ಶರದ್ ಪವಾರ್ ಪಕ್ಷದಲ್ಲಿ ಎದುರಾಯ್ತಾ ಬಿರುಕು?
ಮುಂಬೈ: ಶರದ್ ಪವಾರ್ ಅತ್ತ ರಾಹುಲ್ ಗಾಂಧಿ ಜೊತೆ ಕೈಜೋಡಿಸಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಇನ್ನೊಂದೆಡೆ ಅವರದ್ದೇ ಪಕ್ಷದ ಹಿರಿಯ ಮುಖಂಡ ಅಜಿತ್ ಪವಾರ್ (ajit pawar) ಬಿಜೆಪಿಗೆ ಜಂಪ್ ಆಗುವ ಮುನ್ಸೂಚನೆ ಸಿಕ್ಕಿದೆ. ಇದು ಶರದ್ ಪವಾರ್‌ಗೆ ಮಾತ್ರವಲ್ಲ (sharad pawar) ಮಹಾರಾಷ್ಟ್ರದ ವಿಪಕ್ಷಗಳಗೂ ಶಾಕ್ ಕೊಟ್ಟಿದೆ.
4 ಬಾರಿ ಉಪ ಮುಖ್ಯಮಂತ್ರಿ ಸ್ಥಾನ ಪಡೆದಿದ್ದ 63 ವರ್ಷದ ಅಜಿತ್ ಪವಾರ್, ಮಹಾರಾಷ್ಟ್ರ ವಿಧಾನಸಭೆಯ ವಿರೋಧಪಕ್ಷದ ನಾಯಕನೂ ಹೌದು. ಆದರೆ ಅಜಿತ್ ಪವಾರ್ ದಿಢೀರ್ ಎನ್‌ಸಿಪಿ ಶಾಸಕರ ಸಭೆ ಕರೆದು, ಸಹಿ ಸಂಗ್ರಹಕ್ಕೆ ಯತ್ನಿಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಮೂಲಕ ಮಹಾರಾಷ್ಟ್ರದ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆ ಎನ್ನಲಾಗಿತ್ತು. ಹೀಗಾಗಿ ಅಜಿತ್ ಪವಾರ್ ಸಂಗತಿ ಎನ್‌ಸಿಪಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಮಾಡಿದೆ.

'ಸಭೆ ನಡೆಸಿಲ್ಲ, ಸಹಿ ಪಡೆದಿಲ್ಲ'
ಇನ್ನು ತಾವು ಎನ್‌ಸಿಪಿ ತೊರೆದು ಬಿಜೆಪಿ ಸೇರುವ ಬಗ್ಗೆ ಅಜಿತ್ ಪವಾರ್ ಸ್ಪಷ್ಟನೆ ನೀಡಿದ್ದಾರೆ. 'ಮಾಧ್ಯಮಗಳು ವಿನಾಕಾರಣ ವದಂತಿ ಹರಡುತ್ತಿವೆ' ಎಂದು ಆರೋಪ ಮಾಡಿದ್ದಾರೆ. ಹಾಗೇ 'ವದಂತಿಯಲ್ಲಿ ಹುರುಳಿಲ್ಲ, ನಾನು ಎನ್‌ಸಿಪಿಯಲ್ಲಿ ಇದ್ದೇನೆ ಮತ್ತು ಇದೇ ಪಕ್ಷದಲ್ಲೇ ಉಳಿಯುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದು ಕಡೆ ಎನ್‌ಸಿಪಿ ಕಾರ್ಯಕರ್ತರು ಈ ಬಗ್ಗೆ ಗೊಂದಲಕ್ಕೆ ಒಳಗಾಗುವ ಅಗತ್ಯತೆ ಇಲ್ಲ' ಎಂದು ಖಡಕ್ ಆಗಿ ತಿಳಿಸಿದ್ದಾರೆ.
ಒಗ್ಗಟ್ಟಿನ ಮಂತ್ರ ಜಪಿಸಿದ್ದ ಶರದ್!
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಕೆಲ ದಿನಗಳ ಹಿಂದೆ ಭೇಟಿಯಾಗಿದ್ದರು. ಈ ವೇಳೆ ಕೇಂದ್ರದಲ್ಲಿ ವಿರೋಧ ಪಕ್ಷಗಳ ಮಧ್ಯೆ ಒಗ್ಗಟ್ಟು ಮೂಡಿಸುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಹೀಗೆ ಶರದ್ ಪವಾರ್ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಕೆಲವೇ ದಿನಗಳು ಕಳೆದಿವೆ ಅಷ್ಟೇ, ಅಷ್ಟರಲ್ಲಿ ಅಜಿತ್ ಪವಾರ್ ಎನ್‌ಸಿಪಿ ಬಿಟ್ಟು ಬಿಜೆಪಿ ಸೇರುವ ಬಗ್ಗೆ ಊಹಾಪೋಹ ಶುರುವಾಗಿದೆ.

ಅದಾನಿ ವಿಚಾರದಲ್ಲಿ ಪವಾರ್ ಸದ್ದು
ಅಂದಹಾಗೆ ಅದಾನಿ ಸಮೂಹ ಸಂಸ್ಥೆಗಳ ವಿಚಾರದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ಜತೆ ಭಿನ್ನ ನಿಲುವು ಹೊಂದಿರುವ ಶರದ್ ಪವಾರ್, ತಮ್ಮ ಆತ್ಮಚರಿತ್ರೆಯಲ್ಲಿ ಗೌತಮ್ ಅದಾನಿಯನ್ನು ಹಾಡಿ ಹೊಗಳಿದ್ದರು. ಈ ವಿಚಾರ ಕಾಂಗ್ರೆಸ್ ನಾಯಕರಿಗೆ ಭಾರಿ ಮುಜುಗರ ತರಿಸಿತ್ತು. ಮರಾಠಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಶರದ್ ಪವಾರ್ ಆತ್ಮಚರಿತ್ರೆ 'ಲೋಕ್ ಮಜೆ ಸಂಗತಿ'ಯಲ್ಲಿ ಗೌತಮ್ ಅದಾನಿ ಒಬ್ಬ ಕಠಿಣ ಪರಿಶ್ರಮಿ, ಸರಳ ಹಾಗೂ ಸಹಜ ವ್ಯಕ್ತಿ ಎಂದು ಬಣ್ಣಿಸಿದ್ದರು ಶರದ್ ಪವಾರ್. ಈ ವಿಚಾರ ಎಲ್ಲೆಲ್ಲೂ ಸದ್ದು ಮಾಡಿದ ನಂತರ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಿ ಶರದ್ ಪವಾರ್ ಸದ್ದು ಮಾಡಿದ್ದರು.
2019ರಲ್ಲಿ ಬಿಜೆಪಿಗೆ ಅಜಿತ್ ಸಾಥ್!
ಈಗ ಇಂತಹ ಊಹಾಪೋಹ ಅಜಿತ್ ಪವಾರ್ ವಿಚಾರದಲ್ಲಿ ಹುಟ್ಟಿಕೊಳ್ಳಲು ಬಲವಾದ ಕಾರಣವಿದೆ. ಏಕೆಂದರೆ 2019ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಮುಖ್ಯಮಂತ್ರಿ ಸ್ಥಾನ ಹಂಚಿಕೆ ವಿಚಾರವಾಗಿ ಶಿವಸೇನೆ ಮತ್ತು ಬಿಜೆಪಿ ನಡುವೆ ಸಂಘರ್ಷ ಶುರುವಾಗಿತ್ತು. ಉದ್ಧವ್ ಠಾಕ್ರೆ ಎನ್‌ಡಿಎಗೆ ಗುಡ್‌ಬೈ ಹೇಳಿ ಬೇರೆ ದಾರಿ ಹಿಡಿದರು. ಈ ವೇಳೆ ಬಿಜೆಪಿಯ ದೇವೇಂದ್ರ ಫಡ್ನವಿಸ್ ಜೊತೆ ಸೇರಿದ್ದರು ಅಜಿತ್ ಪವಾರ್. ಅಲ್ಲದೆ ಕೆಲವು ಶಾಸಕರ ಸಹಿ ಕೂಡ ಸಂಗ್ರಹಿಸಿದ್ದರು.

ಸರ್ಕಾರ ರಚಿಸಲು ಸಖತ್ ಸರ್ಕಸ್
ಹೀಗೆ ಅಜಿತ್ ಪವಾರ್ ಎನ್‌ಸಿಪಿ ಶಾಸಕರ ಸಹಿ ಸಂಗ್ರಹಿಸುವ ಜೊತೆಗೆ ಬಿಜೆಪಿ-ಎನ್‌ಸಿಪಿ ಸರ್ಕಾರ ರಚನೆಗೆ ಮುಂದಾಗಿದ್ದರು. ಆದರೆ ಈ ಮೈತ್ರಿ ಸರ್ಕಾರ 80 ಗಂಟೆ ಕಳೆಯುವ ಮೊದಲೇ ಮರೆಯಾಗಿ ಹೋಗಿತ್ತು. ಇನ್ನೊಂದು ಕಡೆ ಉದ್ಧವ್ ಠಾಕ್ರೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಜತೆಗೂಡಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. ಅಗ ಎನ್‌ಸಿಪಿಗೆ ಮರಳಿ ಬಂದಿದ್ದ ಅಜಿತ್ ಪವಾರ್, ಡಿಸಿಎಂ ಹುದ್ದೆಯನ್ನೂ ಮತ್ತೆ ಗಿಟ್ಟಿಸಿಕೊಂಡರು. ಇಷ್ಟೆಲ್ಲಾ ಬೆಳವಣಿಗೆ ನಡೆದಿದ್ದ ಕಾರಣಕ್ಕೆ ಮತ್ತೆ ಅನುಮಾನ ಮೂಡಿದೆ.
-
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ












Click it and Unblock the Notifications