಯಕರ್ತೆಯರಿಗೆ 180 ದಿನಗಳ ಹೆರಿಗೆ ರಜೆ, ಜೀವವಿಮೆ ಸೌಲಭ್ಯ ಸಿಗಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ.

ಬುಧವಾರ ಹೊರಡಿಸಿದ ಆದೇಶದ ಅನ್ವಯ ಇನ್ನು ಮುಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ 180 ದಿನಗಳ ಹೆರಿಗೆ ರಜೆ ಸಿಗುತ್ತದೆ. ವರ್ಷಕ್ಕೆ ಎರಡು ಸಮವಸ್ತ್ರ ಸೀರೆಯನ್ನೂ ನೀಡಲಾಗುತ್ತದೆ. [ಕಲಬುರಗಿ : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ಖಾಲಿ ಇದೆ]

women

ಈ ಹಿಂದೆ ಕಾರ್ಯಕರ್ತೆಯರ ವಿಮಾ ಯೋಜನೆಯ 200 ರೂ.ಗಳನ್ನು ಕೇಂದ್ರ ಸರ್ಕಾರ 80 ರೂ.ಗಳನ್ನು ಕಾರ್ಯಕರ್ತೆಯರು ಭರಿಸಬೇಕಾಗಿತ್ತು. ಹೊಸ ಆದೇಶದ ಅನ್ವಯ ವಿಮಾ ಯೋಜನೆಯ ಪೂರ್ಣ ಕಂತನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. [ನಂಜನಗೂಡಿನ ಅಂಗನವಾಡಿಯಲ್ಲಿ ಬಣ್ಣದ ಚಿತ್ತಾರ!]

9ನೇ ತರಗತಿಯಿಂದ ದ್ವಿತೀಯ ಪಿಯುಸಿ ತನಕ ಓದುತ್ತಿರುವ ಕಾರ್ಯಕರ್ತೆಯರ ಮಕ್ಕಳಿಗೆ ಮೂರು ತಿಂಗಳಿಗೊಮ್ಮೆ 300 ರೂ. ವಿದ್ಯಾರ್ಥಿ ವೇತನ ನೀಡಲು ಸಚಿವಾಲಯ ಆದೇಶ ಹೊರಡಿಸಿದೆ.

ಅಂಗನವಾಡಿ ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡುವಾಗ ಶೇ 50 ರಷ್ಟು ಹುದ್ದೆಗಳನ್ನು 10 ವರ್ಷ ಅನುಭವ ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮೀಸಲಿಡಬೇಕು ಎಂದು ಸೂಚನೆ ನೀಡಲಾಗಿದೆ. [ಪಿಟಿಐ ಚಿತ್ರ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Centre governament has announced a six months of maternity leave and scholarship for Anganwadi workers. The Anganwadi workers will be provided with an insurance cover under Anganwadi Karyakartri Bima Yojana. The annual premium for this is 280.
Please Wait while comments are loading...