ಡೋರ್‌ ಸ್ಟಾಪರ್‌ ಕಲ್ಲು ಈಗ ರಾಷ್ಟ್ರೀಯ ನಿಧಿ: ಕೋಟಿ ಬೆಲೆಯ ಅಂಬರ್‌ ಕಲ್ಲಿನ ಕತೆ

ಸಾಮಾನ್ಯ ಡೋರ್‌ ಸ್ಟಾಪರ್‌ ದೇಶದ ಕೋಟ್ಯಂತರ ಮೌಲ್ಯದ ರಾಷ್ಟ್ರೀಯ ನಿಧಿಯಾಗಿ ಮಾರ್ಪಟ್ಟ ಕತೆ ಇದು. ಇದು ನೋಡುವುದಕ್ಕೆ ಬರೀ ಕಲ್ಲಿನಂತೆ ಇತ್ತು. ಅಷ್ಟಕ್ಕೂ ಮಹಿಳೆಯೊಬ್ಬರು ಇದನ್ನು ಕಲ್ಲು ಅಂದುಕೊಂಡೇ ಮನೆಗೆ ತಂದಿದ್ದು. ಆದರೆ ಈ ಕಲ್ಲಿನ ಸತ್ಯ ಹೊರ ಬರ್ತಾ ಇದ್ದ ಹಾಗೆಯೇ ಎಲ್ಲರೂ ಶಾಕ್‌ ಆಗಿದ್ದಂತೂ ಸುಳ್ಳಲ್ಲ.

ಕೋಟಿ ಬೆಲೆ ಬಾಳುವ ಡೋರ್‌ ಸ್ಟಾಪರ್‌ :

7.7 ಪೌಂಡ್‌ಗಳಷ್ಟು ತೂಕದ ಕೆಂಪು ಕಲ್ಲುನ್ನು ಉತ್ತರ ರೊಮೇನಿಯಾದ ಮಹಿಳೆ ತನ್ನ ಬೆಡ್‌ ರೂಮ್‌ನ ಡೋರ್‌ ಸ್ಟಾಪರ್‌ ಆಗಿ ಬಳಸ್ತಾ ಇದ್ರು. ಆದ್ರೆ ಆ ಡೋರ್‌ ಸ್ಟಾಪರ್‌ ಅಸಲಿಗೆ ಏನು ಅನ್ನುವುದು ಅವರಿಗೆ ಗೊತ್ತಿರಲಿಲ್ಲ. ಅವರ ಪಾಲಿಗೆ ಇದೋಮದು ಕಲ್ಲಾಗಿತ್ತು. ಹಾಗಾಗಿ ಅವರ ಮನೆಗೆ ಬರುವವರು ಕೂಡ ಇದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಈ ಮನೆಯಲ್ಲಿ ಒಂದು ದಿನ ಕಳ್ಳತನ ಆಗುತ್ತೆ. ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣಗಳನ್ನೆಲ್ಲಾ ದೋಚಿಕೊಂಡು ಹೋಗ್ತಾರೆ. ಅವರು ಕೂಡಾ ಈ ಕಲ್ಲನ್ನು ಗುರುತಿಸೋದಿಲ್ಲ. ಹಾಗೆಯೇ ಬಿಟ್ಟು ಹೋಗ್ತಾರೆ. ಯಾಕಂದ್ರೆ ಯಾರಿಗೂ ಆ ಕಲ್ಲಿನ ನಿಜವಾದ ವ್ಯಾಲ್ಯೂ ಗೊತ್ತೇ ಇರಲಿಲ್ಲ.

Simple Door Stopper Stone Became National Treasure 70 Million Years Old Amber Worth abt Million Dollar

ಆ ಮಹಿಳೆ ಬುಜಾವ್ ಕೌಂಟಿಯ ಕೊಲ್ಟಿ ಎಂಬ ಸಣ್ಣ ಹಳ್ಳಿಯಿಂದ ಈ ಕಲ್ಲನ್ನು ತಂದಿದ್ದರು. ಅವರು ಕೂಡಾ ಇದನ್ನು ಸಾಮಾನ್ಯ ಕಲ್ಲು ಅಂದುಕೊಂಡೇ ಅದನ್ನು ತಂದಿದ್ದರು. 1991ರಲ್ಲಿ ಈ ಮಹಿಳೆ ಸತ್ತು ಹೋಗ್ತಾರೆ. ಆಗಲೇ ಕಲ್ಲಿನ ಸತ್ಯ ಹೊರಗೆ ಬಂದದ್ದು.

ಹೊರ ಬಂತು ಡೋರ್‌ ಸ್ಟಾಪರ್‌ ಸತ್ಯ :

ಮಹಿಳೆ ತೀರಿಕೊಂಡ ನಂತ್ರ ಈ ಮನೆ ಅವರ ಸಂಬಂಧಿಯ ಕೈ ಸೇರುತ್ತದೆ. ಅವರ ಕಣ್ಣಿಗೆ ಡೋರ್‌ ಸ್ಟಾಪರ್‌ ಆಗಿ ಬಳಸ್ತಾ ಇದ್ದ ಕಲ್ಲು ಬೀಳುತ್ತದೆ. ಈ ಕಲ್ಲು ಸಾಮಾನ್ಯವಾದುದಲ್ಲ ಎನ್ನುವುದು ಮೊದಲ ನೋಟದಲ್ಲೇ ಆ ವ್ಯಕ್ತಿಗೆ ಗೊತ್ತಾಗುತ್ತೆ. ಕೂಡಲೇ ಅವರು ಈ ಕಲ್ಲನ್ನು ಪರೀಕ್ಷೆಗೆ ಕಳುಹಿಸುತ್ತಾರೆ.

ಈ ಕಲ್ಲು 70 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಅಂಬರ್‌ ಕಲ್ಲು ಎನ್ನುವುದು ಗೊತ್ತಾಗುತ್ತದೆ.

ಏನಿದು ಅಂಬರ್‌ ಕಲ್ಲು?

ಅಂಬರ್ ಎಂದರೆ ಮರಗಳ ಜಿಗುಟಾದ ದ್ರವ ಗಟ್ಟಿಯಾಗಿ ಕಲ್ಲಿನ ರೂಪ ಪಡೆದಿರುವಂಥದ್ದು. ಈ ಜಿಗುಟಾದ ರಸ ಕೆಸರಿನಲ್ಲಿ ಹೂತುಹೋಗಿ ಲಕ್ಷಾಂತರ ವರ್ಷಗಳ ನಂತರ ರಾಸಾಯನಿಕವಾಗಿ ಗಟ್ಟಿಯಾಗಿ ಅಂಬರ್ ರೂಪುಗೊಳ್ಳುತ್ತದೆ. ಈ ಮರದ ಜಿಗುಟು ರಸ ನೀರು ಮತ್ತು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ.ಇದನ್ನು ಸಾಮಾನ್ಯವಾಗಿ ಪಳೆಯುಳಿಕೆ ರತ್ನ ಅಥವಾ ಅಂಬರ್ ಕಲ್ಲು ಅಂತ ಕರೀತಾರೆ.

ಈ ಕಲ್ಲಿಗಿದೆ ವೈಜ್ಞಾನಿಕ ಮಹತ್ವ :

ಸ್ಥಳೀಯರು ಈ ಆಂಬರ್ ಅನ್ನು ಚಿಹ್ಲಿಂಬರ್ ಎಂದು ಕರೆಯುತ್ತಾರೆ. ಆದರೆ ಖನಿಜಶಾಸ್ತ್ರಜ್ಞರು ಇದನ್ನು ರುಮಾನೈಟ್ ಎಂದು ಕರೆಯುತ್ತಾರೆ. ಜಗತ್ತಿನ ಬೇರೆ ಎಲ್ಲೂ ಸಿಗದ ಈ ವಿಶೇಷ ಅಂಬರ್, ಗಾಢ ಕೆಂಪು, ಕಂದು ಮತ್ತು ಕಪ್ಪು ಬಣ್ಣವನ್ನು ಹೊಂದಿದೆ. ಸಾಮಾನ್ಯವಾಗಿ ಅಂಬರ್ ತುಂಡುಗಳು ಕೇವಲ ಕೆಲವು ಗ್ರಾಂ ತೂಕವಷ್ಟೇ ಇರುತ್ತವೆ.ಆದರೆ ಈ ಮಹಿಳೆಯ ಮನೆಯಲ್ಲಿದ್ದ ಅಂಬರ್‌ ದೊಡ್ಡ ಗಾತ್ರದ್ದಾಗಿದ್ದರಿಂದ ವೈಜ್ಞಾನಿಕ ಮಹತ್ವವಿದೆ.

ರಾಷ್ಟ್ರೀಯ ನಿಧಿ :

ಈ ಕಲ್ಲಿನ ಸತ್ಯ ತಿಳಿತಾ ಇದ್ದ ಹಾಗೆಯೇ ರೊಮೇನಿಯನ್ ರಾಜ್ಯ ಅಧಿಕಾರಿಗಳು ಇದನ್ನು ವಶಕ್ಕೆ ತಗೋತಾರೆ. ಮತ್ತೆ ಇದನ್ನು ಪೋಲೆಂಡ್‌ನ ಕ್ರಾಕೋವ್‌ನಲ್ಲಿರುವ ಮ್ಯೂಜಿಯಂಗೆ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಅಲ್ಲಿನ ತಜ್ಞರು ಇದು ನಿಜವಾದ ಅಂಬರ್ ಎನ್ನುವುದನ್ನು ಕನ್‌ಫರ್ಮ್‌ ಮಾಡ್ತಾರೆ.

7.7 ಪೌಂಡ್‌ ತೂಕವಿರುವ ಈ ಕಲ್ಲು ಇದುವರೆಗೆ ಪತ್ತೆಯಾದ ಅತಿದೊಡ್ಡ ಅಂಬರ್‌ ಕಲ್ಲುಗಳಲ್ಲಿ ಒಂದಾಗಿದೆ. ಇದೀಗ ಇದನ್ನು ಬುಜಾವು ಕೌಂಟಿ ಮ್ಯೂಸಿಯಂನಲ್ಲಿ ರಾಷ್ಟ್ರೀಯ ನಿಧಿಯಾಗಿ ಇಡಲಾಗಿದೆ. 2022 ರಿಂದ ಇದನ್ನು ಇಲ್ಲಿ ಪ್ರದರ್ಶನಕ್ಕೆ ಕೂಡಾ ಇಟ್ಟಿದ್ದಾರೆ. ವರದಿಯ ಪ್ರಕಾರ ಇದರ ಬೆಲೆ ಅಂದಾಜು 1 ಮಿಲಿಯನ್ ಯುರೋ ಅಂದರೆ ಸುಮಾರು 1.1 ಮಿಲಿಯನ್ ಡಾಲರ್ ಎಂದು ಹೇಳುತ್ತದೆ.

ಒಟ್ಟಿನಲ್ಲಿ ಸಾಮಾನ್ಯ ಡೋರ್‌ ಸ್ಟಾಪರ್‌ ಆಗಿದ್ದ ಈ ಕಲ್ಲು ಇದೀಗ ದೇಶದ ಹೆಮ್ಮೆಯ ಮ್ಯೂಸಿಯಂನ ಅತಿ ಆಕರ್ಷಕ ಮತ್ತು ಮುಖ್ಯವಾದ ಪಳೆಯುಳಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+