JNU ವಿದ್ಯಾರ್ಥಿನಿಗೆ ಅಸಹ್ಯಕರ ಟ್ವೀಟ್- ಗಾಯಕ ಅಭಿಜೀತ್ ಟ್ವಿಟ್ಟರ್ ಬ್ಲಾಕ್
ಗಾಯಕ ರಶೀದ್ ಟ್ವೀಟ್ ಒಂದನ್ನು ಶೇರ್ ಮಾಡಿದ ಅಭಿಜೀತ್ ಅದಕ್ಕೆ, "ಆಕೆ ಎರಡು ಗಂಟೆಗಳ ಮುಂಗಡ ಹಣ ಪಡೆದುಕೊಂಡು ಗಿರಾಕಿಯನ್ನು ಸಂತೋಷಪಡಿಸಿಲ್ಲ ಎನ್ನುವ ಸುದ್ದಿಯಿದೆ," ಎನ್ನುವ ಟ್ವೀಟ್ ಮಾಡಿದ್ದರು.
ನವದೆಹಲಿ, ಮೇ 24: ಗಾಯಕ ಅಭಿಜೀತ್ ಭಟ್ಟಾಚಾರ್ಯ ಟ್ವಿಟ್ಟರ್ ಅಕೌಂಟನ್ನು ಟ್ವಿಟ್ಟರ್ ಬ್ಲಾಕ್ ಮಾಡಿದೆ. ಜೆಎನ್ಯೂ ವಿದ್ಯಾರ್ಥಿನಿ ಶೆಹ್ಲಾ ರಶೀದ್ ಬಗ್ಗೆ ಆಕ್ಷೇಪಾರ್ಹ ಸಂದೇಶ ಹಾಕಿದ್ದಕ್ಕಾಗಿ ಅವರ ಟ್ವಿಟ್ಟರ್ ಅಕೌಂಟ್ ಬ್ಲಾಕ್ ಆಗಿದೆ.
ಆಗಿದ್ದೇನು?
ಗಾಯಕ ರಶೀದ್ ಟ್ವೀಟ್ ಒಂದನ್ನು ಶೇರ್ ಮಾಡಿದ ಅಭಿಜೀತ್ ಅದಕ್ಕೆ, "ಆಕೆ ಎರಡು ಗಂಟೆಗಳ ಮುಂಗಡ ಹಣ ಪಡೆದುಕೊಂಡು ಗಿರಾಕಿಯನ್ನು ಸಂತೋಷಪಡಿಸಿಲ್ಲ ಎನ್ನುವ ಸುದ್ದಿಯಿದೆ," ಎನ್ನುವ ಟ್ವೀಟ್ ಮಾಡಿದ್ದರು.

ಇದಾದ ನಂತರ ಅಭಿಜೀತ್ ಬಗ್ಗೆ ಟ್ವಿಟ್ಟರಿನಲ್ಲಿ ಭಾರೀ ಆಕ್ರೋಷ ವ್ಯಕ್ತವಾಗಿತ್ತು. ಹಲವರು ಅನುಚಿತ, ಅವಮಾನಕರ ಟ್ವೀಟ್ ಮಾಡುತ್ತಿದ್ದಾರೆ ಎಂದು ಟ್ವಿಟ್ಟರಿಗೆ ದೂರು ನೀಡಿದ್ದರು. ಹಲವು ದೂರುಗಳು ದಾಖಲಾಗುತ್ತಿದ್ದಂತೆ ಟ್ವಿಟ್ಟರ್ ಅವರ ಅಧಿಕೃತ ಖಾತೆಯನ್ನು ಬ್ಲಾಕ್ ಮಾಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೆಎನ್ಯು ವಿದ್ಯಾರ್ಥಿನಿ ಶೆಹ್ಲಾ ರಶೀದ್, ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಭಿಜೀತ್ ಇದರ ಹಿಂದೆ ಅರುಂಧತಿ ರಾಯ್ ಹಾಗು ಜೆಎನ್ಯು ವಿದ್ಯಾರ್ಥಿಗಳ ಕೈವಾಡವಿದೆ. ಅವರೀಗ ಪರೇಶ್ ರಾವಲ್ ಟ್ವೀಟರ್ ಖಾತೆ ಬ್ಲಾಕ್ ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದಾರ.
ಇದೇ ಮೊದಲಲ್ಲ!
ಹಾಗಂಥ ಅಭಿತೇಜ್ ಭಟ್ಟಾಚಾರ್ಯ ಆಕ್ಷೇಪಾರ್ಹ ಟ್ವೀಟ್ ಮಾಡುವುದು ಇದೇ ಮೊದಲಲ್ಲ. ಈ ಹಿಂದೆ ಪತ್ರಕರ್ತೆ ಸ್ವಾತಿ ಚತುರ್ವೇದಿಗೂ ಹೀಗೆಯೇ ಟ್ವೀಟ್ ಮಾಡಿದ್ದರು. ಕೊನೆಗೆ ಸ್ವಾತಿ ಪೊಲೀಸರಿಗೆ ದೂರು ನೀಡಿದ್ದರು. ಆಗ ಅಭಿಜೀತ್ ರನ್ನು ಬಂಧಿಸಲಾಗಿತ್ತು ಕೂಡ. ಇವತ್ತಿಗೂ ಅವರ ಅಕೌಂಟ್ ಗಳನ್ನು ಜಾಲಾಡಿದರೆ ಅಲ್ಲಿ ಆಶ್ಲೀಲ, ಆಕ್ಷೇಪಾರ್ಹ ವರ್ಗಕ್ಕೆ ಸೇರುವ ಹಲವಾರು ಟ್ವೀಟ್ ಗಳು ಕಾಣಸಿಗುತ್ತವೆ.













Click it and Unblock the Notifications