PM Modi: ಪ್ರಧಾನಿ ನರೇಂದ್ರ ಮೋದಿ ನಿವೃತ್ತಿ ಘೋಷಣೆ ಮಾಡಲು ಆರ್‌ಎಸ್‌ಎಸ್ ಕಚೇರಿಗೆ ಹೋದ್ರಾ?

ಬಿಜೆಪಿ ಅಂದ್ರೆ ನರೇಂದ್ರ ಮೋದಿ, ನರೇಂದ್ರ ಮೋದಿ ಅಂದ್ರೆ ಬಿಜೆಪಿ ಅನ್ನುವಷ್ಟರ ಮಟ್ಟಿಗೆ ಹವಾ ಕ್ರಿಯೇಟ್ ಆಗಿತ್ತು. 2014ರ ಲೋಕಸಭೆ ಚುನಾವಣೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಹವಾ ಇಟ್ಟುಕೊಂಡೇ ಬಿಜೆಪಿ ಬಲಿಷ್ಠವಾಗಿ ಬೆಳೆದಿದೆ. ಹೀಗಿದ್ದಾಗ ಬಿಜೆಪಿ ಭವಿಷ್ಯದಲ್ಲಿ ಗೆಲ್ಲುವುದಕ್ಕೆ ಕೂಡ ನರೇಂದ್ರ ಮೋದಿ ಅವರ ಬೆಂಬಲ ಬೇಕೆ ಬೇಕು. ಇಂತಹ ಸಮಯದಲ್ಲೇ ಸ್ಫೋಟಕ ವಿಚಾರ ಈಗ ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಪ್ರಧಾನಿ ನರೇಂದ್ರ ಮೋದಿ ನಿವೃತ್ತಿ ಘೋಷಣೆ ಮಾಡಲು ಆರ್‌ಎಸ್‌ಎಸ್ ಕಚೇರಿಗೆ ಹೋದ್ರಾ?

ಪ್ರಧಾನಿ ನರೇಂದ್ರ ಮೋದಿ ತುಂಬಾನೇ ಸಿಂಪಲ್, ಅವರ ರಾಜಕೀಯ ಕೂಡ ಸಿಂಪಲ್ ಅಂತಾ ಅವರ ಅಭಿಮಾನಿಗಳು & ಬೆಂಬಲಿಗರು ಹೇಳುತ್ತಾರೆ. ಹೀಗೆ ಹಲವು ಕಾರಣಗಳಿಗೆ ಮೋದಿ ಅವರ ವಿಚಾರ ಜಗತ್ತಿನ ಗಮನ ಸೆಳೆದಿದೆ. ಹೀಗೆ ಬಿಜೆಪಿ ಪಕ್ಷವೂ ಸೇರಿದಂತೆ ರಾಷ್ಟ್ರ ರಾಜಕೀಯದ ಅಖಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮದೇ ಹವಾ ಎಬ್ಬಿಸಿದ್ದರು. ಹೀಗಿದ್ದಾಗ, ಬಿಜೆಪಿ ಪಕ್ಷದ ರೂಲ್ಸ್ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ನಿವೃತ್ತಿಗೆ ಪ್ಲಾನ್ ಮಾಡಿದ್ದಾರಾ? ಇದೇ ಕಾರಣಕ್ಕೆ ಆರ್‌ಎಸ್‌ಎಸ್ ಕಚೇರಿಗೂ ಭೇಟಿ ನೀಡಿದ್ರಾ?

Sanjay Rawat Said This About Narendra Modi Retirement Plans in September

ಬಿಜೆಪಿ ಹೊಸ ನಾಯಕ ಯಾರು?

ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್‌ನಲ್ಲಿ ನಿವೃತ್ತಿ ಪಡೆಯಲು ಪ್ಲಾನ್ ಮಾಡಿದ್ದು, ಇದೇ ಕಾರಣಕ್ಕೆ ನಾಗ್ಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು ಅಂತಾ ಶಿವಸೇನೆಯ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಆರೋಪ ಮಾಡಿದ್ದಾರೆ. ಕಳೆದ 10 ರಿಂದ 11 ವರ್ಷ ಪ್ರಧಾನಿ ಮೋದಿ ಅವರು ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಭೇಟಿಯನ್ನೇ ನೀಡಿರಲಿಲ್ಲ. ಆದರೆ ದಿಢೀರ್ ಈ ರೀತಿ ಭೇಟಿ ನೀಡಿದ್ದಕ್ಕೆ ಬಲವಾದ ಕಾರಣವೂ ಇದೆ ಎಂದಿದ್ದಾರೆ ಶಿವಸೇನಾ ಠಾಕ್ರೆ ಬಣದ ನಾಯಕ ಸಂಜಯ್ ರಾವತ್.

ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ 'ಟಾಟಾ, ಬೈ, ಬೈ' ಹೇಳಲು ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು. ಮೋದಿ ಅವರು ಬಹುಶಃ ತಮ್ಮ ನಿವೃತ್ತಿಯ ಅರ್ಜಿಯನ್ನು ಸಲ್ಲಿಸಲು ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಹೋಗಿರಬಹುದು ಎಂದು ಸಂಜಯ್ ರಾವತ್ ಹೇಳಿಕೆ ನೀಡಿದ್ದು ಹೊಸ ಸಂಚಲನ ಸೃಷ್ಟಿಸಿದೆ.

ದೇಶದ ನಾಯಕತ್ವದಲ್ಲಿ ಭಾರಿ ಬದಲಾವಣೆ?

ಮುಂಬೈನಲ್ಲಿ ಮಾತನಾಡಿರುವ ಸಂಜಯ್ ರಾವತ್, ಆರ್‌ಎಸ್‌ಎಸ್ ದೇಶದ ನಾಯಕತ್ವದಲ್ಲಿ ಬದಲಾವಣೆ ಬಯಸುತ್ತಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಸಂಜಯ್ ರಾವತ್ ಅವರ ಈ ಹೇಳಿಕೆಗೆ ಬಿಜೆಪಿ & ಶಿವಸೇನೆ ಶಿಂಧೆ ಬಣದ ನಾಯಕರು ಕೆಂಡವಾಗಿದ್ದಾರೆ. ಅದರಲ್ಲೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಜಿ. ಫಡ್ನವಿಸ್, ಸಂಜಯ್ ರಾವತ್ ಹೇಳಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+