ಲೋಕಸಭಾ ಚುನಾವಣೆ: ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್
ಲೋಕಸಭೆ ಚುನಾವಣೆಯಲ್ಲಿ ಪ್ರತಿ ಹಂತದ ಮತದಾನ ಮುಗಿದ 48 ಗಂಟೆಗಳ ನಂತರ ಎಲ್ಲಾ ಮತಗಟ್ಟೆಗಳಲ್ಲಿ ದಾಖಲಾದ ಮತಗಳ ಖಾತೆಯನ್ನು ಅಪ್‌ಲೋಡ್ ಮಾಡುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಎನ್‌ಜಿಒ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ ಅರ್ಜಿಯ ವಿಚಾರಣೆ ಬಳಿಕ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಸಂಜೀವ್ ಖನ್ನಾ ಅವರ ಪೀಠವು ಚುನಾವಣಾ ಆಯೋಗದಿಂದ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಳಿದೆ.

ವಿಚಾರಣೆಯ ಸಂದರ್ಭದಲ್ಲಿ, ಪೀಠವು ಇಸಿಐ ಅನ್ನು ಪ್ರತಿನಿಧಿಸುವ ಹಿರಿಯ ವಕೀಲರಾದ ಮಣಿಂದರ್ ಸಿಂಗ್ ಮತ್ತು ಅಮಿತ್ ಶರ್ಮಾ ಅವರನ್ನು, ಫಾರ್ಮ್ 17 ಸಿ ಡೇಟಾವನ್ನು ಬಹಿರಂಗಪಡಿಸದಿರಲು ಕಾರಣ ಏನು ಎಂದು ಕೇಳಿದ್ದು, ಚುನಾವಣಾ ಸಂಸ್ಥೆ ಡೇಟಾವನ್ನು ಬಹಿರಂಗಪಡಿಸಬೇಕು ಎಂದು ಹೇಳಿದೆ.
ಇದಕ್ಕೆ ಉತ್ತರ ನೀಡಿದ ವಕೀಲರು ಡೇಟಾ ಬಹಿರಂಗಪಡಿಸಲು ಯಾವುದೇ ತೊಂದರೆ ಇಲ್ಲ, ಆದರೆ "ಫಾರ್ಮ್ 17 ಸಿ" ಸಂಕಲನವನ್ನು ಒಳಗೊಂಡಿರುವ ಪ್ರಕ್ರಿಯೆ ಪೂರ್ಣಗೊಳಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಎನ್‌ಜಿಒ ಪರ ವಕೀಲ ಪ್ರಶಾಂತ್ ಭೂಷಣ್ ಅವರು, ಮತದಾನದ ಎಲ್ಲಾ ಹಂತಗಳಲ್ಲಿ ನಿಜವಾದ ಮತದಾರರ ಮತದಾನದಲ್ಲಿ ಹಠಾತ್ ಏರಿಕೆ ದಾಖಲಾಗಿದೆ ಎಂದು ಹೇಳಿದರು.
2019 ರಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ ಮತ್ತು ಚುನಾವಣಾ ಸಮಿತಿಯು ತನ್ನ ವಿವರವಾದ ಪ್ರತಿಕ್ರಿಯೆಯನ್ನು ಸಲ್ಲಿಸಿದೆ ಆದರೆ ಅರ್ಜಿದಾರರು ಯಾವುದೇ ಮರುಪ್ರತಿಕ್ರಿಯೆ ಸಲ್ಲಿಸದಿರಲು ನಿರ್ಧರಿಸಿದ್ದಾರೆ ಎಂದು ಚುನಾವಣಾ ಆಯೋಗದ ಪರ ವಕೀಲರು ಹೇಳಿದರು.
ದತ್ತಾಂಶ ಸಂಗ್ರಹಣೆಗೆ ಸಮಯ ಬೇಕಾಗುತ್ತದೆ ಮತ್ತು ಪ್ರತಿ ಬೂತ್‌ನ ಮತಗಟ್ಟೆ ಏಜೆಂಟರಿಗೆ ಚುನಾವಣೆ ಮುಗಿದ ಮೇಲೆ ಡೇಟಾದ ಪ್ರತಿಯನ್ನು ಹಸ್ತಾಂತರಿಸಲಾಗುತ್ತದೆ ಎಂದು ವಕೀಲರು ಹೇಳಿದರು.
ಯಾರಿಗಾದರೂ ಅನ್ಯಾಯವಾದರೆ, ಅಂಕಿಅಂಶಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ಚುನಾವಣಾ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಅವರು ಹೇಳಿದರು. ಮತದಾನ ನಡೆಯುವಾಗ ಈ ರೀತಿಯ ಮನವಿಗಳು, ಹೆಚ್ಚಿನ ಸಂಖ್ಯೆಯ ಯುವ ಮತದಾರರನ್ನು ಮತ ಚಲಾಯಿಸದಂತೆ ಮಾಡುತ್ತವೆ ಎಂದು ವಾದ ಮಾಡಿದರು.
ನಡೆಯುತ್ತಿರುವ ಲೋಕಸಭಾ ಚುನಾವಣೆಯ ಪ್ರತಿ ಹಂತದ ಮತದಾನದ ನಂತರ ಫಾರ್ಮ್ 17ಸಿ ಭಾಗ-1 ರಲ್ಲಿ ದಾಖಲಾದ ಮತಗಳ ಸಂಖ್ಯೆಯ ಸಂಪೂರ್ಣ ಅಂಕಿಅಂಶಗಳಲ್ಲಿ ಮತಗಟ್ಟೆವಾರು ಅಂಕಿಅಂಶಗಳನ್ನು ಒದಗಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನಿದೇರ್ಶನ ನಿಡಿದೆ.
2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳ ಸಂಕಲನದ ನಂತರ ಎಣಿಕೆಯ ಅಭ್ಯರ್ಥಿವಾರು ಫಲಿತಾಂಶವನ್ನು ಒಳಗೊಂಡಿರುವ ಫಾರ್ಮ್ 17ಸಿ ಭಾಗ- II ರ ಸ್ಕ್ಯಾನ್ ಮಾಡಲಾದ ಸ್ಪಷ್ಟವಾದ ಪ್ರತಿಗಳನ್ನು ಚುನಾವಣಾ ಆಯೋಗದ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವಂತೆ ಹೇಳಲಾಗಿದೆ.
ಸಾರ್ವಜನಿಕ ಡೊಮೇನ್‌ನಲ್ಲಿ ನಿಖರವಾದ ಅಂಕಿಅಂಶಗಳನ್ನು ತರದ ಹೊರತು, ಶೇಕಡಾವಾರು ಅಂಕಿಅಂಶಗಳು ಮತದಾರರಿಗೆ ಅರ್ಥಹೀನ ಎಂದು ಎನ್‌ಜಿಒ ಪರ ವಕೀಲರು ವಾದಿಸಿದ್ದಾರೆ.












Click it and Unblock the Notifications