ಭಾರತದ ಆರ್ಥಿಕತೆಗೆ ದಿಢೀರ್ ಆಘಾತ, 90 ರೂಪಾಯಿ ದಾಟಿದ ಡಾಲರ್ ಮೌಲ್ಯ... Rupee And Dollar
ಭಾರತದ ಆರ್ಥಿಕತೆಗೆ ದಿಢೀರ್ ಆಘಾತ ಎದುರಾಗಿದೆ, ಜಾಗತಿಕ ಬಲಿಷ್ಠ ಆರ್ಥಿಕ ರಾಷ್ಟ್ರವಾಗುವ ಕಡೆಗೆ ದೊಡ್ಡ ಹೆಜ್ಜೆ ಇಟ್ಟಿರುವ ಭಾರತಕ್ಕೆ ಈಗ ಶಾಕ್ ಸಿಕ್ಕಿದೆ. ಅಮೆರಿಕನ್ ಡಾಲರ್ ಎದುರು, 90 ರೂಪಾಯಿ ದಾಟಿದ ರೂಪಾಯಿ ಮೌಲ್ಯ ಈಗ ಆತಂಕದ ವಾತಾವರಣ ಸೃಷ್ಟಿ ಮಾಡುತ್ತಿದೆ. ಹಾಗಾದರೆ ಭಾರತೀಯ ಆರ್ಥಿಕತೆ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ ಈ ಬೆಳವಣಿಗೆ? ಭಾರತದ ಪ್ರಜೆಗಳಿಗೆ ಇದರಿಂದ ಏನೆಲ್ಲಾ ಸಮಸ್ಯೆ ಎದುರಾಗಬಹುದು? ಎಂಬ ಚರ್ಚೆ ಶುರುವಾಗಿದೆ.
ನೋಡ ನೋಡುತ್ತಲೇ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಇದೀಗ 90 ರೂಪಾಯಿ 19 ಪೈಸೆಗೆ ತಲುಪಿದೆ. ಈ ಮೂಲಕ ಇದನ್ನು ಅಸುರಕ್ಷಿತ ಮಟ್ಟ ಎಂದು ಈಗ ಆರ್ಥಿಕ ತಜ್ಞರು ಪರಿಗಣಿಸಿದ್ದು, ಈ ಆತಂಕಕಾರಿ ಬೆಳವಣಿಗೆ ದೇಶದ ಆರ್ಥಿಕತೆ ಸ್ಥಿರತೆಯ ಬಗ್ಗೆ ತೀವ್ರ ಕಳವಳ ಹುಟ್ಟು ಹಾಕಿದೆ. ಪ್ರಮುಖವಾಗಿ 90 ರೂಪಾಯಿ ದಾಟಿದ ಡಾಲರ್ ಮೌಲ್ಯ ಹಣಕಾಸು ಮಾರುಕಟ್ಟೆಗಳಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದೆ. ಹಲವು ವಿಚಾರಗಳಲ್ಲಿ ಇದು ತೀವ್ರ ಪ್ರಭಾವ ಬೀರುವ ಸಾಧ್ಯತೆ ಇದ್ದು, ಷೇರು ಮಾರುಕಟ್ಟೆ ಕೂಡ ಇದರ ಪರಿಣಾಮ ಎದುರಿಸುವ ಮುನ್ಸೂಚನೆ ಇದೀಗ ಸಿಗುತ್ತಿದೆ.

ರೂಪಾಯಿ ಮೌಲ್ಯ ಕುಸಿತದಿಂದ ಆಘಾತ...
ಹೌದು, ದಿಢೀರ್ ರೂಪಾಯಿ ಮೌಲ್ಯ ಕುಸಿತದಿಂದ ಏನೆಲ್ಲಾ ಸಮಸ್ಯೆ ಎದುರಾಗಲಿದೆ? ಎನ್ನುವ ಚರ್ಚೆ ಶುರುವಾಗಿದೆ. ಪ್ರಮುಖವಾಗಿ ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತು ದುಬಾರಿ ಆಗಲಿದ್ದು, ಈ ರೀತಿ ಆಮದು ವಸ್ತುಗಳ ಬೆಲೆ ಏರಿಕೆ ಪರಿಣಾಮ ಹಣದುಬ್ಬರವು ಕೂಡ ಏರುಪೇರು ಆಗಲಿದೆ. ವಿಶೇಷವಾಗಿ ಇಂಧನ ತೈಲ, ಖಾದ್ಯ ತೈಲ, ಎಲೆಕ್ಟ್ರಾನಿಕ್ಸ್ & ಇತರ ಅಗತ್ಯ ವಸ್ತುಗಳು ದಿಢೀರ್ ಏರಿಕೆ ಕಾಣುವ ಭೀತಿ ಕಾಡುತ್ತಿದೆ. ಹಾಗೇ ಅಂತಾರಾಷ್ಟ್ರೀಯ ಮಟ್ಟದಲ್ಲಿನ ವ್ಯಾಪಾರ ಕೂಡ ಏರುಪೇರು ಆಗುವ ಆತಂಕ ಕಾಡುತ್ತಿದೆ.
ಆರ್‌ಬಿಐ ನೀತಿ ಬದಲಾವಣೆ ಗ್ಯಾರಂಟಿ?
ಅಂದಹಾಗೆ ಭಾರತದ ರಿಸರ್ವ್ ಬ್ಯಾಂಕ್ ತನ್ನ ನೀತಿಗಳನ್ನು ರೂಪಾಯಿ ಮೌಲ್ಯವನ್ನು ಆಧರಿಸಿ ನಿರ್ಧಾರ ಮಾಡುತ್ತದೆ. ಹೀಗಿದ್ದಾಗ ಆರ್‌ಬಿಐ ರೂಪಾಯಿ ಮೌಲ್ಯ ರಕ್ಷಣೆ ಮಾಡಬೇಕಾಗುತ್ತದೆ. ಈ ಹಿನ್ನೆಲೆ ಡಾಲರ್ ಎದುರು ರೂಪಾಯಿ ಮೌಲ್ಯ ತೀವ್ರವಾಗಿ ಕುಸಿತ ಕಂಡಿರುವ ಕಾರಣಕ್ಕೆ ಆರ್‌ಬಿಐ ನೀತಿ ಬದಲಾವಣೆ ಆಗುತ್ತಾ? ಎಂಬ ಟೆನ್ಷನ್ ಶುರುವಾಗಿದೆ. ಮತ್ತೊಂದು ಕಡೆ ಹೊರ ದೇಶದಲ್ಲಿ ಓದಬೇಕು ಅಂತಾ ಕನಸು ಕಟ್ಟಿಕೊಂಡವರಿಗೆ ಕೂಡ ಇದರಿಂದ ಶಾಕ್ ಸಿಕ್ಕಂತೆ ಆಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications