ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಿ ಲಾಂಡ್ರಿಂಗ್ ಕೇಸ್: 'ಇಡಿ' ವಿಚಾರಣೆಗೆ ರಾಬರ್ಟ್ ವಾದ್ರಾ ಹಾಜರು

|
Google Oneindia Kannada News

ಬೆಂಗಳೂರು, ಫೆಬ್ರವರಿ 06: ಮನಿ ಲಾಂಡ್ರಿಂಗ್ ಕೇಸಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವದ್ರಾ ಅವರು ಜಾರಿ ನಿರ್ದೇಶನಾಲಯ ಕಚೇರಿಗೆ ವಿಚಾರಣೆಗಾಗಿ ಹಾಜರಾಗಲಿದ್ದಾರೆ ಎಂದು ರಾಬರ್ಟ್ ಪರ ವಕೀಲರು ಹೇಳಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಗಾಂಧಿ ಕುಟುಂಬದ ಅಳಿಯ ರಾಬರ್ಟ್‌ ವಾದ್ರಾ ಅವರನ್ನು ಫೆಬ್ರವರಿ 16 ರವರೆಗೆ ಬಂಧಿಸುವಂತಿಲ್ಲ ಎಂದು ದೆಹಲಿಯ ಪಟಿಯಾಲಾ ನ್ಯಾಯಾಲಯವು ಆದೇಶ ನೀಡಿದೆ.

ಬಂಧನದಿಂದ ತಾತ್ಕಾಲಿಕ ನೆಮ್ಮದಿ ಪಡೆದ ರಾಬರ್ಟ್‌ ವಾದ್ರಾಬಂಧನದಿಂದ ತಾತ್ಕಾಲಿಕ ನೆಮ್ಮದಿ ಪಡೆದ ರಾಬರ್ಟ್‌ ವಾದ್ರಾ

ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವದ್ರಾ ಅವರಿಗೆ ಜಾರಿ ನಿರ್ದೇಶನಾಲಯವು ಬಿಸಿ ಮುಟ್ಟಿಸಿತ್ತು. ಭೂ ಹಗರಣ, ಮನಿ ಲಾಂಡ್ರಿಂಗ್ ಗೆ ಸಂಬಂಧಿಸಿದಂತೆ ಮೊದಲಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿ, ನಂತರ ದೇಶದ ವಿವಿಧೆಡೆ ವಾದ್ರಾ ಅವರ ಆಪ್ತರ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು.

ರಾಬರ್ಟ್‌ ವಾದ್ರಾ ಮೇಲೆ ಐಟಿ ದಾಳಿ, ಕಾಂಗ್ರೆಸ್‌ನಿಂದ ವಿರೋಧ ರಾಬರ್ಟ್‌ ವಾದ್ರಾ ಮೇಲೆ ಐಟಿ ದಾಳಿ, ಕಾಂಗ್ರೆಸ್‌ನಿಂದ ವಿರೋಧ

Robert Vadra likely to appear before ED in money laundering case today

ಲಂಡನ್‌ ಮೂಲದ ಸಂಸ್ಥೆಗೆ 17.77 ಕೋಟಿ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂದು ರಾಬರ್ಟ್‌ ವಾದ್ರಾ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ. ಇದೇ ಪ್ರಕರಣದಲ್ಲಿ ವಾದ್ರಾ ಆಪ್ತ ಮನೋಜ್ ಅರೋರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಲಂಡನ್ನಿನಲ್ಲಿ ವಾದ್ರಾ ಹೆಸರಿನಲ್ಲಿ 2 ಮನೆ, 6 ಫ್ಲಾಟ್ ಹಾಗೂ ಇನ್ನಿತರ ಆಸ್ತಿ ಹೊಂದಿದ್ದಾರೆ ಎಂದು ಜಾರಿನಿರ್ದೇಶನಾಲಯ ಮಾಹಿತಿ ಕಲೆ ಹಾಕಿದೆ.

English summary
Former Congress president Sonia Gandhi’s son-in-law Robert Vadra is set to appear before the Enforcement Directorate on Wednesday for questioning in a case of alleged money laundering. Vadra was granted interim bail till February 16 last week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X