Putin India Visit: ಡಾಲರ್ ಅಲ್ಲ ರೂಪಾಯಿ ಮೂಲಕವೇ ವ್ಯಾಪಾರ & ವ್ಯವಹಾರ, ಅಮೆರಿಕಗೆ ಪುಟಿನ್ ಕೌಂಟರ್!

ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಭಾರಿ ದೊಡ್ಡ ಮಟ್ಟದಲ್ಲಿ ಕುಸಿತ ಕಾಣುತ್ತಿದ್ದು, ಐತಿಹಾಸಿಕ ಕನಿಷ್ಠ ಅಂದರೆ 90 ರೂಪಾಯಿಗೆ ಕುಸಿತ ಕಂಡಿದೆ ರೂಪಾಯಿ. ಹೀಗೆ ಭಾರತದ ರೂಪಾಯಿ ಅಮೆರಿಕನ್ ಡಾಲರ್ ಎದುರು ಕುಸಿತ ಕಾಣುತ್ತಿರುವುದು ಆರ್ಥಿಕತೆಗೆ ಕೂಡ ದೊಡ್ಡ ಹೊಡೆತ ಕೊಡುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ಡಾಲರ್ ಅಲ್ಲ ರೂಪಾಯಿ ಮೂಲಕವೇ ವ್ಯಾಪಾರ & ವ್ಯವಹಾರ ಮಾಡೋಣ ಅಂತಾ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಈಗ ಭರವಸೆ ನೀಡಿದ್ದಾರೆ. ಇದು ಅಮೆರಿಕಗೆ ಒಂದು ಹಂತದಲ್ಲಿ ಚಿಂತೆ ಹೆಚ್ಚು ಮಾಡುವಂತೆ ಆಗಿದೆ.

ಅಮೆರಿಕ ಡಾಲರ್ ಮೂಲಕ ಜಾಗತಿಕ ಆರ್ಥಿಕತೆ ಮೇಲೆ ಬಿಗಿಯಾದ ಹಿಡಿತ ಹೊಂದಿದ್ದು, ಹೀಗೆ ಬೇರೆ ದೇಶಗಳ ಅಭಿವೃದ್ಧಿಗೆ ಕೂಡ ಅಮೆರಿಕದ ಡಾಲರ್ ಅಡ್ಡಿಯಾಗಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಅಲ್ಲದೆ ಡಾಲರ್ ಜಗತ್ತಿನ ಅತ್ಯಂತ ಶಕ್ತಿಶಾಲಿ ಕರೆನ್ಸಿಗಳ ಪೈಕಿ ಒಂದಾಗಿದ್ದು, ಈ ರೀತಿಯ ವ್ಯಾಪಾರವೇ ಬೇಡ ಅನ್ನೋ ಒತ್ತಾಯ ಕೂಡ ಕೇಳಿ ಬರುತ್ತಿದೆ. ಇದ್ಯಾವುದಕ್ಕೂ ಅಮೆರಿಕ ಮಾತ್ರ ಕೇರ್ ಮಾಡುತ್ತಿಲ್ಲ. ಇಂತಹ ಸಮಯದಲ್ಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇದೀಗ ಬಿಟ್ಟಿರುವ ಹೊಸ ಬಾಣಕ್ಕೆ ಡಾಲರ್ ಬುಡ ಅಲ್ಲಾಡುತ್ತಿದೆ.

Russian President Vladimir Putin Said This About Indian Rupee

ಡಾಲರ್ ಎದುರು ರೂಪಾಯಿ ಐತಿಹಾಸಿಕ ಕುಸಿತ

ಭಾರತದ ಆರ್ಥಿಕತೆಗೆ ದಿಢೀರ್ ಆಘಾತ ಎದುರಾಗಿ, ಅಮೆರಿಕನ್ ಡಾಲರ್ ಎದುರು ಇತಿಹಾಸದಲ್ಲೇ ಮೊದಲ ಬಾರಿಗೆ ರೂಪಾಯಿ ಮೌಲ್ಯ 90 ರೂಪಾಯಿಗೆ ಕುಸಿತ ಕಂಡಿತ್ತು. ಹಾಗೇ ಈ ಬೆಳವಣಿಗೆ ಆತಂಕದ ವಾತಾವರಣ ಸೃಷ್ಟಿ ಮಾಡಿತ್ತು. ಈ ಆತಂಕಕಾರಿ ಬೆಳವಣಿಗೆ ದೇಶದ ಆರ್ಥಿಕತೆ ಸ್ಥಿರತೆಯ ಬಗ್ಗೆ ತೀವ್ರ ಕಳವಳ ಹುಟ್ಟು ಹಾಕಿದೆ. ಇಂತಹ ಸಮಯದಲ್ಲೇ ರಷ್ಯಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿರುವ ವೇಳೆ, ರೂಪಾಯಿ ಮೂಲಕವೇ ವ್ಯಾಪಾರ ಮುಂದುವರಿಸೋಣ ಎಂದಿರುವುದು ಭಾರಿ ಕುತೂಹಲ ಮೂಡಿಸಿದೆ.

ಚೀನಾ ಜೊತೆಗೂ ರೂಪಾಯಿ ಮೂಲಕ ವ್ಯವಹಾರ?

ಮತ್ತೊಂದು ಕಡೆ ಚೀನಾ ಜೊತೆಯಲ್ಲಿ ಕೂಡ ಭಾರತ ರೂಪಾಯಿ ಮೂಲಕ ವ್ಯವಹಾರ ನಡೆಸಿ ಅಮೆರಿಕನ್ ಡಾಲರ್‌ಗೆ ಮತ್ತೊಂದು ಆಘಾತ ನೀಡುತ್ತಾ ಎಂಬ ಕುತೂಹಲ ಮೂಡಿದೆ. ಈಗಾಗಲೇ ಬ್ರಿಕ್ಸ್ ಒಕ್ಕೂಟದ ದೇಶಗಳು ತಮ್ಮ ಒಳಗೆ ತಮ್ಮದೇ ಕರೆನ್ಸಿ ಮೂಲಕ ವಹಿವಾಟು ನಡೆಸೋದಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿರುವ ಅಮೆರಿಕಗೆ ನಡುಕ ಹುಟ್ಟಿಸಿದೆ. ಅಲ್ಲದೆ ಬ್ರಿಕ್ಸ್ ದೇಶಗಳದ್ದೇ ಒಂದು ಕರೆನ್ಸಿ ಜಾರಿಗೆ ತರುವ ಚಿಂತನೆ ಕೂಡ ನಡೆದಿದ್ದು, ಜಾಗತಿಕ ಆರ್ಥಿಕ ವಲಯದಲ್ಲಿ ಭಾರಿ ದೊಡ್ಡ ಸಂಚಲನದ ಮುನ್ಸೂಚನೆ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+