ಕಾಶ್ಮೀರ-ಕನ್ಯಾಕುಮಾರಿ ಒಂದು ಮಾಡಿದ ಶಕ್ತಿಗೆ ನಮಿಸಿದ ಪ್ರಧಾನಿ

ನವದೆಹಲಿ, ಅಕ್ಟೋಬರ್, 31: ಭಾರತದ ಉಕ್ಕಿನ ಮನುಪ್ಯ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಜನ್ಮಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ ದಿವ್ಯ ಚೇತನಕ್ಕೆ ನಮನ ಸಲ್ಲಿಸಿದರು.

ಪಟೇಲ್ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ದಿವಸ್‌ಗೆ ಚಾಲನೆ ನೀಡಿದ ನರೇಂದ್ರ ಮೋದಿ, ಸಂಸತ್‌ ಬಳಿ ಇರುವ ಪಟೇಲರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ರಾಜಪಥ್‌ನ ವಿಜಯ ಚೌಕದ ಬಳಿ ಏರ್ಪಡಿಸಿದ ಏಕತೆಗಾಗಿ ಓಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಏಕತೆಯ ಪ್ರತಿಜ್ಞೆ ಬೋಧಿಸಿದರು.[ನರೇಂದ್ರ ಮೋದಿಯ ಕೋಟಿ ಆಫರ್ ಬೇಡ ಎಂದ ಈಧಿ]

ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ವೆಂಕಯ್ಯ ನಾಯ್ಡು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ನರೇಂದ್ರ ಮೋದಿ ಭಾಷಣದ ಹೈಲೈಟ್ಸ್ಗೆ ಮುಂದಿನ ಸ್ಲೈಡ್ಸ್ ಕ್ಲಿಕ್ ಮಾಡಿ...

 ರಾಷ್ಟ್ರೀಯ ಏಕತೆ ದಿನವಾಗಲಿ

ರಾಷ್ಟ್ರೀಯ ಏಕತೆ ದಿನವಾಗಲಿ

ಏಕತೆ ನಮ್ಮ ದೊಡ್ಡ ಶಕ್ತಿ. ಅದನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಪಟೇಲರು ಕಲಿಸಿಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುಂದೆ ನಡೆದರೆ ದೇಶದ ಸಮಗ್ರ ಅಭಿವೃದ್ಧಿ ಸುಲಭ.

ಇಂದಿರಾ ನೆನೆದ ಪ್ರಧಾನಿ

ಇಂದಿರಾ ನೆನೆದ ಪ್ರಧಾನಿ

ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ದೇಶಕ್ಕೆ ನೀಡಿದ ಸೇವೆ ಮರೆಯುವಂತಿಲ್ಲ. ಅವರ ಪುಣ್ಯ ತಿಥಿ ದಿನ ಇಡೀ ದೇಶವೇ ಅವರನ್ನು ಮತ್ತೆ ನೆನಪು ಮಾಡಿಕೊಳ್ಳಬೇಕಿದೆ.

ಕಾಶ್ಮೀರ-ಕನ್ಯಾಕುಮಾರಿ ಒಂದು ಮಾಡಿದ ಶಕ್ತಿ

ಕಾಶ್ಮೀರ-ಕನ್ಯಾಕುಮಾರಿ ಒಂದು ಮಾಡಿದ ಶಕ್ತಿ

ಸ್ವಾತಂತ್ರ್ಯಾನಂತರ ದೇಶದಲ್ಲಿ ಹರಿದು ಹಂಚಿ ಹೋಗಿದ್ದ ಸಂಸ್ಥಾನಗಳನ್ನು ಒಂದು ಮಾಡಿದ ಪಟೇಲರ ಸಾಧನೆ ಇತಿಹಾಸವಾಗಿದೆ. ಕಾಶ್ಮೀರ-ಕನ್ಯಾಕುಮಾರಿ ಒಂದು ಮಾಡಿದ ಶಕ್ತಿಯನ್ನು ಬೇರೆ ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ.

ಸ್ವಚ್ಛ ಭಾರತದ ಕಲ್ಪನೆ

ಸ್ವಚ್ಛ ಭಾರತದ ಕಲ್ಪನೆ

ಪಟೇಲರು ಅಹಮದಾಬಾದಿನ ಮೇಯರ್ ಆಗಿದ್ದಾಗಲೇ ಸ್ವಚ್ಛ ಭಾರತ ಕಲ್ಪನೆ ಆರಂಭಿಸಿದ್ದರು. ಅವರ ಆಡಳಿತದಲ್ಲಿ 222 ದಿನಗಳ ಕಾಲ ನಡೆದ ಸ್ವಚ್ಛತಾ ಜಾಗೃತಿ ಅಭಿಯಾನವೇ ಇದಕ್ಕೆ ಸಾಕ್ಷಿ.

ಮಹಿಳಾ ಮೀಸಲಾತಿಗೆ ನಾಂದಿ

ಮಹಿಳಾ ಮೀಸಲಾತಿಗೆ ನಾಂದಿ

ಪಟೇಲರು ಅಂದೆಯೇ ಮಹಿಯರ ಸ್ವಾವಲಂಬನೆಗೆ ನಾಂದಿ ಹಾಡಿದ್ದರು. ಎಲ್ಲ ಕ್ಷೇತ್ರಗಳಲ್ಲಿ ಶೇ. 50 ಮೀಸಲಾತಿ ಕಲ್ಪಿಸಬೇಕು ಎಂದು ವಾದ ಮುಂದಿಟ್ಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+