ಬಿಹಾರ: ಕಾರು ಚಾಲಕನ ಬೇಜವಾಬ್ದಾರಿಗೆ 9 ಮಕ್ಕಳ ದುರಂತ ಅಂತ್ಯ!
ಮುಜಾಫರ್ ನಗರ, ಫೆಬ್ರವರಿ 24: ಬಿಹಾರದ ಮುಜಾಫರ್ ನಗರದಲ್ಲಿ ನಡೆದ ದಾರುಣ ಅಪಘಾತದಲ್ಲಿ 9 ಮಕ್ಕಳ ಮೃತರಾದ ದುರ್ಘಟನೆ ಇಂದು(ಫೆ.24) ಮಧ್ಯಾಹ್ನ ನಡೆದಿದೆ.
ಶಾಲೆ ಬಿಟ್ಟು ಮನೆಗೆ ವಾಪಸಾಗುತ್ತಿದ್ದ ಪುಟ್ಟ ಪುಟ್ಟ ಮಕ್ಕಳು ರಸ್ತೆ ದಾಟುತ್ತಿದ್ದ ಸಮಯದಲ್ಲಿ ವೇಗವಾಗಿ ಬರುತ್ತಿದ್ದ ಕಾರೊಂದು ಡಿಕ್ಕಿಹೊಡೆದ ಪರಿಣಾಮ 9 ಮಕ್ಕಳ ಸ್ಥಳದಲ್ಲೇ ಮೃತರಾಗಿದ್ದು, 24 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುಜಾಫರ್ ನಗರದ ಅಹಿಯಾಪುರ ಎಂಬಲ್ಲಿ ಶಾಲೆ ಬಿಡುತ್ತಿದ್ದಂತೇ ಮಕ್ಕಳು ರಸ್ತೆ ದಾಟಲು ಓಡಿದ್ದಾರೆ. ಈ ಸಂದರ್ಭದಲ್ಲಿ ವೇಗವಾಗಿ ಬಂದ ಬುಲೆರೋ ಮಕ್ಕಳಿಗೆ ಬಡಿದ ಪರಿಣಾಮ ಈ ಘಟನೆ ನಡೆದಿದೆ. ಶಾಲೆ ಇರುವ ಸ್ಥಳಗಳಲ್ಲಿ ವಾಹನ ಚಾಲಕರು ನಿಧಾನವಾಗಿ ಚಲಿಸಬೇಕು ಮತ್ತು ಹಾರ್ನ್ ಮಾಡಲೇಬೇಕು ಎಂದು ಎಲ್ಲೆಲ್ಲೂ ಸೈನ್ ಬೋರ್ಡ್ ಗಳನ್ನು ಹಾಕಿದ್ದರೂ, ಮುಗ್ಧ ಮಕ್ಕಳು ಹೀಗೆ ದಾರುಣ ಸಾವು ಕಾಣುವಂತಾಗುತ್ತಿರುವುದು ಖೇದಕರ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮೃತ ಮಕ್ಕಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications