Get Updates
Get notified of breaking news, exclusive insights, and must-see stories!

ಸ್ಟಾಲಿನ್ ಸರ್ಕಾರ ಅಯೋಧ್ಯೆ ದೇವಸ್ಥಾನ ಉದ್ಘಾಟನಾ ನೇರ ಪ್ರಸಾರ ನಿಷೇಧಿಸಿದೆ: ನಿರ್ಮಲಾ ಸೀತಾರಾಮನ್ ಆರೋಪ

ಸೋಮವಾರ ನಡೆಯಲಿರುವ ರಾಮಮಂದಿರ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಎಂಕೆ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ ನಿಷೇಧಿಸಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಆರೋಪಿಸಿದ್ದಾರೆ.

ಅಯೋಧ್ಯೆಯಲ್ಲಿ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಖಾಸಗಿ ದೇವಾಲಯಗಳು ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ರಾಜ್ಯ ಪೊಲೀಸರು ತಡೆಯುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೆ ಇದಕ್ಕೆ ಉತ್ತರ ನೀಡಿರುವ ತಮಿಳುನಾಡು ಸರ್ಕಾರ ಸೇಲಂನಲ್ಲಿ ನಡೆಯುತ್ತಿರುವ ಡಿಎಂಕೆ ಯುವ ಸಮಾವೇಶದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ತಪ್ಪು ಮಾಹಿತಿಗಳನ್ನು ಪ್ರಚಾರ ಮಾಡುತ್ತಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.

 Sitharaman Accuses MK Stalin Government of Banning Ayodhya Temple Live Telecast

ನಿರ್ಮಲಾ ಸೀತಾರಾಮನ್‌ ಟ್ವೀಟ್ ಮಾಡಿದ್ದು, "ಜನವರಿ 22ರಂದು ನಡೆಯುವ ಅಯೋಧ್ಯೆ ರಾಮ ಮಂದಿರ ಕಾರ್ಯಕ್ರಮಗಳ ನೇರ ಪ್ರಸಾರವನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ. ತಮಿಳುನಾಡಿನಲ್ಲಿ ಶ್ರೀರಾಮನಿಗೆ 200ಕ್ಕೂ ಹೆಚ್ಚು ದೇವಸ್ಥಾನಗಳಿವೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ನಿರ್ವಹಿಸುವ ದೇವಾಲಯಗಳಲ್ಲಿ ಶ್ರೀರಾಮನ ಹೆಸರಿನಲ್ಲಿ ಯಾವುದೇ ಪೂಜೆ/ಭಜನೆ/ಪ್ರಸಾದ/ಅನ್ನದಾನವನ್ನು ನಡೆಸಲು ಅನುಮತಿ ನೀಡಿಲ್ಲ. ಪೊಲೀಸರು ಖಾಸಗಿಯಾಗಿ ನಡೆಸುವ ದೇವಸ್ಥಾನಗಳಲ್ಲಿ ಸಹ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿಲ್ಲಿಸುತ್ತಿದ್ದಾರೆ. ಅವರು ಸಂಘಟಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಹಿಂದೂ ವಿರೋಧಿ, ದ್ವೇಷಪೂರಿತ ಕ್ರಮವನ್ನು ಬಲವಾಗಿ ಖಂಡಿಸುತ್ತೇನೆ" ಎಂದು ಸೀತಾರಾಮನ್ ಬರೆದಿದ್ದಾರೆ.

ಡಿಎಂಕೆ ಹಿಂದೂ ವಿರೋಧಿ ಎಂದ ಕೇಂದ್ರ ಸಚಿವೆ

"ನೇರ ಪ್ರಸಾರ ನಿಷೇಧವನ್ನು ಸಮರ್ಥಿಸಲು ತಮಿಳುನಾಡು ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ಕಾರಣ ನೀಡುತ್ತಿದೆ. ಸುಳ್ಳು ಮತ್ತು ನಕಲಿ ನಿರೂಪಣೆಯಿಂದ ಸಮಸ್ಯೆಗಳಾಗುತ್ತವೆ ಎಂದಿದೆ. ಅಯೋಧ್ಯೆ ತೀರ್ಪಿನ ದಿನದಂದು ಯಾವುದೇ ಕಾನೂನು ಸಮಸ್ಯೆಗಳು ಆಗಿಲ್ಲ. ದೇಶದ ಯಾವುದೇ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಡಿಪಾಯ ಹಾಕಿದ ದಿನವೂ ಸಮಸ್ಯೆ ಆಗಿಲ್ಲ. ತಮಿಳುನಾಡಿನಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಆಚರಿಸಲು ಜನರ ಸ್ವಯಂಪ್ರೇರಿತ ಭಾಗವಹಿಸುವಿಕೆ ತಡೆಯುವ ಮೂಲಕ ಡಿಎಂಕೆ ಹಿಂದೂ ವಿರೋಧಿಯಾಗಿದೆ," ಎಂದು ಹೇಳಿದರು.

ಸಚಿವೆ ಹೇಳಿಕೆ ಖಂಡಿಸಿದ ಪಿ.ಕೆ.ಸೇಕರ್ ಬಾಬು

ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವ ಪಿ.ಕೆ.ಸೇಕರ್ ಬಾಬು ಹೇಳಿಕೆಯನ್ನು ಖಂಡಿಸಿದ್ದಾರೆ. ಸೇಲಂನಲ್ಲಿ ನಡೆಯಲಿರುವ ಡಿಎಂಕೆ ಯುವ ಸಮಾವೇಶದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಬಿಜೆಪಿ ಸುಳ್ಳು ಮಾಹಿತಿ ಹರಡಿರುವುದನ್ನು ಬಲವಾಗಿ ಖಂಡಿಸುತ್ತೇವೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ತಮಿಳುನಾಡಿನ ದೇವಸ್ಥಾನಗಳಲ್ಲಿ ಪ್ರಸಾದ ನೀಡಲು, ಭಕ್ತರಿಗೆ ಅನ್ನದಾನ, ಪೂಜೆ ಸಲ್ಲಿಸುವ ಸ್ವಾತಂತ್ರ್ಯಕ್ಕೆ ಯಾವುದೇ ಮಿತಿ ಹೇರಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇತರರಂತಹ ಕಚೇರಿಯಲ್ಲಿರುವವರು ಈ ತಪ್ಪು ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಪ್ರಚಾರ ಮಾಡುತ್ತಿದ್ದಾರೆ " ಎಂದು ಹೇಳಿದರು.

ಕಳೆದ ವಾರ, ಎಂಕೆ ಸ್ಟಾಲಿನ್ ಅವರ ಪುತ್ರ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಮಸೀದಿಯನ್ನು ಕೆಡವಿ ನಿರ್ಮಿಸಿದ ದೇವಾಲಯವನ್ನು ತಮ್ಮ ಪಕ್ಷವು ಒಪ್ಪುವುದಿಲ್ಲ ಎಂದು ಹೇಳಿದ್ದರು. "ಅಲ್ಲಿ ದೇವಸ್ಥಾನ ಬರುವುದರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ, ಮಸೀದಿ ಕೆಡವಿದ ನಂತರ ಮಂದಿರ ನಿರ್ಮಾಣಕ್ಕೆ ನಾವು ಒಪ್ಪುವುದಿಲ್ಲ" ಎಂದು ಡಿಎಂಕೆ ಯುವ ಘಟಕದ ಮುಖ್ಯಸ್ಥರು ಹೇಳಿದ್ದಾರೆ.

ಅಯೋಧ್ಯೆಯ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ನೂರಾರು ರಾಜಕಾರಣಿಗಳು, ನಟರು ಮತ್ತು ಇತರ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಧಾರ್ಮಿಕ ಸಮಾರಂಭದಿಂದ ರಾಜಕೀಯ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಬಹುತೇಕ ಪ್ರಮುಖ ವಿರೋಧ ಪಕ್ಷಗಳು ಕಾರ್ಯಕ್ರಮದ ಆಹ್ವಾನವನ್ನು ತಿರಸ್ಕರಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+