Get Updates
Get notified of breaking news, exclusive insights, and must-see stories!

Shoaib Malik: ಪತ್ನಿ 'ಸಾನಿಯಾ ಮಿರ್ಜಾ'ಗೆ ಕೈಕೊಟ್ಟು ಪಾಕ್ 'ನಟಿ' ವಿವಾಹವಾದ 'ಸೋಯೆಬ್ ಮಲಿಕ್'

ಬೆಂಗಳೂರು, ಜನವರಿ 20: ಭಾರತೀಯ ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ (Sania Mirza) ಅವರ ಪತಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib Malik) ಅವರ ಬೇರ್ಪಡುತ್ತಿದ್ದಾರೆ ಎಂಬ ಮಾತುಗಳು ನಿಜವಾಗಿವೆ.

ಹೌದು, ಮೊದಲ ಪತ್ನಿ ಭಾರತದ ಸಾನಿಯಾ ಮಿರ್ಜಾಗೆ ಕೈಕೊಟ್ಟಿರುವ ಕ್ರಿಕೇಟಿಗ ಶೋಯೆಬ್ ಮಲಿಕ್ ಅವರು ಇದೀಗ ಪಾಕಿಸ್ತಾನಿ ನಟಿ ಸನಾ ಜಾವೇದ್ (Sana Javed) ಅವರನ್ನು ವಿವಾಹವಾಗಿದ್ದಾರೆ. ಜನವರಿ 20 ರಂದು ಶನಿವಾರ ಅವರು ನಟಿಯನ್ನು ಮದುವೆ ಆಗಿರುವುದಾಗಿ ತಮ್ಮ ವಿವಾಹದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲವನ್ನು ಅಧಿಕೃತಪಡಿಸಿದ್ದಾರೆ.

Shoaib Malik Married To Pakistan Actress Sana Javed on Jan 20th

ನಟಿ ಜತೆಗಿನ ಫೋಟೊ ಅಪ್ಲೋಡ್

ಮೊದಲಿಂದಲೂ ಶೋಯೆಬ್ ಮಲಿಕ್ ಮತ್ತು ನಟಿ ಸನಾ ಜಾವೇದ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಈ ಬಗ್ಗೆ ಕಳೆದ ವರ್ಷ ಶೋಯೆಬ್ ಹುಟ್ಟುಹಬ್ಬದಂದು ಪಾಕಿಸ್ತಾನದ ಕ್ರಿಕೆಟಿಗರು ಈ ಬಗ್ಗೆ ಮಾತನಾಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ಶೋಯೆಬ್ ಗೆಳೆಯರು ಆತನ ಮತ್ತು ನಟಿಯ ಇಬ್ಬರ ಫೋಟೊಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಾಕಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದರು.

ಈ ಮಧ್ಯೆ ಸಾನಿಯಾ ಮಿರ್ಜಾರಿಂದ ಶೋಯೆಬ್ ದೂರವಾಗಲಿದ್ದಾರೆ. ಇವರಿಬ್ಬರು ಮಧ್ಯೆ ಎಲ್ಲವು ಸರಿಯಿಲ್ಲ. ಶೀಘ್ರವೇ ಡಿವೋರ್ಸ್ ನೀಡಲಿದ್ದಾರೆ ಎಂಬ ಮಾರುಗಳು ಕೇಳಿ ಬಂದಿದ್ದವು. ಈ ಎಲ್ಲ ಬೆಳವಣಿಗೆ ಮಧ್ಯೆ ಸೋಯೆಬ್ ಅವರು ಇಂದು ಶನಿವಾರ ಜನವರಿ 20 ರಂದು ಸ್ವದೇಶದ ನಟಿ ಸನಾ ಜಾವೇದ್ ಅವರ ಮದುವೆ ಆಗಿದ್ದು, ಆ ಸಮಾರಂಭದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

Shoaib Malik Married To Pakistan Actress Sana Javed on Jan 20th

2010 ರಲ್ಲಿ ಸಾನಿಯಾ ಮಿರ್ಜಾ ಜತೆ ವಿವಾಹ

ಈ ಮೂಲಕ ಸಾನಿಯಾ ಮಿರ್ಜಾರ ಅಗಲಿಕೆಯ ವದಂತಿಗಳಿಗೆ ಬಲ ಬಂದಂತಾಗಿದೆ. ಶೋಯೆಬ್ ಅವರಿಗೆ ಇದು ಮೂರನೇ ಮದುವೆ ಅಂತಲೂ ಹೇಳಲಾಗುತ್ತಿದ್ದೆ. ಈ ಬೆಳವಣಿಗೆಗೆ ಅವರ ಅಭಿಮಾನಿಗಳು ಧಿಗ್ಬ್ರಾಂತಗೊಂಡಿದ್ದಾರೆ. ಈ ಮದುವೆ ಮೂಲಕ ಶೋಯೆಬ್ ಮಲಿಕ್ 2010 ರಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಜತೆ ಆದ ಮದುವೆ ಮುರಿದು ಬಿದ್ದಿದೆ ಎನ್ನಲಾಗಿದೆ.

ಸಾನಿಯಾ ಮಿರ್ಜಾ ಅವರಿಗೂ ಮೊದಲು ಆಯೇಶಾ ಸಿದ್ದಿಕಿಯಿಂದ ಶೋಯೆಬ್ ವಿಚ್ಛೇದನ ಪಡೆದಿದ್ದರು. ಇದು ಅವರಿಗೆ ಮೊದಲ ಮದುವೆ ಆಗಿತ್ತು. ಇಂದು ವಿವಾಹವಾಗುತ್ತಿದ್ದಂತೆ ನಟಿ ಜಾವೇದ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಬಯೋದಲ್ಲಿ ತನ್ನ ಹೆಸರನ್ನು ಸಹ ಬದಲಾಯಿಸಿಕೊಂಡಿದ್ದಾಳೆ. 'ಸನಾ ಶೋಯೆಬ್ ಮಲಿಕ್' (Sana Shoaib Malik) ಎಂದು ಬದಲಾಯಿಸಿಕೊಂಡಿದ್ದಾರೆ.

ಇನ್ನೂ ಶೋಯೆಬ್ ಪತ್ನಿ ನಟಿ ಸನಾ ಜಾವೇದ್ ಅವರಿಗೆ ಇದು ಮೊದಲ ಮದುವೆಯಲ್ಲ. ಅವರು 2020 ರಲ್ಲಿ ಗಾಯಕ ಉಮರ್ ಜಸ್ವಾಲ್ ಅವರನ್ನು ವಿವಾಹವಾಗಿದ್ದರು. ಬಳಿಕ ಅವರಿಬ್ಬರು 2023 ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದರು.

Shoaib Malik Married To Pakistan Actress Sana Javed on Jan 20th

ಮೌನವಾಗಿದ್ದ ಸಾನಿಯಾ ಮಿರ್ಜಾ, ಪೋಸ್ಟ್

ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಅವರು ಬೇರ್ಪಡುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದರೂ ಸಹಿತಿ ತಮ್ಮ ಖಾಸಗಿ ಜೀವನ ಬಗ್ಗೆ ಸಾನಿಯಾ ಮೌನವಹಿಸಿದ್ದರು. ಕಳೆದ ಬುಧವಾರವಷ್ಟೇ ಸಾನಿಯಾ ಮಿರ್ಜಾ ಅವರು ಇನ್ಸ್‌ಟಾಗ್ರಾಮ್‌ನಲ್ಲಿ ಹಾಕಿ ಪೋಸ್ಟ್ ಕೆಲವು ಮಾಹಿತಿಯನ್ನು ಬಹಿರಂಗೊಳ್ಳಿಸಿತ್ತು.

ಸಾನಿಯಾ ತಮ್ಮ ಪೋಸ್ಟ್‌ನಲ್ಲಿ ''ಮದುವೆ ಕಷ್ಟ. ವಿಚ್ಛೇದನ ಕಷ್ಟ, ಬೊಜ್ಜು ಕಷ್ಟ. ಫಿಟ್ ಆಗಿರುವುದು ಕಷ್ಟ. ನಿಮ್ಮ ಕಷ್ಟವನ್ನು ಆರಿಸಿ. ಸಾಲದಲ್ಲಿ ಇರುವುದು ಕಷ್ಟ. ಆರ್ಥಿಕವಾಗಿ ಶಿಸ್ತುಬದ್ಧವಾಗಿರುವುದು ಕಷ್ಟ. ನಿಮ್ಮ ಕಷ್ಟವನ್ನು ಆರಿಸಿ. ಸಂವಹನ ಕಷ್ಟ. ಸಂವಹನ ಮಾಡದಿರುವುದು ಕಷ್ಟ. ನಿಮ್ಮ ಕಷ್ಟ ಯಾವುದು. ಜೀವನವು ಎಂದಿಗೂ ಸುಲಭವಾಗುವುದಿಲ್ಲ. ಇದು ಯಾವಾಗಲೂ ಕಠಿಣವಾಗಿರುತ್ತದೆ. ಆದರೆ ನಾವು ನಮ್ಮ ಕಷ್ಟವನ್ನು ಆಯ್ಕೆ ಮಾಡಬಹುದು. ಬುದ್ಧಿವಂತಿಕೆಯಿಂದ ಆರಿಸಿ'' ಎಂದು ಪೋಸ್ಟ್ ಹಾಕಿದ್ದರು..

ವದಂತಿಗೆ ತೆರೆ ಎಳೆಯಲು ದಂಪತಿ ಯತ್ನ

ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ 2010 ರಲ್ಲಿ ಭಾರತದ ಹೈದರಾಬಾದ್‌ನಲ್ಲಿ ಸಾಂಪ್ರದಾಯಿಕ ಮುಸ್ಲಿಂ ಪದ್ಧತಿ ಪ್ರಕಾರ ವರಿಸಿದ್ದರು. ಈ ದಂಪತಿಗೆ 2018 ರಲ್ಲಿ ಮೊದಲ ಮಗು ಜನಿಸಿದ್ದು, ಮಗನಿಗೆ ಇಜಾನ್ ಎಂದು ಹೆಸರಿಡಲಾಗಿದೆ.

ಕಳೆದ ವರ್ಷ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ತಮ್ಮ ಮಗನ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಿದಾಗ ವದಂತಿಗಳು ಸ್ವಲ್ಪ ಕಡಿಮೆಯಾಯಿತು. ಸಾನಿಯಾ ಮತ್ತು ಶೋಯೆಬ್ ಅವರು ದುಬೈನಿಂದ 'ಮಿರ್ಜಾ-ಮಲಿಕ್' ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆಲವು ವದಂತಿಗಳಿಗೆ ತೆರೆಎಳೆದಿದ್ದರು. ನಂತರ ಡಿವೋರ್ಸ್ ವಿಚಾರ ಮುನ್ನೆಲೆಗೆ ಬಂದು, ವದಂತಿ ಹುಟ್ಟಿಕೊಂಡವು. ಇದೀಗ ಎಲ್ಲದಕ್ಕೂ ತೆರೆ ಬಿದ್ದಿದೆ.

ಮೂರನೇ ಮದುವೆ ಆಗಿದ್ದರ ಬಗ್ಗೆ ಸ್ವತಃ ಪಾಕ್ ಕ್ರಿಕೇಟಿಗ ಸಾನಿಯಾ ಮಿರ್ಜಾ ಪತಿ ಸೋಯೆಬ್ ಮಲಿಕ್ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+