Sabarimala Yatra: ಶಬರಿಮಲೆಗೆ ಹೋಗಲು ಹೊಸ ನಿಯಮ: ಭಕ್ತಾದಿಗಳ ಅನುಕೂಲಕ್ಕೆ ವಿಶೇಷ ಸೌಲಭ್ಯ!
ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ ಪ್ರತಿ ವರ್ಷ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗದಿಂದ ಲಕ್ಷಾಂತರ ಜನ ಭಕ್ತಾದಿಗಳು ಹೋಗುತ್ತಾರೆ. ಈ ಸ್ವಾಮಿಯ ಮತ್ತೊಂದು ವಿಶೇಷವೆಂದರೆ ಹಿಂದೂ ಭಕ್ತಾದಿಗಳು ಮಾತ್ರವಲ್ಲದೇ ವಿವಿಧ ಧರ್ಮದವರು ಸಹ ಸ್ವಾಮಿ ಸನ್ನಿಧಾನಕ್ಕೆ ಬರುತ್ತಾರೆ.
ಕಳೆದ ಬಾರಿ ಶಬರಿಮಲೆ ಯಾತ್ರೆ (ದೇವರ ಮೂರ್ತಿ ದರ್ಶನಕ್ಕೆ) ಒಮ್ಮೆಗೆ ಲಕ್ಷಾಂತರ ಜನ ಆಗಮಿಸಿದ ಹಿನ್ನೆಲೆಯಲ್ಲಿ ಭಾರೀ ಗದ್ದಲ ಹಾಗೂ ಅವಘಡಗಳು ಸಂಭವಿಸಿತ್ತು. ಹೀಗಾಗಿ, ಈ ಬಾರಿ ದುರಂತಗಳನ್ನು ತಪ್ಪಿಸಲು ಹಾಗೂ ಭಕ್ತಾಧಿಗಳು ಸುಗಮ ದರ್ಶನಕ್ಕಾಗಿ ಕೇರಳ ಸರ್ಕಾರವು ಮಹತ್ವದ ಆದೇಶವೊಂದನ್ನು ಮಾಡಿದೆ.

ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ ಕರ್ನಾಟಕದಿಂದ ಸಣ್ಣ ಮಕ್ಕಳಿಂದ ಹಿರಿಯರ ವರೆಗೆ ಲಕ್ಷಾಂತರ ಜನ ಪ್ರತಿ ವರ್ಷವೂ ಭೇಟಿ ನೀಡುತ್ತಾರೆ. 41 ದಿನಗಳ ಈ ತೀರ್ಥಯಾತ್ರೆಯ ಋತುವನ್ನು ಮಂಡಲ (ಋತು) ಎಂದು ಕರೆಯಲಾಗುತ್ತದೆ.
ಈ ಸೀಸನ್ ಅನ್ನು ಮಂಡಲ - ಮಕರವಿಳಕ್ಕು ಎಂದೂ ಸಹ ಕರೆಯಲಾಗುತ್ತದೆ. ಸೀಸನ್ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಇರುತ್ತದೆ. ಮರಕ ಸಂಕ್ರಾಂತಿಯ ದಿನ ಮಕರ ಜ್ಯೋತಿ ಬೆಳಗುವುದನ್ನು ನೋಡುವುದಕ್ಕೆ ದಕ್ಷಿಣ ಹಾಗೂ ಉತ್ತರ ಭಾರತದಿಂದ ಲಕ್ಷಾಂತರ ಜನ ಸೇರುತ್ತಾರೆ. ದೇವರ ದರ್ಶನದ ವೇಳೆ ಕಳೆದ ಬಾರಿ ಭಾರೀ ಅವಘಡವೇ ಸಂಭವಿಸಿತ್ತು.
ಇತ್ತೀಚಿನ ವರ್ಷಗಳಲ್ಲಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಆದರೆ, ಕೇರಳ ಸರ್ಕಾರವು ಭಕ್ತಾದಿಗಳ ಸಂಖ್ಯೆಗೆ ಅನುಗುಣವಾಗಿ ವ್ಯವಸ್ಥೆ ಮಾಡಿಕೊಂಡಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಇದೀಗ ಕೇರಳ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಶಬರಿಮಲೆಗೆ ಹೋಗುವವರಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಅಲ್ಲದೇ, ಕೆಲವು ನಿರ್ದಿಷ್ಟ ನಿಯಮಗಳನ್ನು ಸಹ ಮಾಡಲಾಗಿದೆ. ಈ ನಿಯಮಯದ ಪ್ರಕಾರ, ಒಂದು ಬ್ಯಾಚ್‌ನಲ್ಲಿ ಇಷ್ಟೇ ಜನ ಹೋಗುವ ವ್ಯವಸ್ಥೆ ಇರಲಿದೆ. ಉದಾ: ತಿರುಪತಿ ತಿರುಮಲ ಮಾದರಿಯ ವ್ಯವಸ್ಥೆಯನ್ನು ಇಲ್ಲೂ ಜಾರಿ ಮಾಡಲಾಗುತ್ತಿದೆ.
ಆಧಾರ್ ಕಡ್ಡಾಯ: ಮೂರು ಬುಕ್ಕಿಂಗ್ ಸ್ಪಾಟ್: ಈ ಬಾರಿ ಶಬರಿಮಲೆಗೆ ಭೇಟಿ ನೀಡುವ ಅಯ್ಯಪ್ಪ ಭಕ್ತಾದಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ತೆಗೆದುಕೊಂಡು ಬರಬೇಕು ಎಂದು ಕೇರಳದ (ಶಬರಿಮಲೆ) ತಿರುವಾಂಕೂರು ದೇವಸ್ವಂ ಮಂಡಳಿ ಆದೇಶ ಮಾಡಿದೆ. ಅಲ್ಲದೇ ದೇವರ ಸನ್ನಿಧಿಗೆ ಭೇಟಿ ನೀಡುವ ಭಕ್ತಾಧಿಗಳಿಗೆ ದೇವಸ್ಥಾನ ಪ್ರವೇಶಕ್ಕೆ ಮೂರು ಭಾಗದಲ್ಲಿ ಬುಕ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಈ ಬಾರಿ ಎಲ್ಲಾ ಭಕ್ತಾದಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಬೇಕು. ಯಾತ್ರೆ ಮಾಡುವ ಗುಂಪಿನ ನಾಯಕರು (ಮುಖ್ಯಸ್ವಾಮಿ) ನೊಂದಾಯಿಸಿ ಉಳಿದ ಸ್ವಾಮಿಗಳ ಹೆಸರು ನೊಂದಾಯಿಸಿಕೊಳ್ಳಬಹುದು. ಆದರೆ, ಬುಕ್ಕಿಂಗ್ ಕ್ಯಾನ್ಸಲ್ ಮಾಡಿದರೆ ಮತ್ತೆ ಅದು ಮಾನ್ಯವಾಗುವುದಿಲ್ಲ.
ವಂಡಿಪ್ಪೆರಿಯಾರ್- ಪುಲಿಮೇಡು , ಎರುಮೇಲಿ - ಸತ್ರಂ ಮತ್ತು ಪಂಪಾದಲ್ಲಿ (Pamba, Erumeli, and Vandiperiyar) ಅಯ್ಯಪ್ಪ ಸ್ವಾಮಿ ಭಕ್ತಾಧಿಗಳಿಗೆ ರಿಯಲ್ ಟೈಮ್ ಬುಕ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೇ ಈ ಬಾರಿ ಎಲ್ಲಾ ಭಕ್ತಾದಿಗಳಿಗೆ ವಿಶೇಷ ವಿಮಾ ಸೌಲಭ್ಯವನ್ನೂ ಕಲ್ಪಿಸಲಾಗಿದೆ.












Click it and Unblock the Notifications