ಕೃಷ್ಣಮೃಗ ಬೇಟೆ: ಸಲ್ಮಾನ್ ಖಾನ್ ಅರ್ಜಿ ಭವಿಷ್ಯ ಸೋಮವಾರ ಪ್ರಕಟ
ಜೈಪುರ, ಮೇ 6: ಕೃಷ್ಣಮೃಗಗಳ ಬೇಟೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ನಟ ಸಲ್ಮಾನ್ ಖಾನ್, ಸೋಮವಾರ ಜೋಧಪುರ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ನ್ಯಾಯಾಲಯದ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಸಲ್ಮಾನ್ ಖಾನ್ ಈಗಾಗಲೇ ಜೋಧಪುರಕ್ಕೆ ತೆರಳಿದ್ದಾರೆ.
ಜೋಧಪುರದ ಹಳ್ಳಿಯೊಂದರಲ್ಲಿ ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಜೋಧಪುರ ನ್ಯಾಯಾಲಯ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ಪರ ವಕೀಲರು ಮೇಲ್ಮನವಿ ಸಲ್ಲಿಸಿದ್ದಾರೆ. ಸಲ್ಮಾನ್ ಮೇಲಿನ ಆರೋಪಗಳನ್ನು ಕೈಬಿಡುವಂತೆ ಅವರು ಕೋರಿದ್ದಾರೆ. ಈ ಅರ್ಜಿಯ ವಿಚಾರಣೆ ಸೋಮವಾರ ನಡೆಯಲಿದೆ.

ಸಲ್ಮಾನ್ ಸೇರಿದಂತೆ 6 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 'ಹಮ್ ಸಾತ್ ಸಾತ್ ಹೈ' ಚಿತ್ರದ ಸಹ ಕಲಾವಿದರಾದ ಸೈಫ್ ಅಲಿ ಖಾನ್, ನೀಲಮ್, ಟಬು ಮತ್ತು ಸೊನಾಲಿ ಬೇಂದ್ರೆ ಹಾಗೂ ಜೋಧಪುರ ನಿವಾಸಿ ದುಷ್ಯಂತ್ ಸಿಂಗ್ ಅವರನ್ನು ನಿರಪರಾಧಿಗಳೆಂದು ಪ್ರಕಟಿಸಿದ್ದ ನ್ಯಾಯಾಲಯ, ಸಲ್ಮಾನ್ ಖಾನ್ ಅವರಿಗೆ ಶಿಕ್ಷೆ ವಿಧಿಸಿತ್ತು. ಎರಡು ದಿನ ಜೈಲಿನಲ್ಲಿ ಕಳೆದಿದ್ದ ಸಲ್ಮಾನ್, ಏಪ್ರಿಲ್ 7ರಂದು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು.












Click it and Unblock the Notifications