ಸರ್ಕಾರಿ ಶಾಲೆ ಪ್ರಾಂಶುಪಾಲರಿಗೆ ಸಿಂಗಾಪುರ್ ಪ್ರವಾಸ ಭಾಗ್ಯ
ಪ್ರವಾಸ ಹೊರಟಿರುವ ಪ್ರಾಂಶುಪಾಲರು ಫೆಬ್ರವರಿ 6 ರಿಂದ 10 ರವರೆಗೆ ಸಿಂಗಾಪುರದಲ್ಲಿ ವೃತ್ತಿಪರ ಶಿಕ್ಷಕರ ತರಬೇತಿ ಸೆಮಿನಾರ್‌ನಲ್ಲಿ ಭಾಗವಹಿಸಲಿದ್ದಾರೆ.
ಚಂಡೀಗಢ, ಫೆಬ್ರವರಿ 4: ಸದಾ ಹೊಸ ಯೋಜನೆ, ಆಡಳಿತ ವಿಧಾನಗಳಿಗೆ ಹೆಸರುವಾಸಿಯಾಗಿರುವ ಪಂಜಾಬ್ ಸಿಎಂ ಭಗವಂತ ಮಾನ್ ಅವರು ಸರ್ಕಾರಿ ಶಾಲಾ ಪ್ರಾಂಶುಪಾಲರಿಗೆ ಸಿಂಗಾಪುರಕ್ಕೆ ಪ್ರವಾಸ ಭಾಗ್ಯವನ್ನು ನೀಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ವೃತ್ತಿಪರ ತರಬೇತಿಗಾಗಿ ಸಿಂಗಾಪುರಕ್ಕೆ ಭೇಟಿ ನೀಡಲಿರುವ 36 ಸರ್ಕಾರಿ ಶಾಲಾ ಪ್ರಾಂಶುಪಾಲರ ಮೊದಲ ಬ್ಯಾಚ್‌ಗೆ ಶನಿವಾರ ಚಾಲನೆ ನೀಡಿದ್ದಾರೆ. ಪ್ರವಾಸ ಹೊರಟಿರುವ ಪ್ರಾಂಶುಪಾಲರು ಫೆಬ್ರವರಿ 6 ರಿಂದ 10 ರವರೆಗೆ ಸಿಂಗಾಪುರದಲ್ಲಿ ವೃತ್ತಿಪರ ಶಿಕ್ಷಕರ ತರಬೇತಿ ಸೆಮಿನಾರ್‌ನಲ್ಲಿ ಭಾಗವಹಿಸಲಿದ್ದಾರೆ.
ಕಳೆದ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷವು ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿವರ್ತಿಸಲಾಗುವುದು ಎಂದು ಜನರಿಗೆ ಭರವಸೆ ನೀಡಿತ್ತು. ಇಂದು, 36 ಶಾಲಾ ಮುಖ್ಯಸ್ಥರ ಮೊದಲ ಬ್ಯಾಚ್ ಸಿಂಗಾಪುರಕ್ಕೆ ಹೋಗುತ್ತಿದ್ದು, ಅವರು ಐದು ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಸಿಂಗಾಪುರದ ಪ್ರಿನ್ಸಿಪಾಲ್ ಅಕಾಡೆಮಿಯಲ್ಲಿ ಅವರು ಶಿಕ್ಷಣ ಕ್ಷೇತ್ರದ ಆಧುನಿಕ ವಿಧಾನಗಳನ್ನು ಕಲಿಯುತ್ತಾರೆ ಎಂದು ಸುದ್ದಿಗಾರರಿಗೆ ಮುಖ್ಯಮಂತ್ರಿ ಹೇಳಿದರು.

ಮೊದಲ ಬ್ಯಾಚ್ ಫೆಬ್ರವರಿ 11ರಂದು ಹಿಂತಿರುಗಲಿದ್ದು, ಅವರು ತಮ್ಮ ಅನುಭವವನ್ನು ತಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದ ಅವರು, ಅರವಿಂದ್ ಕೇಜ್ರಿವಾಲ್ ಆಡಳಿತದಿಂದ ದೆಹಲಿ ಸರ್ಕಾರ ಹೇಗೆ ರೂಪುಗೊಂಡಿದೆ. ಪಂಜಾಬ್ ಅದೇ ಪರಿವರ್ತನಾ ಪ್ರಕ್ರಿಯೆಗೆ ಸಾಕ್ಷಿಯಾಗಲಿದೆ ಎಂದು ಮಾನ್ ಹೇಳಿದರು.

ನಮ್ಮಲ್ಲಿ ಪ್ರತಿಭಾವಂತ ಶಿಕ್ಷಕರಿದ್ದಾರೆ. ಹಾಗಾಗಿ ಅವರನ್ನು ಪ್ರಸ್ತುತ ಸ್ಥಿತಿಗೆ ಬದಲಾಯಿಸುವ ಅಗತ್ಯವಿದೆ. (ಇತ್ತೀಚಿನ ಬೋಧನಾ ತಂತ್ರಗಳ ಬಗ್ಗೆ), ಅದರ ಪ್ರಕ್ರಿಯೆಯು ಇಂದು ಪ್ರಾರಂಭವಾಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ತಮ್ಮ ಸರ್ಕಾರದ ಆದ್ಯತೆಯಾಗಿದೆ. ನಾವು ಶಿಕ್ಷಕರನ್ನು ಫಿನ್‌ಲ್ಯಾಂಡ್‌ಗೂ ಕಳುಹಿಸುತ್ತೇವೆ. ಕಲಿಯಲು ಹೊಸ ಮತ್ತು ಇತ್ತೀಚಿನ ಬೋಧನಾ ವಿಧಾನಗಳು ಲಭ್ಯವಿರುವ ಸ್ಥಳಗಳಿಗೆ ನಾವು ಶಿಕ್ಷಕರನ್ನು ತರಬೇತಿಗೆ ಕಳುಹಿಸುತ್ತೇವೆ. ಮುಂಬರುವ ರಾಜ್ಯ ಬಜೆಟ್‌ನಲ್ಲಿ ನಾವು ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡುತ್ತೇವೆ ಎಂದು ಅವರು ಹೇಳಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications