ಬೆಚ್ಚಿಬೀಳಿಸುವ ಸುದ್ದಿ! ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಕಲಿನೋಟಿನ 3 ಕಾರ್ಖಾನೆ!

Posted By:
Subscribe to Oneindia Kannada

ಕಾಶ್ಮೀರ, ನವೆಂಬರ್ 17: ಅಪನಗದೀಕರಣದ ನಂತರ 500 ಮತ್ತು 2000 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸುವುದಕ್ಕಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮೂರು ಕಾರ್ಖಾನೆಗಳನ್ನು ತೆರೆಯಲಾಗಿದೆ ಎಂಬ ಬೆಚ್ಚಿ ಬೀಳಿಸುವ ಸತ್ಯವನ್ನು ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಬಯಲಿಗೆಳೆದಿದೆ.

ಖೋಟೋ ನೋಟು ಪತ್ತೆಗಾಗಿ ಬಿಎಸ್ಎಫ್ ಯೋಧರಿಗೆ ತರಬೇತಿ

ಕಾರ್ಖಾನೆಗಳು ಇನ್ನೂ ಸಂಪೂರ್ಣವಾಗಿ ಕಾರ್ಯಾರಂಭ ಮಾಡಿಲ್ಲವಾದರೂ ಇವುಗಳನ್ನು ಈಗಲೇ ಹತ್ತಿಕ್ಕದೆ ಇದ್ದರೆ ದೇಶದ ಭದ್ರತೆ ಸವಾಲಾಗುತ್ತದೆ ಎಂದು ಎನ್ ಐಎ ಎಚ್ಚರಿಕೆಯನ್ನೂ ನೀಡಿದೆ. ಈಗಾಗಲೇ ಭಾರತದ ಒಳಗೆ ನುಸುಳುವ ಭಯೋತ್ಪಾದಕರು ತಮ್ಮ ಬಳಿ ನಕಲಿ ನೋಟುಗಳು ಹಿಡಿದೇ ಬರುತ್ತಿದ್ದಾರೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲೂ ಇವುಗಳ ಮುದ್ರಣವಾಗುತ್ತಿದೆ ಎನ್ನಲಾಗುತ್ತಿದೆ.

Shocking: 3 exclusive factories to print fake currency in PaK!

ಅಸಲಿ ನೋಟಿನ ಪ್ರತಿಬಿಂಬದಂತೇ ಕಾಣುವ ಈ ನೋಟುಗಳು, ನಕಲಿ ಎಂದು ಪತ್ತೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಒಮ್ಮೆ ಈ ನೋಟುಗಳೆಲ್ಲ ಚಲಾವಣೆಗೆ ಬಂದರೆ ನಂತರ ಅವುಗಳ ಹಾವಳಿ ತಪ್ಪಿಸುವುದು ಸರ್ಕಾರಕ್ಕೆ ಬಹುದೊಡ್ಡ ತಲೆನೋವಾದೀತು.

ನೋಟುಗಳಿಗೆ ಹೊಸ ಭದ್ರತಾ ಅಂಶ: ಕೇಂದ್ರ ಸರ್ಕಾರ ಆಶ್ವಾಸನೆ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮುದ್ರಣಗೊಳ್ಳುವ ನಕಲಿ ನೋಟುಗಳನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಿ, ನಂತರ ಅವು ಪಶ್ಚಿಮ ಬಂಗಾಳಕ್ಕೆ ಬರುವಂತೆ ಮಾಡುವುದು ಭಯೋತ್ಪಾದಕರ ಗುರಿ ಎಂಬ ಮಾಹಿತಿ ಎನ್ ಐಎ ಗೆ ಲಭ್ಯವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Stung by the NIA raids and demonetisation, the ISI has set up three factories in Pakistan occupied Kashmir to print fake currency. At the factory, Intelligence Bureau officials say are the mirror copies of the Rs 500 and 2,000 notes which were introduced post demonetisation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ