ಶಿವಸೇನೆ ವಿಚಾರದಲ್ಲಿ ಚುನಾವಣಾ ಆಯೋಗದ ನಿರ್ಧಾರ ನಿರಾಕರಿಸಿದ ಶರದ್ ಪಾವರ್!

ಶಿವಸೇನೆ ವಿಚಾರದಲ್ಲಿ ಚುನಾವಣಾ ಆಯೋಗದ ನಿರ್ಧಾರಕ್ಕೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬೈ ಫೆಬ್ರವರಿ 22: ಶಿವಸೇನಾ ಪಕ್ಷದ ಉಸ್ತುವಾರಿಯನ್ನು ಉದ್ದವ್ ಠಾಕ್ರೆ ವಹಿಸಬೇಕೆಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಒತ್ತಾಯಿಸಿದ್ದಾರೆ. ಚುನಾವಣಾ ಆಯೋಗವು ಶಿವಸೇನೆ ಹೆಸರು ಮತ್ತು ಪಕ್ಷದ ಬಿಲ್ಲು-ಬಾಣದ ಚಿಹ್ನೆಯನ್ನು ಏಕನಾಥ್ ಶಿಂಧೆ ಬಣಕ್ಕೆ ಹಂಚಿಕೆ ಮಾಡಿದ್ದನ್ನು ಶರದ್ ಪವಾರ್ ನಿರಾಕರಿಸಿದ್ದಾರೆ. ಶಿವಸೇನೆ ಮತ್ತು ಚಿಹ್ನೆಯನ್ನು ಏಕನಾಥ್ ಶಿಂಧೆಗೆ ನೀಡಿದ ಕೆಲವು ದಿನಗಳ ನಂತರ ಹಿರಿಯ ರಾಜಕಾರಣಿ ಪವಾರ್ ಈ ಹೇಳಿಕೆ ನೀಡಿದ್ದಾರೆ.

ಈ ಪ್ರಕರಣದಲ್ಲಿ ಚುನಾವಣಾ ಆಯೋಗದ ನಿರ್ಧಾರವನ್ನು ಪವಾರ್ "ರಾಜಕೀಯ ಪಕ್ಷಗಳ ಮೇಲಿನ ದೊಡ್ಡ ದಾಳಿ" ಎಂದು ಕರೆದಿದ್ದಾರೆ. "ತಮ್ಮ ಕೊನೆಯ ದಿನಗಳಲ್ಲಿ, ಬಾಳಾಸಾಹೇಬ್ ಠಾಕ್ರೆ ಅವರು ಶಿವಸೇನೆಯ ಜವಾಬ್ದಾರಿಯನ್ನು ತಮ್ಮ ನಂತರ ಉದ್ಧವ್ ಠಾಕ್ರೆ ಅವರಿಗೆ ನೀಡಬೇಕು ಎಂದಿದ್ದರು" ಎಂದು ಪವಾರ್ ಹೇಳಿದರು.

ಕೇಂದ್ರದ ವಿರುದ್ಧ ಪಾವರ್ ವಾಗ್ದಾಳಿ

ಕೇಂದ್ರದ ವಿರುದ್ಧ ಪಾವರ್ ವಾಗ್ದಾಳಿ

"ಆದರೆ ಚುನಾವಣಾ ಆಯೋಗ ತೀರ್ಪು ನೀಡಿ ಶಿವಸೇನೆ ಮತ್ತು ಅದರ ಚಿಹ್ನೆಯನ್ನು ಬೇರೆಯವರಿಗೆ ಹಂಚಿಕೆ ಮಾಡಿದೆ. ಇದು ರಾಜಕೀಯ ಪಕ್ಷಗಳ ಮೇಲೆ ದೊಡ್ಡ ದಾಳಿಯಾಗಿದೆ" ಎಂದು ಅವರು ಕಿಡಿ ಕಾರಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಪವಾರ್, 'ಇಂದು ಚುನಾವಣಾ ಆಯೋಗ ಮತ್ತು ಇತರ ಸಂಘಟನೆಗಳು ಆಡಳಿತಾರೂಢ ಸರ್ಕಾರಕ್ಕೆ ಬೇಕಾದ ನಿರ್ಧಾರಗಳನ್ನು ನೀಡುತ್ತಿವೆ, ಇಂದು ಮೋದಿ ನೇತೃತ್ವದಲ್ಲಿ ದೇಶದಲ್ಲಿ ಸಂಘಟನೆಗಳು ಕೆಲಸ ಮಾಡುತ್ತಿವೆ' ಎಂದು ಕಿಡಿ ಕಾರಿದರು.

ಹೊಸ ಚಿಹ್ನೆಯನ್ನು ಘೋಷಿಸಿ ಎಂದು ಪಾವರ್ ಸಲಹೆ

ಹೊಸ ಚಿಹ್ನೆಯನ್ನು ಘೋಷಿಸಿ ಎಂದು ಪಾವರ್ ಸಲಹೆ

ಅವರು ಇಡಿಯನ್ನು ಬಿಜೆಪಿಯ ಏಜೆಂಟ್ ಎಂದು ಕರೆದರು. ಬಳಿಕ ಉದ್ಧವ್ ಠಾಕ್ರೆಗೆ ಶರದ್ ಪಾವರ್ ಸಲಹೆಯನ್ನು ನೀಡಿದ್ದಾರೆ. ಭಾರತದ ಚುನಾವಣಾ ಆಯೋಗ ಶಿವಸೇನೆ ಹೆಸರು ಮತ್ತು ಪಕ್ಷದ 'ಬಿಲ್ಲು ಮತ್ತು ಬಾಣ' ಚಿಹ್ನೆಯನ್ನು ಏಕನಾಥ್ ಶಿಂಧೆ ಅವರ ಬಣಕ್ಕೆ ಹಂಚಿಕೆ ಮಾಡಿದ ನಂತರ, ಶರದ್ ಪವಾರ್ ಚುನಾವಣಾ ಸಂಸ್ಥೆಯ ನಿರ್ಧಾರವನ್ನು ಅಂಗೀಕರಿಸಿ ಹೊಸ ಚಿಹ್ನೆಯನ್ನು ತೆಗೆದುಕೊಳ್ಳುವಂತೆ ಉದ್ಧವ್ ಠಾಕ್ರೆ ಅವರಿಗೆ ಸಲಹೆ ನೀಡಿದರು.

ಚಿಹ್ನೆಯಿಂದ ಯಾವ ನಷ್ಟವಿಲ್ಲ

ಚಿಹ್ನೆಯಿಂದ ಯಾವ ನಷ್ಟವಿಲ್ಲ

ಇದು ಚುನಾವಣಾ ಆಯೋಗದ ನಿರ್ಧಾರ. ಒಮ್ಮೆ ನಿರ್ಧಾರ ನೀಡಿದ ನಂತರ ಚರ್ಚೆ ನಡೆಸುವಂತಿಲ್ಲ. ಅದನ್ನು ಸ್ವೀಕರಿಸಿ ಮತ್ತು ಹೊಸ ಚಿಹ್ನೆಯನ್ನು ತೆಗೆದುಕೊಳ್ಳಿ. ಇದು [ಹಳೆಯ ಚಿಹ್ನೆಯ ನಷ್ಟ] ಯಾವುದೇ ಪ್ರಮುಖ ಪರಿಣಾಮವನ್ನು ಬೀರುವುದಿಲ್ಲ. ಏಕೆಂದರೆ ಜನರು ಹೊಸ ಚಿಹ್ನೆಯನ್ನು ಸ್ವೀಕರಿಸುತ್ತಾರೆ"ಎಂದು ಪವಾರ್ ಉದ್ಧವ್ ಠಾಕ್ರೆಗೆ ಸೂಚನೆ ನೀಡಿದರು.

 ಜನರು ಉದ್ಧವ್ ಠಾಕ್ರೆಯ ಹೊಸ ಚಿಹ್ನೆ ಸ್ವೀಕರಿಸುತ್ತಾರೆ- ಪಾವರ್

ಜನರು ಉದ್ಧವ್ ಠಾಕ್ರೆಯ ಹೊಸ ಚಿಹ್ನೆ ಸ್ವೀಕರಿಸುತ್ತಾರೆ- ಪಾವರ್

ಪಕ್ಷದ ಚಿಹ್ನೆಯ ಬದಲಾವಣೆಯು ಜನರ ಮೇಲೆ ಹೇಗೆ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್‌ನ ಉದಾಹರಣೆಯನ್ನು ಪವಾರ್ ಉಲ್ಲೇಖಿಸಿದ್ದರು. "ಕಾಂಗ್ರೆಸ್ ಹಿಂದೆ 'ಎರಡು ಎತ್ತುಗಳು' ಚಿಹ್ನೆಯನ್ನು ಹೊಂದಿತ್ತು, ನಂತರ ಅವರು 'ಕೈ' ಅನ್ನು ಹೊಸ ಚಿಹ್ನೆಯಾಗಿ ಸ್ವೀಕರಿಸಿದರು ಮತ್ತು ಜನರು ಅದನ್ನು ಒಪ್ಪಿಕೊಂಡರು. ಹಾಗೆಯೇ, ಜನರು ಹೊಸ ಚಿಹ್ನೆಯನ್ನು [ಉದ್ಧವ್ ಠಾಕ್ರೆ ಬಣದ] ಸ್ವೀಕರಿಸುತ್ತಾರೆ" ಎಂದು ಹಿರಿಯ ರಾಜಕಾರಣಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+