ತಮಿಳುನಾಡು ರೈಲು ಅಪಘಾತ: ಕರ್ನಾಟಕದ ಹಲವು ರೈಲುಗಳ ಮಾರ್ಗದಲ್ಲಿ ಬದಲಾವಣೆ!

ದಕ್ಷಿಣ ಭಾರತದಲ್ಲಿ ಘೋರ ರೈಲು ದುರಂತ ಒಂದು ಸಂಭವಿಸಿ, ನಡುಕ ಶುರುವಾಗಿದೆ. ಈ ರೀತಿ ರೈಲು ದುರಂತಗಳು ಸಾಮಾನ್ಯವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚು. ಆದರೆ, ದಕ್ಷಿಣ ಭಾರತದಲ್ಲಿ ರೈಲು ದುರಂತಗಳು ಸಾಮಾನ್ಯವಾಗಿ ಕಡಿಮೆ. ಹೀಗಿದ್ದರೂ ಕರ್ನಾಟಕದ ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಭೀಕರ ರೈಲು ದುರಂತ ಸಂಭಿವಿಸಿ, ದಕ್ಷಿಣ ಭಾರತದಲ್ಲೇ ಭಯದ ವಾತಾವರಣ ಶುರುವಾಗಿತ್ತು. ಇಂತಹ ಸ್ಥಿತಿಯಲ್ಲಿ ಈಗ ಕರ್ನಾಟಕದಿಂದ ಹೊರಡುವ ರೈಲುಗಳಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.

ಮೈಸೂರು ಟು ದರ್ಭಂಗಾ ಎಕ್ಸ್‌ಪ್ರೆಸ್ ರೈಲು ನೇರವಾಗಿ ಗೂಡ್ಸ್ ರೈಲಿಗೆ ಢಿಕ್ಕಿಯಾದ ಹಿನ್ನೆಲೆ ದೊಡ್ಡ ಅನಾಹುತ ಸಂಭವಿಸಿತ್ತು. ಪ್ಯಾಸೆಂಜರ್ ರೈಲಿನ ಒಟ್ಟು 2 ಬೋಗಿಗಳು ಈ ಆಘಾತದ ಬೆಂಕಿಗೆ ಆಹುತಿಯಾಗಿವೆ. ಮತ್ತೊಂದು ಕಡೆ ಹಲವು ಬೋಗಿಗಳು ಹಳಿತಪ್ಪಿದ ಕಾರಣ ಭಾರಿ ದೊಡ್ಡ ಅನಾಹುತ ಎದುರಾಗಿತ್ತು. ಹೀಗಾಗಿ ಕರ್ನಾಟಕ ರಾಜ್ಯದಿಂದ ತಮಿಳುನಾಡಿನ ಕಡೆ ಹೊರಟಿದ್ದ ರೈಲುಗಳ ಓಡಾಟವನ್ನು ಬದಲಾವಣೆ ಮಾಡಲಾಗಿದೆ. ಹಾಗಾದ್ರೆ, ಯಾವೆಲ್ಲಾ ರೈಲುಗಳ ಮಾರ್ಗ ಬದಲಾವಣೆ ಆಗಿದೆ? ಮುಂದೆ ಓದಿ.

Several Trains Route Has Been Changed After Mysore To Darbhanga Train Accident

ರೈಲುಗಳ ಮಾರ್ಗ ಬದಲಾವಣೆ

ಅಂದಹಾಗೆ ಚೆನ್ನೈ ವಿಭಾಗದ ಪೊನ್ನೇರಿ ಟು ಕವರಪ್ಪೆಟ್ಟೈ ರೈಲು ನಿಲ್ದಾಣಗಳ ನಡುವೆ ಈ ಭೀಕರ ರೈಲು ದುರಂತ ಸಂಭವಿಸಿತ್ತು. ಹೀಗಾಗಿ ರೈಲು ಸಂಖ್ಯೆ 12296, ಡಣಾಪುರ ಟು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮಾರ್ಗದ ರೈಲು ಪ್ರಯಾಣವನ್ನು ಡಣಾಪುರ ಮೂಲಕ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಹಾಗೇ ಮತ್ತೊಂದು ಕಡೆ ರೈಲನ್ನು ಗುಡೂರು, ರೇಣುಗುಂಟಾ ಮತ್ತು ಮೇಲ್ಪಕ್ಕಂ ಮೂಲಕ ಸಂಚರಿಸಲು ಇದೀಗ ನಿರ್ಧಾರ ಕೈಗೊಳ್ಳಲಾಗಿದ್ದು ತಿರುತ್ತಣಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ಮಾಡಲಾಗುವುದು. ಆದರೆ ಪೆರಂಬೂರ್ & ಅರಕ್ಕೋಣಂ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.

ಪಾಟ್ನಾ ರೈಲು ಸಂಚಾರದಲ್ಲೂ ಬದಲಾವಣೆ

ರೈಲು ಸಂಖ್ಯೆ 12296ರ ಜೊತೆಗೆ ರೈಲು ಸಂಖ್ಯೆ 22353ರ ಮಾರ್ಗವನ್ನು ಕೂಡ ಬದಲಾವಣೆ ಮಾಡಲಾಗಿದೆ. ಅಷ್ಟಕ್ಕೂ ಪಾಟ್ನಾ ಟು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಮಾರ್ಗದಲ್ಲಿ ಇರುವ ಪ್ರಯಾಣವನ್ನ ಪಾಟ್ನಾದಿಂದ ಆರಂಭಿಸಿ. ರೈಲನ್ನು ಮುಂದೆ ಗುಡೂರು, ರೇಣುಗುಂಟಾ ಮತ್ತು ಮೇಲ್ಪಾಕ್ಕಂ ಮೂಲಕ ಸಂಚರಿಸಲು ನಿರ್ಧರಿಸಲಾಗಿದೆ. ಹಾಗೇ ರೈಲನ್ನು ತಿರುತ್ತಣಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ನಿರ್ಧರಿಸಿದ್ದು, ಪೆರಂಬೂರ್ ರೈಲು ನಿಲ್ದಾಣದಲ್ಲಿ ಸ್ಟಾಪ್ ಇರುವುದಿಲ್ಲ.

ಇದೇ ರೀತಿಯಾಗಿ ಮತ್ತೊಂದು ಕಡೆ ರೈಲು ಸಂಖ್ಯೆ 22306 ಕೂಡ ಸಂಚಾರದಲ್ಲಿ ಬದಲಾವಣೆ ಕಾಣಲಿದೆ. ಈ ರೈಲನ್ನು ಕೂಡ ಗುಡೂರು, ರೇಣುಗುಂಟಾ ಮತ್ತು ಮೇಲ್ಪಾಕ್ಕಂ ಮೂಲಕ ಸಂಚರಿಸಲು ನಿರ್ಧರಿಸಲಾಗಿದೆ. ತಿರುತ್ತಣಿ ರೈಲ್ವೆ ಸ್ಟೇಷನ್‌ನಲ್ಲಿ ಈ ರೈಲನ್ನು ಹೆಚ್ಚುವರಿಯಾಗಿ ನಿಲುಗಡೆ ಮಾಡಿದರೂ ಪೆರಂಬೂರ್ ರೈಲು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+