ಕೊಲ್ಹಾಪುರದಲ್ಲಿ KSRTC ಬಸ್ ಗಳ ಮೇಲೆ ಶಿವಸೇನೆ ಪುಂಡಾಟಿಕೆ

ಬೆಳಗಾವಿಯಲ್ಲಿ ಕನ್ನಡ ವಿರೋಧಿ ಧೋರಣೆ ಪ್ರದರ್ಶಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ಹಜ್ ಸಚಿವ ರೋಷನ್ ಬೇಗ್ ನೀಡಿದ್ದ ಹೇಳಿಕೆಗೆ ವಿರುದ್ಧವಾಗಿ ಶಿವಸೇನೆಯಿಂದ ಪ್ರತಿಭಟನೆ.

ಕೊಲ್ಹಾಪುರ (ಮಹಾರಾಷ್ಟ್ರ), ಮೇ 22: ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ನೀಡಿದ್ದ ಹೇಳಿಕೆಯೊಂದರ ವಿರುದ್ಧ ಸಿಡಿದೆದ್ದಿರುವ ಶಿವಸೇನೆ ಪಕ್ಷದ ಕಾರ್ಯಕರ್ತರು, ಕೊಲ್ಹಾಪುರದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗಳ ಮೇಲೆ ತಮ್ಮ ಪುಂಡಾಟಿಕೆ ತೋರಿದ್ದಾರೆ.

ನಗರ ಪ್ರವೇಶಿಸುತ್ತಿದ್ದ ರಾಜ್ಯ ಸಂಸ್ಥೆಯ ಬಸ್ ಗಳನ್ನು ತಡೆದದ್ದೇ ಅಲ್ಲದೆ, ಅವುಗಳಲ್ಲಿದ್ದ ಕನ್ನಡ ನಾಮಫಲಕಗಳನ್ನು ತೆಗೆದು, ಶಿವಸೇನೆ ಹೆಸರಿನ ನಾಮಫಲಕಗಳನ್ನು ಹಾಕಿ ಪ್ರತಿಭಟನೆ ಮಾಡಿದ್ದಾರೆ.

Shiv Sena protests against state minister Roshan Baig in Kolhapur

ಸೋಮವಾರ, ಬೆಳಗಾವಿಗೆ ಭೇಟಿ ನೀಡಿದ್ದ ಸಚಿವ ರೋಷನ್ ಬೇಗ್, ಮಾಧ್ಯಮಗಳೊಂದಿಗೆ ಮಾತನಾಡುವಾಗ ಬೆಳಗಾವಿಯಲ್ಲಿ ಕನ್ನಡ ವಿರೋಧಿ ಧೋರಣೆ ಪ್ರದರ್ಶಿಸುವ ಎಂಇಎಸ್ ಕಾರ್ಯಕರ್ತರು, ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಬೆಳಗಾವಿಯಲ್ಲಿ ಇರುವವರೆಲ್ಲರೂ ಮೊದಲು ನಾವು ಭಾರತೀಯರು,ಕನ್ನಡಿಗರು ಎಂದು ಅರಿತುಕೊಳ್ಳಬೇಕು. ಕನ್ನಡ ನೆಲಕ್ಕೆ ಗೌರವ ಕೊಡಬೇಕು. ಅದನ್ನು ಬಿಟ್ಟು ಕನ್ನಡ ವಿರೋಧಿ ಪ್ರತಿಭಟನೆಗಳನ್ನು ಮಾಡುವುದು, ಕನ್ನಡ ವಿರೋಧಿ ಧೋರಣೆಗಳನ್ನು ಅನುಸರಿಸುವುದು ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಇನ್ನು ಮುಂದೆ ಬೆಳಗಾವಿಯಲ್ಲಿ ಕನ್ನಡ ವಿರೋಧಿ ಘೋಷಣೆಗಳಿಗೆ ಬ್ರೇಕ್ ಹಾಕಲಾಗುವುದು ಎಂದು ಹೇಳಿದ್ದರು.

ಇವರ ಹೇಳಿಕೆಯನ್ನು ವಿರೋಧಿಸಿ, ಶಿವಸೇನೆ ಪ್ರತಿಭಟನೆಗೆ ಇಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+