Sania Mirza: ಹೈದರಾಬಾದ್‌ನಿಂದ 'ಸಾನಿಯಾ ಮಿರ್ಜಾ' ಚುನಾವಣಾ ಸ್ಪರ್ಧೆ?
ಬೆಂಗಳೂರು, ಮಾರ್ಚ್ 31: ಕ್ರೀಡಾ (ಟೆನ್ನಿಸ್) ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿರುವ ಸಾನಿಯಾ ಮೀರ್ಜಾ (Sania Mirza) ಅವರು ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ಇವರು ಹೈದರಾಬಾದ್ ನಿಂದ ಚುನಾವಣೆ ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಾಲುದಾರ ಆಟಗಾರರ ಜೊತೆಗೆ ಒಟ್ಟು 06 ಗ್ರ್ಯಾನ್‌ಸ್ಲಾಮ್‌ಗಳನ್ನು ಗೆದ್ದಿರುವ ಭಾರತೀಯ ಟೆನ್ನಿಸ್ ಡಬಲ್ಸ್ ರಾಣಿ ಎಂದೇ ಖ್ಯಾತರಾದ ಸಾನಿಯಾ ಮಿರ್ಜಾ ಅವರು, ಎಐಎಂಐಎಂನ (AIMIM)ಅಸಾದುದ್ದೀನ್ ಓವೈಸಿಗೆ ಪ್ರತಿಸ್ಪರ್ಧಿ ಆಗಲಿದ್ದಾರೆ. ಹೈದರಾಬಾದ್ ನಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಕಾಂಗ್ರೆಸ್ ಪ್ರತಿಸ್ಪರ್ಧಿಗಳಿಗೆ ಸವಾಲು ಹಾಕಲಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

ಪಾಕಿಸ್ತಾನ ಕ್ರಿಕೆಟಿಗ ಸೋಯೆಬ್ ಮಲ್ಲಿಕ್ ಅವರೊಂದಿಗಿನ ದಾಂಪತ್ಯ ಜೀವನ ಮುರಿದ ಮುರಿದ ಬಳಿಕ ಅವರು ರಾಜಕೀಯ ಪ್ರವೇಶಿಸುತ್ತಿದ್ದಾರೆ ಎಂಬುದು ಸಾಕಷ್ಟು ಚರ್ಚೆಯಾಗುತ್ತಿದೆ. ಅಸ್ಸಾವುದ್ಧಿನ್ ಓವೈಸಿ ಈಗಾಗಲೇ ಕ್ಷೇತ್ರದಲ್ಲಿ ಬಿಜೆಪಿಯ ಮಾಧವಿ ಲತಾ ಅವರಿಂದ ದೊಡ್ಡ ಪೈಪೋಟಿ ಎದುರಿಸಿದ್ದಾರೆ. ಇದೀಗ ಸಾನಿಯಾ ಮಿರ್ಜಾ ಅವರು ಸ್ಪರ್ಧೆಗೆ ಇಳಿದರೆ, ಓರ್ವ ಪುರುಷನ ವಿರುದ್ಧ ಇಬ್ಬರು ಮಹಿಳಾ ಸ್ಪರ್ಧಿಗಳು ಕಣಕ್ಕದಲ್ಲಿದ್ದಂತಾಗುತ್ತದೆ.
ಪ್ರಬಲ ಅಭ್ಯರ್ಥಿ ಎದುರು ಸಾನಿಯಾಗೆ ಸವಾಲು
ಹೈದರಾಬಾದ್ ಕ್ಷೇತ್ರವು ಎಐಎಂಐಎಂ ಭದ್ರಕೋಟೆ ಎನ್ನಲಾಗಿದೆ. ಇಲ್ಲಿ ನಿರಂತರವಾಗಿ ನಾಲ್ಕು ಬಾರಿ ಅತ್ಯಧಿಕ ಅಂತರದಿಂದ ಓವೈಸಿ ಗೆದ್ದಿದ್ದಾರೆ. ಇದೀಗ ಅವರ ವಿರುದ್ಧ ಸಾನೀಯಾ ಮಿರ್ಜಾ ಅವರು ಕಾಂಗ್ರೆಸ್‌ನಿಂದ ನಿಲ್ಲುವ ಮೂಲಕ ಪ್ರಬಲ ಸವಾಲು ಎದುರಿಸುವೇ? ಎಂಬ ಪ್ರಶ್ನೆ ಸೃಷ್ಟಿಯಾಗಿದೆ.
ಈಗಲೇ ಹಳೆಯ ಹೈದರಾಬಾದ್ ಭಾಗಗಳಲ್ಲೊಇ ಎಐಎಂಐಎಂ ಪಕ್ಷದ ಪ್ರಭಾವವಿದೆ. ಇಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದ ಆತಳಿತ ಪಕ್ಷ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ಒಡ್ಡುವ ಮೂಲಕ ಓವೈಸಿ ಪಕ್ಷ 09 ಸ್ಥಾನ ಗೆಲ್ಲುವಲ್ಲಿ ಯಶಸ್ವಿ ಆಗಿತ್ತು.

ಹೈದರಾಬಾದ್‌ಗೆ ಸಾನಿಯಾ ಮಿರ್ಜಾ ಏಕೆ?
ಟಿನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಈ ಭಾಗದಲ್ಲಿನ ಖ್ಯಾತರು, ಪ್ರಸಿದ್ಧ ವ್ಯಕ್ತಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡವರು. ಅವರದ್ದು ಜನರಿಗೆ ಚಿರಪರಿಚಿತ ಮುಖ. ಕ್ರೀಡೆಯಲ್ಲಿ ಸಾಧನಿ ಮಾಡಿರು ವಾವರು, ಟೆನಿಸ್ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎನ್ನಿಸಿಕೊಂಡಿದ್ದಾರೆ.
ಅವರು ಆರು, ಮೂರು ಮಹಿಳಾ ಡಬಲ್ಸ್ ಪ್ರಶಸ್ತಿಗಳು ಮತ್ತು ಮೂರು ಮಿಶ್ರ ಡಬಲ್ಸ್‌ನಲ್ಲಿ ವಿಜಯ ಸಾಧಿಸಿದ್ದಾರೆ. ಮಹಿಳಾ ಕ್ರೀಡಾ ಅಭ್ಯರ್ಥಿಗಳಿಗೆ ಸಾನಿಯಾ ಸ್ಪೂರ್ತಿಯಾದವರಲ್ಲಿ ಒಬ್ಬರು. ವಿವಿಧ ದೇಶಗಳಲ್ಲಿ ಕ್ರೀಡೆಯಲ್ಲಿ ಭಾಗವಹಿಸಿದರು. ಕ್ರಿಡೆಯಲ್ಲಿ ತಮ್ಮದೇ ಕೌಶಲ್ಯದಿಂದಲೇ ಅವರು ಗುರುತಿಸಿಕೊಂಡವರು.
ದಾಂಪತ್ಯ ಜೀವನ ಅಂತ್ಯ
ಕ್ರೀಡಾ ಕ್ಷೇತ್ರದಲ್ಲಿ ಉತ್ತುಗಂದಲ್ಲಿದ್ದಾಗಿ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ಪ್ರೀತಿಸಿ ವಿವಾಹವಾದರು. ಹಲವು ವರ್ಷ ಸಂಸಾರ ಮಾಡಿದ್ದ ಅವರಿಗೆ ಮಗು ಇದೆ. 2024ರಲ್ಲಿ ಅವರ ದಾಂಪತ್ಯದಲ್ಲಿ ಬಿರುಕು ಜಗಜ್ಜಾಹೀರಾಯಿತು.
ಶೋಯೆಬ್ ಮಲ್ಲಿಕ್ ಮೂರನೇ ವಿವಾಹವಾಗುವ ಮೂಲಕ ಪತ್ನಿ ಸಾನಿಯಾ ಜೊತೆಗಿನ ವೈವಾಹಿಕ ಜೀವನ ಅಂತ್ಯಗೊಂಡಿದ್ದನ್ನು ಪೋಟೋ ಸಮೇತ ಪ್ರಕಟಿಸಿದ್ದಾರೆ. ದಾಂಪತ್ಯ ಜೀವನ ಮುರಿದು ಬಿದ್ದ ಬಳಿಕ ಸಾನಿಯಾ ಮಿರ್ಜಾ ಅವರು ರಾಜಕೀಯ ಪ್ರವೇಶಿಸುತ್ತಿದ್ದಾರೆ. ಹೈದರಾಬಾದ್ ನಿಂದ ಅವರ ಸ್ಪರ್ಧೆ ಕುರಿತು ಅಂತಿಮ ಮಾಹಿತಿ ಶೀಘ್ರವೇ ದೊರೆಯಲಿದೆ.












Click it and Unblock the Notifications