Diesel Rate Hike: ‘ಶೆಲ್ ಬಂಕ್’ನಲ್ಲಿ ಡೀಸೆಲ್ ದರ ಒಂದೇ ವಾರದಲ್ಲಿ 20 ರೂ.ಹೆಚ್ಚಳ!
ನವದೆಹಲಿ, ಅಕ್ಟೋಬರ್ 05: ಭಾರತದಲ್ಲಿ ಶೆಲ್ ಕಂಪನಿಯ ಡೀಸೆಲ್ ದರವನ್ನು ಒಂದೇ ವಾರದಲ್ಲಿ 20 ರೂ. ಹೆಚ್ಚಿಸಿದೆ. ಇದಾದ ನಂತರ ಮುಂಬೈನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 135 ರೂ.ಗೆ ತಲುಪಿದೆ.
ಹೌದು, ಸರ್ಕಾರಿ ಬಂಕ್ ಗಳಲ್ಲಿ ಹೆಚ್ಚಳವಾಗದ ಡೀಸೆಲ್ ಬೆಲೆ ಮಾತ್ರ, ಖಾಸಗಿ ಶೆಲ್ ಬಂಕ್ ಗಳಲ್ಲಿ ಒಂದೇ ವಾರದಲ್ಲಿ ರೂ.20 ಹೆಚ್ಚಳ ಮಾಡಲಾಗಿದೆ. ಈ ಮೂಲಕ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದಂತಾಗಿದೆ. ಅಲ್ಲದೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್ ಗೆ 90 ಡಾಲರ್ ಗೆ ಏರಿಕೆಯಾಗಿರುವ ಹಿನ್ನಲೆಯಲ್ಲಿ, ಖಾಸಗಿ ವಲಯದ ಶೆಲ್ ಬಂಕ್ ನಲ್ಲಿ ಡೀಸೆಲ್, ಪೆಟ್ರೋಲ್ ದರ ಹೆಚ್ಚಳ ಮಾಡಲಾಗಿದೆ.

ಶೆಲ್ ಬಂಕ್ ಗಳಲ್ಲಿ ಕೇವಲ ಒಂದು ವಾರದಲ್ಲೇ ಪ್ರತಿ ಲೀಟರ್ ಡೀಸೆಲ್ ಗೆ ಬರೋಬ್ಬರಿ 20 ರೂ.ನಷ್ಟು ಹೆಚ್ಚಳ ಮಾಡಿ, ಡೀಸೆಲ್ ವಾಹನ ಸವಾರರಿಗೆ ಬಿಗ್ ಶಾಕ್ ನೀಡಲಾಗಿದೆ. ರೂ.20ರಷ್ಟು ಡೀಸೆಲ್ ಹೆಚ್ಚಳ ಮಾಡಿದ ಕಾರಣ ಶೆಲ್ ಬಂಕ್ ಗಳಲ್ಲಿ ಬೆಂಗಳೂರಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.122 ತಲುಪಿದ್ರೇ, ಮುಂಬೈನಲ್ಲಿ ರೂ.130, ಚೈನ್ನೈನಲ್ಲಿ ರೂ.129ರಷ್ಟು ತಲುಪಿದೆ.
ಇನ್ನೂ ಶೆಲ್ ಪೆಟ್ರೋಲ್ ಪಂಪ್‌ನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 117-118 ರೂ. ಇದೆ. ಶೆಲ್ ಪೆಟ್ರೋಲ್ ಪಂಪ್‌ಗಳಲ್ಲಿ ಡೀಸೆಲ್ ಬೆಲೆಯಲ್ಲಿ ಲೀಟರ್‌ಗೆ ಇನ್ನೂ ನಾಲ್ಕು ರೂಪಾಯಿ ಹೆಚ್ಚಳವಾಗಲಿದೆ ಎಂದು ವಿತರಕರು ಹೇಳುತ್ತಾರೆ. ಇದೇ ವೇಳೆ ಮುಂಬೈನಲ್ಲಿ ಗುರುವಾರ ಡೀಸೆಲ್ ಬೆಲೆ ಲೀಟರ್ ಗೆ 134 ರೂ.ಗೆ ಮಾರಾಟವಾಗುತ್ತಿದೆ. ಖಾಸಗಿ ವಲಯದ ಶೆಲ್ ಬಂಕ್ ನಲ್ಲಿ ದರ ಹೆಚ್ಚಳ ಮಾಡಲಾಗಿದೆಯೇ ವಿನಹ, ಸರ್ಕಾರಿ ಬಂಕ್ ಗಳಲ್ಲಿ ಸತತ 18ನೇ ತಿಂಗಳು ಕೂಡ ದರ ಏರಿಕೆ ಮಾಡಿಲ್ಲ. ಹೀಗಾಗಿ ಬೆಂಗಳೂರಿನ ಸರ್ಕಾರಿ ಬಂಕ್ ಗಳಲ್ಲಿ ಪ್ರತಿ ಲೀಟರ್ ಡೀಸೆಲ್ ದರ ರೂ.87.99ರಷ್ಟಿದೆ.












Click it and Unblock the Notifications