SBI Raise FD interest: ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ, ಎಷ್ಟೆಷ್ಟು ಏರಿದೆ?
ನವದೆಹಲಿ, ಡಿಸೆಂಬರ್ 28: ದೇಶದ ಈ ಬ್ಯಾಂಕ್ ನಲ್ಲಿ ನೀವು ಹಣವನ್ನು ನಿಶ್ಚಿತ ಠೇವಣಿ (Fixed Deposit) ಇಡುತ್ತಿದ್ದರೆ ನಿಮಗೊಂದು ಖಷಿ ವಿಚಾರ ಹೊರ ಬಿದ್ದಿದೆ. ಏಕೆಂದರೆ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಲಾಗಿದೆ.
ಹೌದು, ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಆಯ್ದ ಅವಧಿಯ ನಿಶ್ಚಿತ ಠೇವಣಿಗಳ (ಎಫ್‌ಡಿ) ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ.

ರಾಷ್ಟ್ರೀಯ ಕೃತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಈ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಆಯ್ದ ಅವಧಿಯ ನಿಶ್ಚಿತ ಠೇವಣಿಗಳ(ಎಫ್‌ಡಿ) ಮೇಲಿನ ಬಡ್ಡಿ ದರವನ್ನು 50 ಮೂಲಾಂಶಗಳವರೆಗೆ ಏರಿಕೆ ಮಾಡಿದೆ. ಅಲ್ಲದೇ ಈ ಪರಿಷ್ಕೃತ ಬಡ್ಡಿ ದರ ಇಂದು ಡಿಸೆಂಬರ್ 28 ರಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದೆ.
SBI ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 180-210 ದಿನಗಳ ನಡುವಿನ ಠೇವಣಿಯ ಮೇಲಿನ ವಾರ್ಷಿಕ ಬಡ್ಡಿ ದರ ಶೇಕಡಾ 5.25ರಷ್ಟಿತ್ತು ಅದನ್ನು ಶೇಕಡಾ 5.75ಕ್ಕೆ ಏರಿಕೆ ಮಾಡಲಾಗಿದೆ. 7-45 ದಿನಗಳವರೆಗೆ ಇಡಬಹುದಾಗಿದ್ದ ಎಫ್‌ಡಿ ಠೇವಣಿಯ ಮೇಲಿನ ಬಡ್ಡಿ ದರ ಶೇಕಡಾ 3ರಿಂದ ಶೇಕಡಾ 3.50ಕ್ಕೆ ಏರಿಕೆ ಮಾಡಲಾಗಿದೆ.
ಈ ಎಲ್ಲ ಬಡ್ಡಿ ದರಗಳು 2 ಕೋಟಿ ರೂಗಿಂತ ಕಡಿಮೆಯ ನಿಶ್ಚಿತ ಠೇವಣಿಗಳಿಗೆ ಅನ್ವಯವಾಗಲಿದೆ ಎಂದು ಎಸ್‌ಬಿಐ ತಿಳಿಸಿದೆ.

ಎಫ್‌ಡಿ ಬಡ್ಡಿ ದರ ಹೆಚ್ಚಳದ ಪಟ್ಟಿ
* 7 ದಿನಗಳಿಂದ 45 ದಿನಗಳ ಠೇವಣಿಗೆ ಬಡ್ಡಿ ದರ - 3.50% ಹೆಚ್ಚಳ
* 46 ದಿನಗಳಿಂದ 179 ದಿನಗಳು ಠೇವಣಿ- 4.75% ಹೆಚ್ಚಳ
* 180 ದಿನಗಳಿಂದ 210 ದಿನಗಳು - 5.75%
* 211 ದಿನಗಳಿಂದ 1 ವರ್ಷಕ್ಕಿಂತದೊಳಗಿನ ಅವಧಿ ಠೇವಣಿ- 6%
* 1 ವರ್ಷದಿಂದ 2 ವರ್ಷಕ್ಕಿಂತವರೆಗಿನ ಠೇವಣಿ- 6.80%
* 2 ವರ್ಷದಿಂದ 3 ವರ್ಷದ ಠೇವಣಿ- 7.00%
* 3 ವರ್ಷದಿಂದ 5 ವರ್ಷ- 6.75%
* 5 ವರ್ಷದಿಂದ 10 ವರ್ಷಗಳವರೆಗಿನ ಠೇವಣಿ- 6.50%
ಹಿರಿಯ ನಾಗರಿಕರ ಠೇವಣಿ ಮೇಲಿನ ಬಡ್ಡಿ ದರ ಪಟ್ಟಿ
ಹಿರಿಯ ನಾಗರಿಕರು ಈ ಠೇವಣಿಗಳ ಮೇಲೆ 50 ಬೇಸಿಸ್ ಪಾಯಿಂಟ್‌ಗಳನ್ನು (ಬಿಪಿಎಸ್) ಹೆಚ್ಚುವರಿಯಾಗಿ ಪಡೆಯಲಿದ್ದಾರೆ. ಹೊಸದಾಗಿ ಬಡ್ಡಿ ಹೆಚ್ಚಳದಿಂದ ಎಸ್‌ಬಿಐ ಏಳು ದಿನಗಳಿಂದ ಹತ್ತು ವರ್ಷಗಳವರೆಗಿನ ಠೇವಣಿಗಳ ಮೇಲೆ 4 ರಿಂದ 7.5% ವರೆಗೆ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರ ಬಡ್ಡಿ ದರ ಪಟ್ಟಿ ಇಲ್ಲಿದೆ
* 7 ದಿನಗಳಿಂದ 45 ದಿನಗಳವರೆಗಿನ ಠೇವಣಿ- 4%
* 46 ದಿನದಿಂದ 179 ದಿನ- 5.25%
* 180 ದಿನದಿಂದ 210 ದಿನ- 6.25%
* 211 ದಿನದಿಂದ 1 ವರ್ಷ- 6.5%
* 1 ವರ್ಷದಿಂದ 2 ವರ್ಷ- 7.30%
* 2 ವರ್ಷದಿಂದ 3 ವರ್ಷ- 7.50%
* 3 ವರ್ಷದಿಂದ 5 ವರ್ಷ- 7.25
* 5 ವರ್ಷದಿಂದ 10 ವರ್ಷ- 7.5%
FD ಬಡ್ಡಿ ದರ ಹೆಚ್ಚಿಸಿದ ಬ್ಯಾಂಕ್‌ಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಇದೇ ವರ್ಷ ಕಳೆದ ಫೆಬ್ರವರಿ 2023 ವೇಳೆ ಕೊನೆಯದಾಗಿ ನಿಶ್ಚಿತ ಠೇವಣಿ (FD) ಮೇಲಿನ ಬಡ್ಡಿ ದವರನ್ನು ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಹೆಚ್ಚಳ ಮಾಡುವ ಮೂಲಕ 2023 ಡಿಸೆಂಬರ್‌ನಲ್ಲಿ ಎಫ್‌ಡಿ ಮೇಲಿನ ಬಡ್ಡಿ ದರ ಹೆಚ್ಚಿಸಿದ ಬ್ಯಾಂಕ್‌ಗಳ ಪೈಕಿ ಎಸ್‌ಬಿಐ ಐದನೇ ಬ್ಯಾಂಕ್ ಆಗಿದೆ.
ಎಸ್‌ಬಿಐ ಗೂ ಮೊದಲು ಫೆಡರಲ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಡಿಸಿಬಿ ಬ್ಯಾಂಕ್ ಕೂಡ ಈ ತಿಂಗಳು ತಮ್ಮ ಅವಧಿಯ ಠೇವಣಿಗಳ ಮೇಲೆ ಬಡ್ಡಿ ದರ ಏರಿಕೆ ಮಾಡಿವೆ.












Click it and Unblock the Notifications