ಶರದ್ ಯಾದವ್ ರಾಜ್ಯಸಭಾ ಸದಸ್ಯತ್ವ ಅನರ್ಹಗೊಳಿಸಿದ ನಾಯ್ಡು
ರಾಜ್ ಕೋಟ್, ಡಿಸೆಬರ್ 05: ಜೆಡಿಯು ಪಕ್ಷದ ಬಂಡಾಯ ಸಂಸದರಾದ ಶರದ್ ಯಾದವ್ ಮತ್ತು ಅಲಿ ಅನ್ವರ್ ಅವರ ರಾಜ್ಯಸಭಾ ಸದಸ್ಯತ್ವವನ್ನು ಡಿ.4 ರಾತ್ರಿಯಿಂದಲೇ ಜಾರಿಗೆ ಬರುವಂತೆ, ಅನರ್ಹಗೊಳಿಸಲಾಗಿದೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ರಅಜ್ಯ ಸಭೆಯ ಮುಖ್ಯಸ್ಥರೂ ಆಗಿರುವುದರಿಂದ ಅವರೇ ಈ ಆದೇಶವನ್ನು ಹೊರಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಅಲಿ ಅನ್ವರ್, 'ನಾನು ಸಭೆಯೊದರಲ್ಲಿ ಭಾಗವಹಿಸಿದ್ದ ಸಮಯದಲ್ಲಿ ಈ ವಿಷಯ ತಿಳಿಯಿತು. ಈ ಕುರಿತು ಶರದ್ ಯಾದವ್ ಅವರೊಂದಿಗೆ ಚರ್ಚಿಸಿ, ನಮ್ಮ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ' ಎಂದರು.
ಪಕ್ಷ ವಿರೋಧಿ ಚಟುವಟಿಕೆ ಮತ್ತು ವಿಪಕ್ಷಗಳ ಕಾರ್ಯಕ್ರಮಗಳಲ್ಲಿ ನಿರಂತರ ಹಾಜರಾಗಿ, ತಮ್ಮ ಮಾತೃಪಕ್ಷಕ್ಕೆ ದ್ರೋಹ ಬಗೆಯುತ್ತಿದ್ದಾರೆಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.












Click it and Unblock the Notifications