ಸ್ಯಾರಿಡಾನ್ ಸೇರಿದಂತೆ 327 ಡ್ರಗ್ಸ್ ಮೇಲೆ ನಿಷೇಧ
ನವದೆಹಲಿ, ಸೆಪ್ಟೆಂಬರ್ 13: ಕೇಂದ್ರ ಆರೋಗ್ಯ ಸಚಿವಾಲಯದಿಂದ ನಿಷೇಧಿತ ಮಾತ್ರೆ, ಔಷಧಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸ್ಯಾರಿಡನ್ ಸೇರಿದಂತೆ 328 ಡ್ರಗ್ಸ್ ನಿಷೇಧಿಸಿದ್ದರೆ, 6 ಡ್ರಗ್ಸ್ ಮೇಲೆ ನಿರ್ಬಂಧ ವಿಧಿಸಲಾಗಿದೆ.
ನಿಷೇಧಿತ ಔಷಧಗಳ ಪಟ್ಟಿಯಲ್ಲಿ ನೋವು ನಿವಾರಕ ಮಾತ್ರೆಗಳಾದ ಸ್ಯಾರಿಡನ್, ಡಯಾಬಿಟೀಸ್ ಡ್ರಗ್ಸ್ ಗ್ಲೂಕೊನಾರ್ಮ್(Gluconorm), ಆಂಟಿಬಯೋಟಿಕ್ ಗಳಾ ಲುಪಿಡಿಕ್ಲೋಕ್ಸ್ (Lupidiclox), ಟಾಕ್ಸಿಮ್ ಎ ಜಡ್ಜ್(Taxim AZ) ಸೇರಿವೆ.

Phensedyl Cough Linctus, ಡಿ ಕೋಲ್ಡ್ ಟೋಟಲ್, ಕೋರೆಕ್ಸ್ ನಿಷೇಧದಿಂದ ಪಾರಾಗಿವೆ.
ಮಾರ್ಚ್ 10, 2016ರಂದು 344ಎಫ್ ಡಿ ಸಿಗಳನ್ನು ನಿಷೇಧಿಸಿ ಸರ್ಕಾರವು ಆದೇಶಿಸಿತ್ತು. ಡಿಸೆಂಬರ್ 15, 2017ರಂದು ಸುಪ್ರೀಂಕೋರ್ಟ್, ಈ ಬಗ್ಗೆ ಪರೀಕ್ಷಿಸುವಂತೆ ಡ್ರಗ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ ಗೆ ಸೂಚಿಸಿದೆ.
ಜನ ಸಂಜೀವಿನಿಯಲ್ಲಿ ಶೇ.50ರಷ್ಟು ರಿಯಾಯಿತಿಯಲ್ಲಿ ಔಷಧಿ
ಕ್ಯಾನ್ಸರ್, ಮಧುಮೇಹ, ಬ್ಯಾಕ್ಟೀರಿಯಾ ಸೋಂಕು ಮತ್ತು ರಕ್ತದೊತ್ತಡ ಮುಂತಾದ ಕಾಯಿಲೆಗಳಿಗೆ ನೀಡಲಾಗುವ ಪ್ರಮುಖ 56 ಔಷಧಗಳ ಬೆಲೆಯನ್ನು ಕೇಂದ್ರ ಸರ್ಕಾರ ಸುಮಾರು ಶೇ. 25ರಷ್ಟು ಕಡಿತ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications