ವಾರಣಾಸಿ ಕ್ಷೇತ್ರದಲ್ಲಿ ಪ್ರಧಾನಿ ಮೋದಿಗೆ ಹಿನ್ನಡೆ: ಷೇರು ಮಾರುಕಟ್ಟೆಯಲ್ಲಿ ‘ರಕ್ತಪಾತ’
ಪ್ರಧಾನಿ ನರೇಂದ್ರ ಮೋದಿ ಅವರು 2024ರ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದ್ದು, ಷೇರು ಮಾರುಕಟ್ಟೆಯಲ್ಲಿ ಈ ಸುದ್ದಿ ತಲ್ಲಣ ಸೃಷ್ಟಿ ಮಾಡಿದೆ. ಈ ಮೂಲಕ ಷೇರುಪೇಟೆ ಭಾರಿ ದೊಡ್ಡ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. ಬೆಳಗ್ಗೆಯಿಂದ ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆದಾರರ ಹಣ ಕರಗಿ ಹೋಗಿದ್ದು, ಬಿಜೆಪಿ ಮುನ್ನಡೆ ಕಾಯ್ದುಕೊಂಡಿರುವ ಸ್ಥಾನಗಳ ಸಂಖ್ಯೆ ಕಡಿಮೆ ಆದಂತೆ ಷೇರು ಪೇಟೆ ನಲುಗಿ ಹೋಗುತ್ತಿದೆ.
ಏಪ್ರಿಲ್ 19 ರಿಂದ ಜೂನ್ 1ರ ತನಕ 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದು ಇಂದು (ಜೂನ್ 4) ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ & ಕಾಂಗ್ರೆಸ್‌ನ ನೇತೃತ್ವದ ಇಂಡಿಯಾ ಒಕ್ಕೂಟ ನಡುವಿನ ಸೆಣಸಾಟಕ್ಕೆ ಅಂತಿಮ ತೆರೆ ಇಂದು ಸಿಗಲಿದೆ. ದೇಶದ ಅಧಿಕಾರ ಚುಕ್ಕಾಣಿ ಹಿಡಿದು ಹ್ಯಾಟ್ರಿಕ್ ಬಾರಿಸಲು ಪ್ರಧಾನಿ ಮೋದಿ ಅವರು ಸಜ್ಜಾಗಿದ್ದರು. ಆದರೆ ಈ ಸಮಯದಲ್ಲೇ ಪ್ರಧಾನಿ ಮೋದಿ ಅವರಿಗೆ ವಾರಣಸಿ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಈ ಸುದ್ದಿ ಷೇರು ಮಾರುಕಟ್ಟೆ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬೀರಿದೆ. ಹಾಗಾದ್ರೆ ಈ ರೀತಿ ಷೇರು ಮಾರುಕಟ್ಟೆ ಬಿದ್ದಿದ್ದಕ್ಕೆ ಎಷ್ಟು ನಷ್ಟವಾಗಿದೆ ಗೊತ್ತೆ? ಮುಂದೆ ಓದಿ.

2000 ಅಂಕ ಕುಸಿದ ಸೆನ್ಸೆಕ್ಸ್!
ಭಾರತೀಯ ಷೇರು ಮಾರುಕಟ್ಟೆಯ ಹೃದಯ ಎಂದು ಕರೆಯಲಾಗುವ ಸೆನ್ಸೆಕ್ಸ್ ಭಾರಿ ಕುಸಿತ ಕಂಡಿದೆ. ಆರಂಭದಲ್ಲಿ ಷೇರು ಮಾರುಕಟ್ಟೆಯ ಎಲ್ಲಾ ಸೂಚ್ಯಂಕಗಳು ಕುಸಿತ ಕಂಡಿದ್ದವು. ಆ ನಂತರ ಸೆನ್ಸೆಕ್ಸ್ ಕೂಡ 2000 ಪಾಯಿಂಟ್ಸ್ ಕುಸಿತ ಕಂಡಿತ್ತು. ಆ ನಂತರ ಒಂದಷ್ಟು ಚೇತರಿಕೆ ಕಂಡಿವೆ. ನಿಫ್ಟಿ-50 ಕೂಡ ಸುಮಾರು 700 ಅಂಕ ಕುಸಿತ ಕಂಡು ನಂತರ ಚೇತರಿಕೆ ಕಂಡಿದೆ.
6000 ಮತಗಳಿಂದ ಹಿನ್ನಡೆ
ಪ್ರಧಾನಿ ಮೋದಿ ಅವರು ಸುಮಾರು 6000ಕ್ಕೂ ಹೆಚ್ಚು ಮತಗಳ ಅಂತರದಿಂದ ಹಿನ್ನಡೆಯ ಅನುಭವಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಕಾಂಗ್ರೆಸ್ ಅಭ್ಯರ್ಥಿಯಾದ ಅಜಯ್ ರೈ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಮೂಲಕ ವಾರಣಸಿ ಕ್ಷೇತ್ರದಲ್ಲಿ ದೊಡ್ಡ ಮಟ್ಟಿಗೆ ಫೈಟಿಂಗ್ ಇದ್ದು, ಮುಂದಿನ ಹಂತದ ಮತ ಎಣಿಕೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಮುನ್ನಡೆ ಸಿಗುವ ನಿರೀಕ್ಷೆ ಇದೆ. ಹೀಗಾಗಿ 2024 ರಲ್ಲಿ ಕೂಡ ವಾರಣಸಿ ಲೋಕಸಭಾ ಕ್ಷೇತ್ರ ಈಗ ಗಮನ ಸೆಳೆದಿದ್ದು, ಇಡೀ ದೇಶದ ಗಮನ ವಾರಣಸಿ ಫಲಿತಾಂಶದ ಮೇಲೆ ನೆಟ್ಟಿದೆ.












Click it and Unblock the Notifications