'ತೇಜಪಾಲ್ ಲೈಂಗಿಕ ಪರೀಕ್ಷೆ ಫೇಲಾದ್ರೆ ದುರಂತವೇ ಸರಿ'
ಗೋವಾ, ಡಿ.2-ಅತ್ತ, ತೆಹೆಲ್ಕಾ ಕಾಮಕಾಂಡದಲ್ಲಿ ಆರೋಪಿ ತೇಜಪಾಲ್ ರನ್ನು ಲೈಂಗಿಕ ಸಾಮರ್ಥ್ಯ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿಂದ್ದಂತೆ ವಿವಾದಿತ ಮಹಿಳಾ ಸಾಹಿತಿ ತಸ್ಲೀಮಾ ನಸ್ರೀನ್ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
'ಅಸಾರಾಮ್ ಬಾಪುವೇ 75ರ ಹರಯದಲ್ಲೂ ಲೈಂಗಿಕವಾಗಿ ಸಮರ್ಥ ಎಂಬುದು ದೃಢಪಟ್ಟಿದೆ. ಹಾಗಿರುವಾಗ ತೆಹಲ್ಕಾ 'ತರುಣ' ತೇಜಪಾಲ್ 50ರ ಹರೆಯದಲ್ಲಿ ಲೈಂಗಿಕವಾಗಿ ಅಸಮರ್ಥ ಎಂದು ಸಾಬೀತಾದರೆ ನಿಜಕ್ಕೂ ಅದು ದುರಂತವೇ ಸರಿ' ಎಂದು ತಸ್ಲೀಮಾ ಟ್ವೀಟ್ ಮಾಡಿದ್ದಾರೆ.
Asaram is sexually potent at 75. It would be disaster if Tejpal is not sexually potent at 50.
— taslima nasreen (@taslimanasreen) December 2, 2013 ಮುಂದುವರಿದು ಎರಡನೆಯ ಟ್ವೀಟ್ ಸಹ ಮಾಡಿರುವ ತಸ್ಲೀಮಾ, ಅತ್ಯಾಚಾರ ಎಂಬುದು ಲೈಂಗಿಕ ಸಾಮರ್ಥ್ಯ ಆಧರಿಸುವಂತಹುದಲ್ಲ. ಲೈಂಗಿಕ ಅಸಮರ್ಥ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಬಹುದು. ಆಕೆಯ ಮಾನಭಂಗ ಮಾಡಬಹುದು ಎಂದು ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊದಲು ತೇಜಪಾಲರನ್ನು ಠಾಣೆಗೆ ಕರೆದೊಯ್ದ ಪೊಲೀಸರು ಆ ನಂತರ ಘಟನಾ ಸ್ಥಳಕ್ಕೂ (ಥಿಂಕ್ ಫೆಸ್ಟಿವ್ ನಡೆದ ಹಯಾತ್ ಹೋಟೆಲ್ ) ಕರೆದೊಯ್ದು ವಿಚಾರಣೆ ನಡೆಸಲು ತೀರ್ಮಾನಿಸಿದ್ದಾರೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.
ತೇಜಪಾಲ್ ಗೆ ಲೈಂಗಿಕ ಸಾಮರ್ಥ್ಯ ಪರೀಕ್ಷೆ : ಈ ಮಧ್ಯೆ, ತರುಣ್ ತೇಜಪಾಲರನ್ನು ಗೋವಾ ಪೊಲೀಸರು ಸೋಮವಾರ ಲೈಂಗಿಕ ಸಾಮರ್ಥ್ಯ ಪರೀಕ್ಷೆಗೊಳಪಡಿಸಿದ್ದಾರೆ.ನೂತನ ಅತ್ಯಾಚಾರ ಕಾನೂನು ಅಡಿಯಲ್ಲಿ ತೇಜಪಾಲರನ್ನು ಇಂದು ಗೋವಾದ ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿಗಳ ಮುಂದೆ ಪೊಲೀಸರು ಹಾಜರುಪಡಿಸಿದರು. ಆರೋಪಿ ಲೈಂಗಿಕ ದೌರ್ಜನ್ಯ ಎಸಗಲು ಸಮರ್ಥನೋ, ಇಲ್ವೋ ಎಂಬುದನ್ನು ಆರೋಪಪಟ್ಟಿಯಲ್ಲಿ ದಾಖಲಿಸಬೇಕಾಗಿರುವುದರಿಂದ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ, ಪ್ರಕರಣದ Investigation Officer ಆಗಿ 45 ವರ್ಷದ ಸುನೀತಾ ಸಾವಂತ್ ಎಂಬ ಖಡಕ್ ಮಹಿಳಾ ಆಧಿಕಾರಿ ನಿಯುಕ್ತಿಗೊಂಡಿದ್ದಾರೆ. ಇವರು ಗೋವಾ ಕ್ರೈಂ ಬ್ರಾಂಚ್ ವಿಭಾಗದಲ್ಲಿ ಅತ್ಯಂತ ಕಠಿಣ/ ಕುಶಾಗ್ರಮತಿ ಇನ್ಸ್ ಪೆಕ್ಟರ್ ಎಂಬ ಹೆಸರು ಗಳಿಸಿದ್ದಾರೆ.
ಮಾಜಿ ಪ್ರವಾಸೋದ್ಯಮ ಸಚಿವ, NCP MLA ಮಿಖೆ ಪಚೆಕೊರನ್ನು ಪ್ರಕರಣವೊಂದರಲ್ಲಿ (ನಾಡಿಯಾ ಟೊರ್ರಾಡೊ ಆತ್ಮಹತ್ಯೆ) 10 ಗಂಟೆ ಕಾಲ ವಿಚಾರಣೆಗೊಳಪಡಿಸಿ, ನೀರು ಇಳಿಸಿದ್ದರು. ಇನ್ನು ಗೋವಾದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ತನಿಖೆಯನ್ನೂ ಸುನೀತಾ ಸಾವಂತ್ ನಡೆಸಿದ್ದಾರೆ.
'ಸತ್ಯ ಬಾಯ್ಬಿಡಿಸುವುದು ಆಕೆಗೆ ಸಿದ್ಧಿಸಿದೆ. ಅನೇಕ ಹೈಪ್ರೊಫೈಲ್ ಕೇಸುಗಳನ್ನು ಅವರು ಲೀಲಾಜಾಲವಾಗಿ ಬಿಡಿಸಿದ್ದಾರೆ. ಮುಖ್ಯವಾಗಿ ಆಕೆ ಕರಪ್ಟ್ ಅಲ್ಲ' ಎಂದು crime branchನಲ್ಲಿರುವ ಸಹೋದ್ಯೋಗಿಗಳು ಸುನೀತಾ ಬಗ್ಗೆ ಸರ್ಟಿಫಿಕೇಟ್ ನೀಡುತ್ತಾರೆ.
ರಾಸಾಯನ ಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಸುನೀತಾ ಸಾವಂತ್, 1990ರಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆಗೆ ಜಾಯಿನ್ ಆಗಿದ್ದಾರೆ. 2001ರಲ್ಲಿ ಇನ್ಸ್ ಪೆಕ್ಟರ್ ಆಗಿ ಭಡ್ತಿ ಪಡೆದ ಸುನೀತಾ, ಸದ್ಯದಲ್ಲೇ deputy superintendent of police ಆಗುವ ಸೂಚನೆಗಳಿವೆ.
ಇನ್ನು, ತರುಣ್ ತೇಜಪಾಲ್ ಸಂಸ್ಥಾಪಿತ ತೆಹಲ್ಕಾದ ಭಾನಗಡಿಗಳು ಒಂದೊಂದಾಗಿ ಹೊರಬರುತ್ತಿವೆ. ಪುಣ್ಯಾತ್ಮ ತೇಜಪಾಲ್ ಕೋಟ್ಯಂತರ ರೂಪಾಯಿ ಸೇವಾ ತೆರಿಗೆಯನ್ನು ಪಾವತಿಸಿಲ್ಲ. ಬಂಧನದಲ್ಲಿರುವ ತರುಣ್ ತೇಜಪಾಲ್ ನಿನ್ನೆ, ಇಂದು ಲಘು ಆಹಾರ ತೆಗೆದುಕೊಂಡಿದ್ದಾರೆ. ನಿನ್ನೆ ಸಂಜೆ ಬನ್ನು ಮತ್ತು ಚಹಾ ತೆಗೆದುಕೊಂಡಿದ್ದಾರೆ.












Click it and Unblock the Notifications