RSS ಭಾರತದ ಭಯೋತ್ಪಾದನಾ ಸಂಘಟನೆ ಎಂದಿದ್ದೇಕೆ ಅಂಬೇಡ್ಕರ್ ಮೊಮ್ಮಗ?

ಬೀದರ್, ಜನವರಿ.27: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಭಾರತದ ಭಯೋತ್ಪಾದನಾ ಸಂಸ್ಥೆ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮರಿ ಮೊಮ್ಮಗ ರಾಜರತ್ನ ಅಂಬೇಡ್ಕರ್ ಆರೋಪಿಸಿದ್ದಾರೆ.

Recommended Video

      ಅಂಬೇಡ್ಕರ್ ಮೊಮ್ಮಗನ ವಿವಾದಾತ್ಮಕ ಹೇಳಿಕೆ | AMBEDKAR | RAJARATHNA AMBEDKAR | GRANDSON | RSS

      ಬೀದರ್ ನಲ್ಲಿ ಮಾತನಾಡಿದ ರಾಜರತ್ನ ಅಂಬೇಡ್ಕರ್, ಆರ್ ಎಸ್ಎಸ್ ಸಂಘಟನೆ ವಿರುದ್ಧ ಗುಡುಗಿದ್ದಾರೆ. ದೇಶವನ್ನು ಆರ್ ಎಸ್ಎಸ್ ಎಂಬ ಸಂಘಟನೆಯೇ ಹಾಳು ಮಾಡುತ್ತಿದೆ. ಈ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ಕಿಡಿ ಕಾರಿದರು.

      ಭಾರತದ ಸಂವಿಧಾನದ ಮೂಲ ಉದ್ದೇಶವನ್ನೇ ತಿರುವು ಮುರುವು ಮಾಡುವ ಪ್ರಯತ್ನವನ್ನು ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯು ಮಾಡುತ್ತಿದೆ. ಇದಕ್ಕೆ ನಾವು ಅವಕಾಶ ನೀಡಬಾರದು. ಆರ್ಎಸ್ಎಸ್ ಸಂಘಟನೆಯನ್ನು ದೇಶದಿಂದಲೇ ನಿಷೇಧಿಸಬೇಕು ಎಂದು ರಾಜರತ್ನ ಅಂಬೇಡ್ಕರ್ ಹೇಳಿದರು.

      "ಆರ್ ಎಸ್ಎಸ್ ಬಗ್ಗೆ ಪಾಕ್ ನಲ್ಲೂ ತಿಳಿಸಿದ್ದೆ"

      ಆರ್ಎಸ್ಎಸ್ ವಿರುದ್ಧ ಹರಿಹಾಯುತ್ತಿದ್ದ ವೇಳೆ ಪಾಕಿಸ್ತಾನದಲ್ಲಿ ತಾವು ಆಡಿದ ಮಾತುಗಳ ಬಗ್ಗೆ ರಾಜರತ್ನ ಅಂಬೇಡ್ಕರ್ ಉಲ್ಲೇಖಿಸಿದರು. ಈ ಹಿಂದೆ ನಾನು ಪಾಕಿಸ್ತಾನದಲ್ಲಿ ಭಾಷಣವನ್ನು ಮಾಡಿದ್ದೇನು. ಅಲ್ಲಿಯೂ ಕೂಡಾ ನಾನು ಇದನ್ನೇ ಹೇಳಿದ್ದೆನು. ಭಾರತದಲ್ಲಿ ಆರ್ಎಸ್ಎಸ್ ಎಂಬ ಒಂದು ಭಯೋತ್ಪಾದನಾ ಸಂಘಟನೆ ಇದೆ ಎಂದು ತಿಳಿಸಿದ್ದೆನು ಎಂದು ಹೇಳಿದರು.

      "ಸಾಕ್ಷಿ ಇಲ್ಲದೇ ನಾನು ಮಾತನಾಡುವುದಿಲ್ಲ"

      ಇನ್ನು, ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯು ಒಂದು ಭಯೋತ್ಪಾದನಾ ಸಂಸ್ಥೆ ಎಂಬ ಆರೋಪಕ್ಕೆ ತಕ್ಕದಾದ ಸಾಕ್ಷಿಗಳು ತಮ್ಮಲ್ಲಿವೆ. ಸಾಕ್ಷಿಗಳಿಲ್ಲದೇ ನಾನು ಆರೋಪವನ್ನು ಮಾಡುವುದಿಲ್ಲ. ಆ ಸಂಘಟನೆ ನಾಯಕರ ಹೇಳಿಕೆಗಳನ್ನು ಒಮ್ಮೆ ಗಮನಿಸಿದರೆ ಸಾಕು, ಆರ್ಎಸ್ಎಸ್ ಎಂಥಾ ಸಂಘಟನೆ ಎಂಬುದು ತಿಳಿಯುತ್ತದೆ ಎಂದು ರಾಜರತ್ನ ಕಿಡಿ ಕಾರಿದರು.

      ಸಾಧ್ವಿ ಮಾತನ್ನು ಉಲ್ಲೇಖಿಸಿದ ರಾಜರತ್ನ ಅಂಬೇಡ್ಕರ್

      ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪಕ್ಕದಲ್ಲಿಯೇ ಕುಳಿತು ಸಾಧ್ವಿಯೊಬ್ಬರು ಒಂದು ಮಾತನ್ನು ಹೇಳುತ್ತಾರೆ. ಭಾರತದ ಸೇನೆಯಲ್ಲಿನ ಮದ್ದು-ಗುಂಡುಗಳೆಲ್ಲ ಖಾಲಿಯಾದರೆ, ಆರ್ಎಸ್ಎಸ್ ಸಂಘಟನೆಯು ಸೇನೆಗೆ ಮದ್ದು-ಗುಂಡುಗಳನ್ನು ಸರಬರಾಜು ಮಾಡುತ್ತದೆ ಎಂದು ಹೇಳಿಕೆ ನೀಡುತ್ತಾರೆ. ಪ್ರಧಾನಮಂತ್ರಿ ಪಕ್ಕದಲ್ಲೇ ಸಾಧ್ವಿಯೊಬ್ಬರು ಹೀಗೆ ಹೇಳುವುದಾದರೆ, ಆರ್ಎಸ್ಎಸ್ ಬಳಿ ಅಷ್ಟೊಂದು ಮದ್ದು-ಗುಂಡುಗಳು ಎಲ್ಲಿಂದ ಬಂದವು ಎಂಬ ಅನುಮಾನ ಹುಟ್ಟುವುದಿಲ್ಲವೇ ಎಂದು ರಾಜರತ್ನ ಪ್ರಶ್ನೆ ಮಾಡಿದರು.

      "ದೇಶದಲ್ಲಿ ಆರ್ ಎಸ್ ಎಸ್ ಸಂಘಟನೆ ನಿಷೇಧಿಸಬೇಕಲ್ಲವೇ?"

      ಭಾರತದ ಸೇನೆಗೆ ಬೇಕಾಗುವಷ್ಟು ಮದ್ದು-ಗುಂಡುಗಳನ್ನು ಒಂದು ಸಂಘಟನೆಯು ಹೊಂದಿದೆ ಎಂದರೆ ಅದು ಭಯೋತ್ಪಾದನಾ ಸಂಸ್ಥೆ ಅಲ್ಲವೇ. ಇಂಥ ಸಂಸ್ಥೆಯನ್ನು ಭಾರತದಲ್ಲಿ ಬ್ಯಾನ್ ಮಾಡಬೇಕು ಅಲ್ಲವೇ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ. ಇನ್ನು, ರಾಜರತ್ನ ಅಂಬೇಡ್ಕರ್ ಭಾಷಣದ ವೇಳೆ ನೆರೆದಿದ್ದ ಜನರು ಕೂಡಾ ಹೌದು ಹೌದು ಘೋಷಣೆ ಕೂಗಿದಂತಾ ಘಟನೆಯೂ ನಡೆಯಿತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+