ಶಾಕಿಂಗ್! ಅರವಿಂದ್‌ ಕೇಜ್ರಿವಾಲ್ ಕೊಲೆಗೆ ಯತ್ನ, ಯಾರಿಂದ ?

ಆಮ್‌ ಆದ್ಮಿ ಪಾರ್ಟಿಯ ಸಂಸ್ಥಾಪಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕೊಲೆಗೆ ಯತ್ನ ನಡೆದಿತ್ತು ಎನ್ನುವ ಗಂಭೀರ ವಿಚಾರವೊಂದು ಈಗ ಚರ್ಚೆಯಾಗುತ್ತಿದೆ. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಅರವಿಂದ್‌ ಕೇಜ್ರಿವಾಲ್ ಬದ್ಧ ಎದುರಾಳಿ. ಆಮ್‌ ಆದ್ಮಿ ಪಕ್ಷ (ಎಎಪಿ) ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ದೆಹಲಿ ಹಾಗೂ ಪಂಜಾಬ್‌ನಲ್ಲಿ ಈ ಪಕ್ಷ ಅಧಿಕಾರದಲ್ಲಿ ಇದೆ.

ದೇಶದ ವಿವಿಧ ಜಿಲ್ಲೆಗಳಲ್ಲಿ ಆಮ್‌ ಆದ್ಮಿ ಪಾರ್ಟಿಯು ತನ್ನದೇ ಶಕ್ತಿಯನ್ನು ಬೆಳೆಸಿಕೊಂಡಿದೆ. ಭಾರತದ ಸ್ಟಾರ್ಟ್‌ ಅಪ್‌ ಪಾರ್ಟಿ ಎನ್ನುವ ಖ್ಯಾತಿಯೂ ಈ ಪಕ್ಷಕ್ಕೆ ಇದೆ. ದೆಹಲಿ ಎರಡು ಬಾರಿ ಎಎಪಿ ಅಧಿಕಾರದ ಗದ್ದುಗೆ ಏರಿದೆ
. ಈ ನಡುವೆ ಕೇಜ್ರಿವಾಲ್‌ ಅವರಿಗೆ ರಾಜಕೀಯ ಹಿನ್ನಡೆಯಾಗುವಂತಹ ಪ್ರಸಂಗವೂ ಎದುರಾಗಿತ್ತು ಅಬಕಾರಿ ನೀತಿ (ಮದ್ಯನೀತಿ) ಹಗರಣದಲ್ಲಿ ಅರವಿಂದ್‌ ಕೇಜ್ರಿವಾಲ್ ಜೈಲು ಸೇರಿದ್ದರು.

Shocking Attempted murder of Arvind Kejriwal by whom

ಅರವಿಂದ್‌ ಕೇಜ್ರಿವಾಲ್ ಜೈಲು ಸೇರಿದ ಮೇಲೆ ಅವರಿಗೆ ಹಾಗೂ ಅವರ ಪಕ್ಷಕ್ಕೆ ತುಸು ಹಿನ್ನಡೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಎಎಪಿಯು ಒಂದು ಹಂತದಲ್ಲಿ ಬಿಜೆಪಿಗೆ ಸ್ಪರ್ಧೆ ಕೊಡುವಷ್ಟರ ಮಟ್ಟಕ್ಕೆ ಬೆಳೆದಿತ್ತು. ಪಂಜಾಬ್‌ನಲ್ಲಿ ಗೆದ್ದ ಮೇಲೆ ಎಎಪಿಯನ್ನು ಕಟ್ಟಿಹಾಕಲು ಬಿಜೆಪಿ ಸರ್ಕಸ್‌ ಮಾಡಿತ್ತು. ಲೋಕಸಭೆ ಚುನಾವಣೆಯ ಹಂತದಲ್ಲಿ ಅವರ ಬಂಧನವಾಗಿತ್ತು. ಮದ್ಯನೀತಿ ಹಗರಣದಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಸೇರಿದಂತೆ ಅವರ ಸಚಿವ ಸಂಪುಟದ ಹಲವು ಸಚಿವರು ಜೈಲು ಸೇರಿದ್ದರು. ಇದೀಗ ಬಂದಿರುವ ಸುದ್ದಿ ಆಘಾತಕಾರಿಯಾಗಿದೆ.

ಅರವಿಂದ್‌ ಕೇಜ್ರಿವಾಲ್ ಅವರನ್ನು ಬಿಜೆಪಿ ಕಟ್ಟಿ ಹಾಕಲು ಪ್ರಯತ್ನಿಸಿತ್ತು. ರಾಜಕೀಯವಾಗಿ ಅವರ ಬೆಳವಣಿಗೆಯನ್ನು ತಂತ್ರದ ಮೂಲಕ ಮಣಿಸಲು ಸೆಣಸಿತ್ತು. ಆದರೆ, ಜೈಲಿನಲ್ಲಿ ಅವರನ್ನು ಕೊಲ್ಲುವ ಸಂಚು ನಡೆದಿತ್ತು ಎನ್ನುವ ಆಘಾತಕಾರಿ ವಿಷಯವನ್ನು ಕೇಜ್ರಿವಾಲ್ ಅವರೇ ಹೇಳಿದ್ದಾರೆ. ಆದರೆ, ಅವರು ಯಾರ ಹೆಸರನ್ನೂ ಉಲ್ಲೇಖ ಮಾಡಿಲ್ಲ. ಕೊಲ್ಲುವ ಪ್ರಯತ್ನ ಯಾವ ರೀತಿ ಇತ್ತು ಎನ್ನುವ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಕೇಜ್ರಿವಾಲ್ ಅವರ ರಕ್ತದಲ್ಲಿ ಸಕ್ಕರೆ ಮಟ್ಟ (ಪ್ರಮಾಣ) ಹೆಚ್ಚಾಗಿ ಇದೆ. ಅವರು ಮದ್ಯನೀತಿ ಹಗರಣದಲ್ಲಿ ಜೈಲು ಸೇರಿದ್ದಾಗ ಇದೇ ಸಮಸ್ಯೆ ಎದುರಾಗಿತ್ತು. ಹೀಗಾಗಿ, ಅವರ ಆರೋಗ್ಯ ಹದಗೆಡುತ್ತಿತ್ತು ಎನ್ನುವ ವಿಷಯ ವರದಿಯಾಗುತ್ತಿತ್ತು. ಆದರೆ, ಜೈಲಿನಲ್ಲಿ ನನ್ನನ್ನು ಕೊಲ್ಲುವ ಪ್ರಯತ್ನವನ್ನೂ ಮಾಡಲಾಗಿತ್ತು ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್‌ ಅವರೇ ಬಹಿರಂಗಪಡಿಸಿದ್ದಾರೆ.

Shocking Attempted murder of Arvind Kejriwal by whom

ನಾನು ಜೈಲಿನಲ್ಲಿ ಬಂಧಿಯಾಗಿದ್ದಾಗ ಇನ್ಸುಲಿನ್ ನೀಡದೆ ನನ್ನನ್ನು ಕೊಲ್ಲಲು ಪ್ಲಾನ್‌ ನಡೆದಿತ್ತು ಎನ್ನುವ ಆಘಾತಕಾರಿ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ. ನನಗೆ ಸಮಯಕ್ಕೆ ಸರಿಯಾಗಿ ಇನ್ಸುಲಿನ್ ಕೊಡಲಿಲ್ಲ. ಇದೇ ಮುಂದುವರಿದಿದ್ದರೆ ನಾನು ಅಲ್ಲೇ ಸತ್ತೋಗ್ತಿದೆ. ಜೈಲಲ್ಲಿ ಇನ್ಸುಲಿನ್ ಕೊಡದೆ ಕೊಲ್ಲುವುದಕ್ಕೆ ಪ್ಲಾನ್‌ ಮಾಡಿದ್ದರು. ಆದರೆ, ಜನರ ಆಶೀರ್ವಾದ ನನ್ನನ್ನು ರಕ್ಷಿಸಿದೆ. ನಾನು ಸುರಕ್ಷಿತವಾಗಿ ಜೈಲಿನಿಂದ ಹೊರಗೆ ಬಂದಿದ್ದೇನೆ ಎಂದಿದ್ದಾರೆ.

ಇನ್ಸುಲಿನ್ ಯಾಕೆ: ಮನುಷ್ಯನ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿದ್ದರೆ ಇನ್ಸುಲಿನ್‌ಗಳನ್ನು ಕೊಡಲಾಗುತ್ತದೆ. ಅದೇ ರೀತಿಯೇ ಕೇಜ್ರಿವಾಲ್‌ ಅವರು ಸಹ ನಿತ್ಯ ನಾಲ್ಕು ಇನ್ಸುಲಿನ್​ಗಳನ್ನು ತೆಗೆದುಕೊಳ್ಳುತ್ತಾರೆ. ಸಮಯಕ್ಕೆ ಸರಿಯಾಗಿ ಇನ್ಸುಲಿನ್ ಕೊಡದೆ ಇದ್ದರೆ ಕಿಡ್ನಿಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಇನ್ಸುಲಿನ್ ಕೊರತೆಯಿಂದಾಗಿ ಸಾವು ಸಹ ಸಂಭವಿಸಬಹುದು. ಈ ರೀತಿ ಸಾವಿನ ಹಂತದಿಂದ ಬದುಕಿ ಬಂದಿದ್ದೇನೆ ಎಂದು ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+