Samudrayaan: 6,000 ಅಡಿಗಳಷ್ಟು ಸಮುದ್ರದ ಆಳಕ್ಕೆ ಜನರನ್ನು ಕೊಂಡೊಯ್ಯಲಿದೆ ಭಾರತದ ನೌಕೆ- ಉದ್ದೇಶ, ಪ್ರಾಮುಖ್ಯತೆ, ವೆಚ್ಚ ತಿಳಿಯ
ನವದೆಹಲಿ, ಆಗಸ್ಟ್ 04: ಮಾನವಸಹಿತ ಸಬ್‌ಮರ್ಸಿಬಲ್ ಮಿಷನ್ 'ಸಮುದ್ರಯಾನ' ಯೋಜನೆಯನ್ನು ಭಾರತ ಸರ್ಕಾರ ಅನುಷ್ಠಾನಕ್ಕೆ ತರಲು ಹೊರಟಿದೆ. ಈ ಯೋಜನೆ ಅಡಿಯಲ್ಲಿ 'ಮತ್ಸ್ಯ 6000' ಜಲಾಂತರ್ಗಾಮಿ ನೌಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಸಾಗರದ ಆಳವನ್ನು ಅನ್ವೇಷಿಸಲು ಈ ನೌಕೆ ಸಜ್ಜಾಗಿದೆ. ಸಮುದ್ರದ 6,000 ಅಡಿಗಳಷ್ಟು ಆಳಕ್ಕೆ ಮೂವರನ್ನು ಸಾಗಿಸುವ ಸಾಮರ್ಥ್ಯವನ್ನು ಈ ನೌಕೆ ಹೊಂದಿದೆ.
ಯೋಜನೆಯ ಮೊದಲ ಹಂತವು 2024 ರ ವೇಳೆಗೆ ಪೂರ್ಣಗೊಳ್ಳಲಿದೆ. ನೌಕೆಯು 2026 ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ಅಕ್ಟೋಬರ್ 2021 ರಲ್ಲಿ, ಸುಧಾರಿತ ಸಬ್‌ಮರ್ಸಿಬಲ್ ಸಾಮರ್ಥ್ಯಗಳೊಂದಿಗೆ ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್ ಮತ್ತು ಚೀನಾ ಸೇರಿದಂತೆ ದೇಶಗಳ ಆಯ್ದ ಕ್ಲಬ್‌ಗೆ ಭಾರತ ಸೇರಿಕೊಂಡಿತು. ಈ ಮೂಲಕ ವಿಶಿಷ್ಟವಾದ 'ಸಮುದ್ರಯಾನ' ಮಿಷನ್ ಉಡಾವಣೆಯ ಭಾಗವಾಗಿತು.
ಯೋಜನೆಯ ಪ್ರಮುಖ ಉದ್ದೇಶವೇನು?
ಸಮುದ್ರಯಾನ ಮಿಷನ್ ಸ್ವಯಂ ಚಾಲಿತ ಮಾನವಸಹಿತ ಸಬ್‌ಮರ್ಸಿಬಲ್ ಅನ್ನು ಅಭಿವೃದ್ಧಿಪಡಿಸುತ್ತದೆ. ಇದು ವೈಜ್ಞಾನಿಕ ಸಂವೇದಕಗಳು ಮತ್ತು ಉಪಕರಣಗಳ ಸೆಟ್‌ನೊಂದಿಗೆ ಸಾಗರದಲ್ಲಿ 6,000 ಮೀಟರ್‌ಗಳಷ್ಟು ಆಳವನ್ನು ಅನ್ವೇಷಿಸುವ ಸಾಮರ್ಥ್ಯವನ್ನು ಹೊಂದಿದೆ. ಸಬ್‌ಮರ್ಸಿಬಲ್ 12 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ತುರ್ತು ಸಂದರ್ಭಗಳಲ್ಲಿ 96 ಗಂಟೆಗಳವರೆಗೆ ಇರುತ್ತದೆ.

ಸಮುದ್ರದ ಆಳವನ್ನು ಅನ್ವೇಷಿಸುವ ಪ್ರಾಮುಖ್ಯತೆ ಏನು?
ಪ್ರಪಂಚವು ಸುಮಾರು ಶೇ 70 ಸಾಗರಗಳಿಂದ ಆವೃತವಾಗಿದೆ. ಈ ಹಿನ್ನೆಲೆಯಲ್ಲಿ ಸಮುದ್ರದ ಆಳದ ಪರಿಶೋಧನೆಯು ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಸರಿಸುಮಾರು ಶೇ 95 ರಷ್ಟು ಸಾಗರದ ಆಳವನ್ನು ಇನ್ನೂ ಪರಿಶೋಧಿಸಲಾಗಿಲ್ಲ. ಭಾರತದ ಕರಾವಳಿಗಳು ಮೂರು ಪ್ರಮುಖ ಸಾಗರಗಳಿಂದ ಜಲಾವೃತವಾಗಿವೆ.
ಸುಮಾರು ಶೇ 30ರಷ್ಟು ಜನಸಂಖ್ಯೆಯು ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇದು ಗಮನಾರ್ಹ ಆರ್ಥಿಕತೆಯನ್ನು ಬೆಂಬಲಿಸುತ್ತದೆ. ಮೀನುಗಾರಿಕೆ, ಕಡಲ ಕೃಷಿ, ಪ್ರವಾಸೋದ್ಯಮ, ಜೀವನೋಪಾಯಗಳಿಗೆ ಸಹಾಯ ಮಾಡುತ್ತದೆ.

'ಸಮುದ್ರಯಾನ' ಮಿಷನ್ ಆಳವಾದ ಸಮುದ್ರದ ಪರಿಸರದ ರಹಸ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಅನ್ವೇಷಿಸದ ಅಂಶಗಳು, ಖನಿಜಗಳು ಮತ್ತು ಸಂಪನ್ಮೂಲಗಳ ಬಗ್ಗೆ ಅಮೂಲ್ಯವಾದ ಜ್ಞಾನವನ್ನು ಹೊತ್ತು ತರುತ್ತದೆ.
ಯೋಜನೆಯ ಒಟ್ಟು ವೆಚ್ಚ
ಸಂಪೂರ್ಣ ಐದು ವರ್ಷಗಳ ಮಿಷನ್‌ನ ಅಂದಾಜು ವೆಚ್ಚ 4077 ಕೋಟಿ ರೂಪಾಯಿಗಳಾಗಿದೆ. ಮೊದಲ ಹಂತಕ್ಕೆ ( 2021-2024 ) ಸರಿಸುಮಾರು 2823.4 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ












Click it and Unblock the Notifications