Sania Mirza - Shoaib Malik: ಆ ಒಂದು ವಿಚಾರಕ್ಕೆ ಬೇಸತ್ತು ವಿಚ್ಛೇದನ ಕೊಟ್ರಾ ಸಾನಿಯಾ ಮಿರ್ಜಾ?

ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ ಅವರು ಶನಿವಾರ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರೊಂದಿಗಿನ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗಿದೆ.

ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರೊಂದಿಗಿನ ಅವರ ವಿವಾಹದ ಮುರಿದುಬಿದ್ದ ವದಂತಿಗಳು ವಾಸ್ತವಕ್ಕೆ ತಿರುಗುತ್ತಿದ್ದಂತೆ ಈ ಘೋಷಣೆಯು ಪಾಕಿಸ್ತಾನ ಮತ್ತು ಭಾರತ ಎರಡರಲ್ಲೂ ಕ್ರೀಡಾ ಜಗತ್ತನ್ನು ಸೆಳೆಯಿತು.

Sania Mirza Divorces Shoaib Malik, Citing His Extramarital Affairs: Report

ಆದರೆ, ಇಬ್ಬರ ನಡುವಿನ ವಿಚ್ಛೇದನಕ್ಕೆ ಕಾರಣ ಯಾವುದು? ಇಬ್ಬರ ನಡುವೆ ಏನಾಗಿತ್ತು ಎನ್ನುವುದರ ಬಗ್ಗೆ ಇಬ್ಬರೂ ಮಾತನಾಡಿಲ್ಲ. ಆದರೆ ಈ ಬಗ್ಗೆ ಪಾಕಿಸ್ತಾನ ಮಾಧ್ಯಮವೊಂದು ವರದಿ ಮಾಡಿದ್ದು, ಶೋಯೆಬ್ ಮಲಿಕ್‌ ವಿವಾಹೇತರ ಸಂಬಂಧ ಹೊಂದಿದ್ದೇ ಸಾನಿಯಾ ವಿಚ್ಛೇದನ ನೀಡಲು ಕಾರಣ ಎಂದು ಹೇಳಿದೆ.

ಶೋಯೆಬ್ ಮಲಿಕ್‌ಗೆ ಮೂರನೇ ವಿವಾಹ

ಶೋಯೆಬ್ ಮಲಿಕ್ ಅವರ ಮೂರನೇ ವಿವಾಹದಲ್ಲಿ ಕ್ರಿಕೆಟಿಗನ ಕುಟುಂಬ ಸದಸ್ಯರು ಯಾರೂ ಇರಲಿಲ್ಲ ಎಂದು ವರದಿ ಹೇಳಿದೆ. ಶೋಯೆಬ್ ಮಲಿಕ್ ಮೂರನೇ ಬಾರಿಗೆ ಮದುವೆಯಾಗುತ್ತಿರುವ ಸಂಗತಿಯಿಂದ ಮಲಿಕ್ ಸಹೋದರಿಯರು ಕೂಡ ಅಸಮಾಧಾನಗೊಂಡಿದ್ದಾರೆ ಎಂದು ವರದಿ ಹೇಳಿದೆ.

"ಶೋಯಬ್ ಮಲಿಕ್ ಅವರ ಕುಟುಂಬದ ಯಾವುದೇ ಸದಸ್ಯರು ಶೋಯೆಬ್ ಮಲಿಕ್ - ಸನಾ ಜಾವೇದ್ ಅವರ ಮದುವೆಗೆ ಹಾಜರಾಗಲಿಲ್ಲ. ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರೊಂದಿಗೆ ವಿಚ್ಛೇದನದ ಬಗ್ಗೆ ಮಲಿಕ್ ಸಹೋದರಿಯರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮಲಿಕ್ ಅವರ ವಿವಾಹೇತರ ಸಂಬಂಧಗಳಿಂದ ಸಾನಿಯಾ ಬೇಸತ್ತಿದ್ದಾರೆ ಎಂದು ಹೇಳಲಾಗಿದೆ" ಎಂದು ಪಾಕಿಸ್ತಾನ ಡೈಲಿ ವರದಿ ಮಾಡಿದೆ.

ಸಾನಿಯಾ ಇನ್‌ಸ್ಟಾಗ್ರಾಂ ಪೋಸ್ಟ್

ಸಾನಿಯಾ ಅಥವಾ ಶೋಯೆಬ್ ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ ಆದರೆ ಬಹಳ ಸಮಯದಿಂದ ಸುದ್ದಿಗಳು ಕೇಳಿಬಂದಿದ್ದವು. ಸಾನಿಯಾ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಯು ಇಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ಸೂಚಿಸುತ್ತದೆ.

ಸಾನಿಯಾ ಕಳೆದ ಕೆಲವು ದಿನಗಳಿಂದ ಇನ್‌ಸ್ಟಾಗ್ರಾಮ್‌ನಲ್ಲಿ ನಿಗೂಢ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, ವಿಚ್ಛೇದನದ ಬಗ್ಗೆ ಸುಳಿವು ನೀಡಿದ್ದರು. ನಿಮ್ಮ ಹೃದಯದ ಶಾಂತಿಗೆ ಏನಾದರೂ ಭಂಗವುಂಟಾದಾಗ, ಅದನ್ನು ಬಿಡಿ, ಎಂದು ಅವರು ಈ ತಿಂಗಳ ಆರಂಭದಲ್ಲಿ ಬರೆದಿದ್ದರು.

ಶೋಯೆಬ್ ಮತ್ತು ಸಾನಿಯಾ ದಂಪತಿಗೆ ಇಜಾನ್ ಎನ್ನುವ 5 ವರ್ಷದ ಮಗನಿದ್ದಾನೆ, ಇಜಾನ್ ಸದ್ಯ ಸಾನಿಯಾ ಜೊತೆ ದುಬೈನಲ್ಲಿ ವಾಸಿಸುತ್ತಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+