ಪಾನ್ಸರೆ ಹಂತಕರ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ

Subscribe to Oneindia Kannada

ಮುಂಬೈ, ಆಗಸ್ಟ್ 3: ಮಹಾರಾಷ್ಟ್ರದ ಸಿಪಿಐ ಮುಖಂಡ, ವಿಚಾರವಾದಿ ಗೋವಿಂದ್ ಪಾನ್ಸರೆ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ಬುಧವಾರ ಘೋಷಿಸಿದೆ.

ಗೋವಿಂದ್ ಪನ್ಸಾರೆಯನ್ನು ಸನಾತನ್ ಸಂಸ್ಥಾದ ಕಾರ್ಯಕರ್ತರಾದ ವಿನಯ್ ಪವಾರ್ ಮತ್ತು ಸಾರಂಗ್ ಅಕೋಲ್ಕರ್ ಕೊಲೆಗೈದಿದ್ದಾರೆ ಎನ್ನಲಾಗಿದೆ. ಇವರಿಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿ ಯಾವುದೇ ಸುಳಿವು ಸಿಗದ ಹಿನ್ನಲೆಯಲ್ಲಿ ಇದೀಗ ಸುಳಿವು ನೀಡಿದವರಿಗೆ ಸರ್ಕಾರ ಬಹುಮಾನ ಘೋಷಣೆ ಮಾಡಿದೆ.

 RS. 10 Lakh Reward For Information On Govind Pansare's Killers
Siddaramaiah Finally Waives The Loan Of Farmers | Oneindia Kannada

2015ರ ಫೆಬ್ರುವರಿ 16ರಂದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬೆಳಗಿನ ವಿಹಾರಕ್ಕೆ ಗೋವಿಂದ್ ಪನ್ಸಾರೆ ತೆರಳಿದ್ದಾಗ ಅಪರಿಚಿತರ ಗುಂಡಿಗೆ ಬಲಿಯಾಗಿದ್ದರು. ನಂತರ ಪ್ರಕರಣ ದೇಶದಾದ್ಯಂತ ಸದ್ದು ಮಾಡಿತ್ತು. ಕೊನೆಗೆ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಸಿಐಡಿಯ ವಿಶೇಷ ತನಿಖಾ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Maharashtra government on Wednesday announced a Rs. 10 lakh reward for information about two missing gunmen wanted for the killing of veteran Communist leader and social activist Govind Pansare.
Please Wait while comments are loading...