Get Updates
Get notified of breaking news, exclusive insights, and must-see stories!

Sabarimala: ಶಬರಿಮಲೆ ದರ್ಶನ- ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವುದು ಹೇಗೆ?

ವಿಶ್ವದ ವಿಖ್ಯಾತ ದೇವಸ್ಥಾನಗಳಲ್ಲಿ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕೂಡ ಒಂದು. ಸದ್ಯ ಮಂಡಲ ಮಕರವಿಳಕ್ ತೀರ್ಥಯಾತ್ರೆಯ ಋತು ಆರಂಭವಾಗಿದೆ. ಈ ಋತುವಿನಲ್ಲಿ ಅಯ್ಯಪ್ಪನ ದರ್ಶನಕ್ಕೆ ಭಕ್ತರು ಶಬರಿಮಲೆ ಸನ್ನಿಧಿಯತ್ತ ಪ್ರಯಾಣ ಆರಂಭಿಸುತ್ತಾರೆ. ಕಳೆದ ದಿನ ಬೆಳಗಿನ ಜಾವ ಮೂರು ಗಂಟೆಗೆ ಶಬರಿಮಲೆ ಅಯ್ಯಪ್ಪನ ದೇವಸ್ಥಾನ ತೆರೆಯಲಾಯಿತು. ಮೊದಲನೇ ದಿನ 70000 ಜನರು ದರ್ಶನಕ್ಕಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದರು. ಇಂದಿನಿಂದ 18 ಗಂಟೆಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಹದಿನೆಂಟು ಮೆಟ್ಟಿಲುಗಳನ್ನು ಏರಿ ಮಲೆಯಲ್ಲಿ ನೆಲೆಯಾಗಿರುವ ಅಯ್ಯಪ್ಪ ಸ್ವಾಮಿಯನ್ನು ಕಣ್ತುಂಬಿಕೊಂಡೊಡನೆ ಜೀವನವೇ ಸಾರ್ಥಕ ಎಂಬುವಷ್ಟು ನೆಮ್ಮದಿಯಾಗುತ್ತದೆ. ಹೀಗಾಗಿ ಸಾಗರೋಪಾದಿಯಲ್ಲಿ ಭಕ್ತರು ಅಯ್ಯಪ್ಪನ ದರ್ಶನ್ನಕ್ಕೆ ಶಬರಿಮಲೆಗೆ ಆಗಮಿಸುತ್ತಾರೆ. ಇಂದಿನಿಂದ ಪ್ರತಿದಿನ ದೇವಸ್ಥಾನದ ಬಾಗಿಲನ್ನು ಬೆಳಗ್ಗೆ 3 ಗಂಟೆಗೆ ತೆರೆಯಲಾಗುತ್ತದೆ. ಮಧ್ಯಾಹ್ನ 1ಗಂಟೆಗೆ ಮುಚ್ಚಲಾಗುತ್ತದೆ. ಮತ್ತೆ ಮಧ್ಯಾಹ್ನ 3 ಗಂಟೆಗೆ ತೆರೆದು, ರಾತ್ರಿ 11 ಗಂಟೆಗೆ ಹರಿವರಾಸನಂ ಗೀತೆಯನ್ನು ಹಾಡುವ ಮೂಲಕ ಮುಚ್ಚಲಾಗುತ್ತದೆ.

Sabarimala darshan 2024 how to book online ticket

ಬೆಳಗ್ಗೆ ದೇವಸ್ಥಾನದ ಬಾಗಿಲು ತೆರೆದ ಕೂಡಲೆ ತುಪ್ಪದ ದೀಪ ಬೆಳಗಿಸಿ, ನಂತರ ನಿರಂತರ ಪೂಜೆಗಳು ನಡೆಯಲಿವೆ. ಇನ್ನೂ ಮಂಡಲ ಪೂಜೆಯನ್ನು ಡಿಸೆಂಬರ್ 26ರಂದು ನಿಗದಿಪಡಿಸಲಾಗಿದ್ದು, ಅಂದು ರಾತ್ರಿ 10 ಗಂಟೆಗೆ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ಈ ಋತುವಿನಲ್ಲಿ ನೀವು ಕೂಡ ಶಬರಿಮಲೆಗೆ ಹೋಗಬೇಕು ಅಂದುಕೊಂಡಿದ್ದರೆ ಆನ್‌ಲೈನ್‌ ಮೂಲಕ ಟಿಕೆಟ್ ಬುಕ್ ಮಾಡಬೇಕಾಗುತ್ತದೆ.

ಶಬರಿಮಲೆ ದರ್ಶನವನ್ನು ಆನ್‌ಲೈನ್‌ನಲ್ಲಿ ಹೇಗೆ ಬುಕ್ ಮಾಡುವುದು ಎಂಬುದರ ಕುರಿತು ನಿಮಗೆ ಸಂದೇಹವಿದ್ದರೆ ಚಿಂತಿಸಬೇಡಿ. ವರ್ಚುವಲ್ ಕ್ಯೂ ಮೂಲಕ ದರ್ಶನ್ ಪಡೆಯಲು ಟಿಕೆಟ್ ಬುಕ್ ಮಾಡುವುದು ಹೇಗೆ ಎಂದು ವಿವರವಾಗಿ ತಿಳಿಯೋಣ. ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನೀವು ವರ್ಚುವಲ್ ಕ್ಯೂ ಅನ್ನು ಬುಕ್ ಮಾಡಬಹುದು.

ಶಬರಿಮಲೆ ಆನ್‌ಲೈನ್ ಟಿಕೆಟ್ ಬುಕಿಂಗ್:

*ಶಬರಿಮಲೆ ದರ್ಶನಕ್ಕಾಗಿ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು https://sabarimala.kerala.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ. ನಿಮ್ಮ ಫೋನ್ ಸಂಖ್ಯೆ ಮತ್ತು ಇಮೇಲ್ ಬಳಸಿ ನೀವು ಲಾಗಿನ್ ಮಾಡಬಹುದು.

*ನೀವು ಮೊದಲ ಬಾರಿಗೆ ನೋಂದಾಯಿಸುತ್ತಿದ್ದರೆ, ನೀವು ಹೊಸ ಬಳಕೆದಾರ ID ಅನ್ನು ರಚಿಸಬೇಕು. ಪರಿಶೀಲನೆಗಾಗಿ ನೀವು OTP ಅನ್ನು ಸ್ವೀಕರಿಸುತ್ತೀರಿ. ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ನಿಮ್ಮ ID ಪುರಾವೆ ವಿವರಗಳನ್ನು ನಮೂದಿಸಿ.

*ನಿಮ್ಮ ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಪಾಸ್‌ಪೋರ್ಟ್‌ನಂತಹ ಮಾನ್ಯ ಪಡೆದ ಸರ್ಕಾರಿ ಐಡಿಯನ್ನು ಒದಗಿಸಿ. 'ಮುಂದುವರಿಸಿ' ಬಟನ್ ಕ್ಲಿಕ್ ಮಾಡಿ.

*ನಿಮ್ಮ ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಪಾಸ್‌ಪೋರ್ಟ್‌ನಂತಹ ಮಾನ್ಯ ಸರ್ಕಾರಿ ಐಡಿಯನ್ನು ಒದಗಿಸಿ. 'ಮುಂದುವರಿಸಿ' ಬಟನ್ ಕ್ಲಿಕ್ ಮಾಡಿ.

*ನಿಮ್ಮ ನೋಂದಾಯಿತ ಫೋನ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ನಿಮ್ಮ ಖಾತೆಯನ್ನು ಪರಿಶೀಲಿಸಲು ಈ OTP ಬಳಸಿ. ಶಬರಿಮಲೆ ದರ್ಶನದ ಟಿಕೆಟ್‌ಗಳನ್ನು ಬುಕ್ ಮಾಡಲು ವರ್ಚುವಲ್ ಕ್ಯೂ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಶಬರಿಮಲೆ ದರ್ಶನಕ್ಕೆ ದಿನಾಂಕ, ಮಾರ್ಗ ಮತ್ತು ಸಮಯವನ್ನು ಆಯ್ಕೆಮಾಡಿ. ನಿಮ್ಮ ಶಬರಿಮಲೆಯ ವರ್ಚುವಲ್ ಕ್ಯೂ ಟಿಕೆಟ್ ಬುಕಿಂಗ್ ಅನ್ನು ಖಚಿತಪಡಿಸಲು ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ. 5 ವರ್ಷದೊಳಗಿನ ಮಕ್ಕಳಿಗೆ ವರ್ಚುವಲ್ ಕ್ಯೂ ಟಿಕೆಟ್ ಅಗತ್ಯವಿಲ್ಲ. ಈ ವಯಸ್ಸಿನಿಂದ ಮೇಲ್ಪಟ್ಟವರಿಗೆ ಟಿಕೆಟ್ ಆನ್‌ಲೈನ್‌ ಟಿಕೆಟ್ ಬುಕ್ ಮಾಡಬೇಕು.

ತೀರ್ಥಕ್ಷೇತ್ರದಲ್ಲಿ ಐದು ಹಂತಗಳಲ್ಲಿ 14,000 ಪೊಲೀಸರನ್ನು ನಿಯೋಜಿಸಲಾಗಿದೆ. ಪಂಪಾದಲ್ಲಿ 10,000 ವಾಹನಗಳ ನಿಲುಗಡೆಗೆ ನಿಲಕ್ಕಲ್ ಪಾರ್ಕಿಂಗ್ ಸೌಲಭ್ಯ ಮತ್ತು ಸಣ್ಣ ವಾಹನಗಳಿಗೆ ಹೆಚ್ಚುವರಿ ಸ್ಥಳದ ವ್ಯವಸ್ಥೆ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+