Shani Jayanti 2024: ಶನಿ ದೋಷ ನಿವಾರಣೆಗೆ ಶನಿ ಜಯಂತಿಯಂದು ಈ ಪೂಜೆ ಮಾಡಿ..!
ಒಂಬತ್ತು ಗ್ರಹಗಳಲ್ಲಿ ಶನಿ ದೇವರಿಗೆ ವಿಶೇಷ ಸ್ಥಾನವಿದೆ. ಯಾಕೆಂದರೆ ಶನಿಯು ಅವರವರ ಕರ್ಮಗಳಿಗನುಸಾರ ಫಲಿತಾಂಶವನ್ನು ನೀಡುತ್ತದೆ. ಶನಿಗೆ ಇಷ್ಟವಾಗುವ ವ್ಯಕ್ತಿ ಸದಾ ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾನೆ ಎಂದು ನಂಬಲಾಗುತ್ತದೆ.
ಮತ್ತೊಂದೆಡೆ ಶನಿಯು ಕೋಪಗೊಂಡಿದ್ದರೆ ರಾಜನು ಸಹ ಬಡವನಾಗಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಳ್ಳಬಹುದು. ಹೀಗಾಗಿ ಶನಿ ದೋಷ ನಿವಾರಣೆಗೆ ಶನಿ ಜಯಂತಿಯಂದು ವಿಶೇಷ ಪೂಜೆ ಮಾಡಲಾಗುತ್ತದೆ. ಹಾಗಾದರೆ ಶನಿ ಜಯಂತಿ ಯಾವಾಗಾ? ಆಚರಣೆ ಹೇಗೆ ಮಾಡಬೇಕು ತಿಳಿಯೋಣ.

ಶನಿ ಜಯಂತಿಯು ಶನಿ ದೇವರ ಜನ್ಮದಿನವನ್ನು ಸೂಚಿಸುವ ಮಂಗಳಕರ ದಿನವಾಗಿದೆ. ಆತನ ಅನುಗ್ರಹವನ್ನು ಬಯಸುವ ಭಕ್ತರಿಗೆ ಇದು ಪ್ರಮುಖ ದಿನವಾಗಿದೆ. ಇದು ಸಾಮಾನ್ಯವಾಗಿ ಮೇ ಅಥವಾ ಜೂನ್‌ನಲ್ಲಿ ಬರುತ್ತದೆ. ಈ ವರ್ಷ ಶನಿ ಜಯಂತಿ ಗುರುವಾರ 6 ಜೂನ್ 2024ರಂದು ಬರುತ್ತದೆ.
ಶನಿ ದೇವರು ಒಬ್ಬರ ಕಾರ್ಯಗಳ ಆಧಾರದ ಮೇಲೆ ನ್ಯಾಯವನ್ನು ನೀಡುತ್ತಾನೆ. ಜೀವನದಲ್ಲಿ ಬರುವ ಅಡೆತಡೆಗಳಿಂದ ರಕ್ಷಿಸಿ ಸುಖ: ಜೀವನಕ್ಕಾಗಿ ಭಕ್ತರು ಶನಿ ದೇವರನ್ನು ಪೂಜಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯ ಪ್ರಭಾವ ಬಹಳಷ್ಟಿದೆ.

ಶನಿ ಜಯಂತಿಯು ಶನಿಯನ್ನು ಸಮಾಧಾನಪಡಿಸಲು ಮತ್ತು ಜಾತಕದಲ್ಲಿ ಶನಿಯ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಪ್ರಬಲ ಸಮಯ ಎಂದು ನಂಬಲಾಗಿದೆ. ಹಾಗಾದರೆ ಶನಿ ಜಯಂತಿಯಂದು ಏನು ಮಾಡಬೇಕು? ಇದರಿಂದ ಏನೆಲ್ಲಾ ಲಾಭಗಳು ಸಿಗುತ್ತವೆ? ಶನಿದೇವನ ಕೃಪೆಗೆ ಪಾತ್ರರಾಗಲು ಮಾಡಬೇಕಾದ ಪರಿಹಾರಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಶನಿ ಜಯಂತಿ 2024: ದಿನಾಂಕ ಮತ್ತು ಶುಭ ಸಮಯ:-
ವೈಶಾಕ ಮಾಸದ ಅಮವಾಸ್ಯೆ ತಿಥಿಯು ಜೂನ್ 6, 2024 ರಂದು ಬೆಳಿಗ್ಗೆ 10:40ಕ್ಕೆ ಪ್ರಾರಂಭವಾಗುತ್ತದೆ. ಇದು ಜೂನ್ 7ರಂದು ಬುಧವಾರ ಬೆಳಿಗ್ಗೆ 08:52ಕ್ಕೆ ಕೊನೆಗೊಳ್ಳುತ್ತದೆ.
ಶನಿ ಜಯಂತಿ 2024ರ ಆಚರಣೆ:-
1. ಶನಿ ಜಯಂತಿಯಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಉಪವಾಸ ಮಾಡಿ ಪೂಜೆ ಮಾಡಿ. ಇದರ ನಂತರ ಭಗವಾನ್ ಸೂರ್ಯನಿಗೆ ಅರ್ಚನೆಯನ್ನು ಮಾಡಿ.
2. ನಿಮ್ಮ ಮನೆಯ ಹತ್ತಿರ ದೇವಸ್ಥಾನವಿದ್ದರೆ ಅಲ್ಲಿಗೆ ಹೋಗಿ ಶನಿ ದೇವರಿಗೆ ಸಾಸಿವೆ ಎಣ್ಣೆಯಿಂದ ದೀಪ ಹಚ್ಚಿ. ನೀರಿಗೆ ನೀಲಿ ಹೂವುಗಳು ಮತ್ತು ಕಪ್ಪು ಎಳ್ಳನ್ನು ಹಾಕಿ ಶನಿ ದೇವರಿಗೆ ಅರ್ಪಿಸಿ.
3. ನಂತರ ಶನಿ ದೇವರ ಮಂತ್ರಗಳನ್ನು ಪಠಿಸಿ. ಈ ದಿನ ಹನುಮಾನ್ ಚಾಲೀಸಾವನ್ನು ಕೂಡ ಪಠಿಸಬಹುದು.
4. ಹೀಗೆ ಪೂಜೆ ಮಾಡಿದ ನಂತರ ಶನಿ ದೇವರಿಗೆ ಆರತಿಯನ್ನು ಮಾಡಿ. ಶ್ರದ್ಧೆ ಭಕ್ತಿಯಿಂದ ಶನಿಯನ್ನು ಪೂಜಿಸಿದರೆ ಸಾಕಷ್ಟು ಪ್ರಯೋಜನಗಳು ಪಡೆಯಬಹುದಾಗಿದೆ.
ಶನಿ ಜಯಂತಿಯ ಮಹತ್ವ:-
ಶನಿ ಜಯಂತಿಯಂದು ಉಪವಾಸ ಮತ್ತು ಪೂಜೆ ಮಾಡುವುದರಿಂದ ಶನಿ ದೇವರ ವಿಶೇಷ ಅನುಗ್ರಹ ದೊರೆಯುತ್ತದೆ. ಜಾತಕದಲ್ಲಿ ಶನಿ ದೋಷ ಕಡಿಮೆಯಾಗಲು ಈ ದಿನ ಪೂಜೆ ಮಾಡಬೇಕು. ಶನಿ ದೇವರನ್ನು ಪೂಜಿಸುವುದರಿಂದ ರಾಹುವಿನ ದೋಷಗಳು ಸಹ ಪರಿಹಾರವಾಗುತ್ತವೆ ಎಂದು ನಂಬಲಾಗಿದೆ. ಇದಲ್ಲದೆ ನಕಾರಾತ್ಮಕತೆಯು ಜೀವನದಿಂದ ದೂರವಿರುತ್ತದೆ.
ಶನಿ ಜಯಂತಿಯಂದು ಈ ಕಾರ್ಯಗಳನ್ನು ಮಾಡಿ-
1. ಎಷ್ಟೇ ಪ್ರಯತ್ನ ಪಟ್ಟರೂ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣದಿದ್ದರೆ ಶನಿ ಜಯಂತಿಯಂದು ಆಲದ ವೃಕ್ಷದ ಮುಂದೆ 9 ಸಾಸಿವೆ ಎಣ್ಣೆಯ ದೀಪಗಳನ್ನು ಹಚ್ಚಿ.
2. ಮಕ್ಕಳ ಸಂತೋಷಕ್ಕಾಗಿ, ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ಶನಿ ದೇವರಿಗೆ ಕಪ್ಪು ಎಳ್ಳನ್ನು ಅರ್ಪಿಸಿ. ಇದರ ಹೊರತಾಗಿ ಸ್ವಾಮಿಯ ಮಂತ್ರಗಳನ್ನು ಪಠಿಸಿ. ಇದು ನಿಮ್ಮ ಆಸೆಗಳನ್ನು ಪೂರೈಸುತ್ತದೆ ಮತ್ತು ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ.
3. ಶನಿ ದೋಷ ನಿವಾರಣೆಗೆ ಶನಿ ಜಯಂತಿಯಂದು ಗಂಗಾಸ್ನಾನ ಮಾಡಿ. ಇದಲ್ಲದೇ ಈ ದಿನ ಬಡವರಿಗೆ ದಾನ ಮಾಡುವ ಮೂಲಕ ಶನಿದೇವನು ಪ್ರಸನ್ನನಾಗುತ್ತಾನೆ.
ಪ್ರಯೋಜನಗಳು:-
ಸೂರ್ಯ ಮತ್ತು ಮಾತಾ ಸಾಯಿದೇವಿಯ ಮಗನಾದ ಶನಿದೇವನು ಕರ್ಮಗಳನ್ನು ಹೋಗಲಾಡಿಸುವನು. ಶನಿ ದೇವರು ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಆಧಾರದ ಮೇಲೆ ಲಾಭವನ್ನು ಕೊಡುತ್ತಾನೆ.
ಶನಿ ಜಯಂತಿಯಂದು ಪೂರ್ಣ ವಿಧಿವಿಧಾನಗಳೊಂದಿಗೆ ಶನಿ ದೇವರನ್ನು ಪೂಜಿಸುವುದರಿಂದ ಕಷ್ಟಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ. ಇದಲ್ಲದೇ ಜಾತಕದಲ್ಲಿ ಶನಿಗೆ ಸಂಬಂಧಿಸಿದ ದೋಷವಿದ್ದಲ್ಲಿ ಶನಿ ಜಯಂತಿಯಂದು ಪೂಜೆ ಮಾಡುವುದರಿಂದ ಉತ್ತಮ ಪ್ರಯೋಜನವಾಗಲಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications