ಪಾರ್ಶ್ವನಾಥ ಪರ್ವತ ಉಳಿಸಲು ಜೈನರಿಂದ ಸೇವ್ ಶಿಕಾರ್ಜಿ ಅಭಿಯಾನ
ಬೆಂಗಳೂರು, ಅಕ್ಟೋಬರ್ 11: ಜೈನ ಸಮುದಾಯದ ಪವಿತ್ರ ಸ್ಥಳವಾದ ಶಿಕಾರ್ಜಿ ಪರ್ವತ (ಪಾರ್ಶ್ವನಾಥ ಪರ್ವತ) ವಾಣಿಜ್ಯಾತ್ಮಕ ಉದ್ದೇಶಕ್ಕಾಗಿ ಹಾಳು ಮಾಡುತ್ತಿರುವುದಕ್ಕೆ ಜೈನ ಸಮುದಾಯ ದೇಶಾದ್ಯಂತ ಸೇವ್ ಶಿಕಾರ್ಜಿ ಅಭಿಯಾನವನ್ನು ಆರಂಭಿಸಿದೆ. ದೇಶದ ಪ್ರತಿ ಪ್ರಜೆಯೂ ಸೇವ್ ಶಿಕಾರ್ಜಿ ತಾಣಕ್ಕೆ ಭೇಟಿ ನೀಡಿ ಮನವಿಗೆ ಸಹಿ ಹಾಕುವುದರೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ #saveshikharji ಟ್ಯಾಗ್‍ನಲ್ಲಿ ಹಂಚಿಕೊಳ್ಳಬೇಕು ಎಂದು ಮನವಿ ಮಾಡಿದೆ.
ಜಾರ್ಖಂಡ್ ರಾಜ್ಯದ ಗಿರಿಧ್ ಜಿಲ್ಲೆಯ ಶಿಕಾರ್ಜಿ ಪರ್ವತ ಶ್ರೇಣಿಯಲ್ಲಿ ಇರುವ 16ನೇ ಶತಮಾನಕ್ಕೂ ಹಿಂದಿನ ಸಂಸ್ಕೃತ ಶಾಸನಗಳು ಆಧ್ಯಾತ್ಮಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಶಿಕಾರ್ಜಿ ಪರ್ವತ ಜೈನರ ಪವಿತ್ರ ಕ್ಷೇತ್ರ ಎಂಬುದಕ್ಕೆ ಪುಷ್ಠೀಕರಿಸುತ್ತದೆ. ಹಿಂದೆ ಜೈನರ 24 ತೀರ್ಥಂಕರರ ಪೈಕಿ 20 ತೀರ್ಥಂಕರರು ಹಾಗೂ ಹಲವು ಸಂನ್ಯಾಸಿಗಳಿಗೆ ಮೋಕ್ಷ ಸಿದ್ಧಿಯಾದ ಸ್ಥಳ ಇದು.
ಇಂದಿಗೂ ಕೂಡ ಇಡೀ ಪಾಶ್ರ್ವನಾಥ ಪರ್ವತದ ಸುತ್ತ (ಪೂರ್ಣ 27 ಕಿಲೋ ಮೀಟರ್) ಪರಿಕ್ರಮ ಕೈಗೊಳ್ಳುವ ವ್ಯಕ್ತಿಗಳನ್ನೂ ಕಾಣಬಹುದು.2015ರ ಸೆಪ್ಟೆಂಬರ್ ನಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್, ಶಿಕಾರ್ಜಿ ಪರ್ವತವನ್ನು ಆಧ್ಯಾತ್ಮ ಹಾಗೂ ಜ್ಞಾನೋದಯದ ಅಂತಾರಾಷ್ಟ್ರೀಯ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಲು ಬದ್ಧ ಎಂದು ಸಾರ್ವಜನಿಕವಾಗಿ ಹೇಳಿದ್ದರು.

ಪರ್ವತದ ಗೌರವಾರ್ಹತೆ ಹಾಗೂ ಪ್ರಾವಿತ್ರ್ಯತೆಗೆ ಯಾವುದೇ ಧಕ್ಕೆ ಆಗದಂತೆ ಮೂಲಭೂತ ಸೌಕರ್ಯದ ವ್ಯವಸ್ಥೆ ಮಾಡಲು ಆಸಕ್ತಿ ತೋರುತ್ತೇನೆ ಎಂದು ಮೂರು ವರ್ಷ ಕಳೆದಿದ್ದರೂ ಅವರ ಮಾತುಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಜಾರ್ಖಂಡ್ ಸರ್ಕಾರದ ಈ ಮೃದು ಧೋರಣೆ ಜೈನ ಸಮುದಾಯದ ಆತಂಕಕ್ಕೆ ಕಾರಣವಾಗಿದೆ. ಮತ್ತೊಂದೆಡೆ ವಾಣಿಜ್ಯಾತ್ಮಕವಾಗಿ ಪರ್ವತವನ್ನು ನಗರೀಕರಣಗೊಳಿಸುವ ಪ್ರಯತ್ನಗಳು ಕಣ್ಣಿಗೆ ಕಾಣಿಸುವಷ್ಟು ಸ್ಪಷ್ಟವಾಗಿದ್ದು, ಇದು ಪವಿತ್ರ ಸ್ಥಳದ ಆಧ್ಯಾತ್ಮಿಕ ಅರ್ಹತೆಯನ್ನು ಅಪಾಯಕ್ಕೆ ದೂಡಲಿದೆ.
ಜೈನ ಸಮುದಾಯದ ಸದಸ್ಯರುಗಳಿಗೆ ಪವಿತ್ರ ಸ್ಥಳದ ಪ್ರಾಮುಖ್ಯತೆಯನ್ನು ಮರಳಿ ಕಟ್ಟುವ ಯೋಜನೆ ಅಗತ್ಯವೆನಿಸಿದೆ. ಶಿಕಾರ್ಜಿ ಪರ್ವತವನ್ನು, ದೇಶದ ಇತರ ಎಲ್ಲ ದೇವಸ್ಥಾನಗಳಂತೆ ಆರಾಧನಾ ಸ್ಥಳ ಎಂದು ಘೋಷಿಸಿ ಕಾನೂನು ತರುವಂತೆ ಮಾಡುವುದು ಪ್ರಮುಖ ಉದ್ದೇಶ. ಹೀಗೆ ಮಾಡುವುದರಿಂದ ಶಿಕಾರ್ಜಿ ಇನ್ನಷ್ಟು ಹೆಚ್ಚಿನ ಮೌಲ್ಯವನ್ನು ಪಡೆದುಕೊಳ್ಳಲಿದೆ.
ಅದರೊಂದಿಗೆ ಭವಿಷ್ಯದ ಭವಿಷ್ಯದ ದಿನಗಳಲ್ಲಿ ದೇಶದ ಆಧ್ಯಾತ್ಮಿಕ ವಾಸಸ್ಥಾನ ಮತ್ತು ಸಾಂಸ್ಕೃತಿಕ ಆಸ್ತಿಯಾಗಿ ಶಾಂತಿ ಪ್ರಚಾರ, ತಾಳ್ಮೆ ಮತ್ತು ಸ್ವೀಕಾರ, ಇತಿಹಾಸದ ಅಂಶವನ್ನು ರಕ್ಷಿಸಿದ ಹಾಗೂ ನಾಶವಾಗುವುದನ್ನು ತಪ್ಪಿಸಲು ನೆರವಾಗಲಿದೆ.ಮಧುಬನ ಕಾಡುಗಳಲ್ಲಿರುವ ಅತಿ ಸೂಕ್ಷ್ಮ ಜೀವವಿಜ್ಞಾನ ಹಾಗೂ ಕಾಡುಪ್ರಾಣಿಗಳನ್ನು ಉಳಿಸಲು ನೆರವಾಗಲಿದೆ.
ಅರಣ್ಯ ಹಾಗೂ ಕಾಡಿನ ಪ್ರಾಣಿ ಪಕ್ಷಿಗಳ ಮೇಲೆಯೇ ಅವಲಂಬಿತವಾಗಿರುವ ಸ್ಥಳೀಯ ಜನರ ಜೀವನಮಟ್ಟವನ್ನು ಹೆಚ್ಚಿಸಲು ಇದರಿಂದ ಸಾಧ್ಯವಾಗಲಿದೆ. ಅಲ್ಲದೆ, ಆಧ್ಮಾತ್ಮದತ್ತ ಒಲವಿರುವ ಸಾಮಾನ್ಯ ಜನರಿಗೆ ನಿರ್ವಾಣ ಗಳಿಸಲು ಪ್ರಮುಖವಾಗಿ ದಾರಿ ಮಾಡಿಕೊಡಲಿದ್ದೇವೆ.
ಈ ಎಲ್ಲ ಕಾರಣಗಳಿಗಾಗಿ ಇಡೀ ಜೈನ ಸಮುದಾಯ ಸೇವ್ ಶಿಕಾರ್ಜಿ ಅಭಿಯಾನ ಆರಂಭಿಸಿದೆ. 2015ರಲ್ಲಿ ಜಾರ್ಖಂಡ್ ಸರ್ಕಾರ ನೀಡಿದ್ದ ಭರವಸೆಗಳನ್ನು ಪೂರೈಸಬೇಕು ಹಾಗೂ ತಕ್ಷಣವೇ ಶಿಕಾರ್ಜಿ ಪರ್ವತವನ್ನು ಆರಾಧನಾ ಸ್ಥಳವೆಂದು ಪ್ರಕಟಿಸುವ ಮೂಲಕ ಪವಿತ್ರತೆಯನ್ನು ಕಾಪಾಡಬೇಕು ಎನ್ನುವುದು ಮನವಿಯಾಗಿದೆ.












Click it and Unblock the Notifications