ಮದ್ಯದ ಅಮಲಿನಲ್ಲಿ ಇಂಡಿಗೋ ವಿಮಾನದಲ್ಲಿ ಗಲಾಟೆ- ಇಬ್ಬರ ಬಂಧನ!

ದುಬೈ-ಮುಂಬೈ ಇಂಡಿಗೋ ವಿಮಾನದಲ್ಲಿ ಬುಧವಾರ ಮದ್ಯ ಸೇವಿಸಿ, ಸಹ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ನಿಂದಿಸಿದ ಘಟನೆ ನಡೆದಿದೆ. ಬಳಿಕ ಇಬ್ಬರು ಫ್ಲೈಯರ್‌ಗಳನ್ನು ಬಂಧಿಸಲಾಗಿದ್ದು ನಂತರ ಅವರಿಗೆ ಜಾಮೀನು ನೀಡಲಾಗಿದೆ.

ಗಲ್ಫ್‌ನಿಂದ ಹಿಂದಿರುಗುತ್ತಿದ್ದ ಇಬ್ಬರು ಪ್ರಯಾಣಿಕರು ಸುಂಕ ರಹಿತ ಅಂಗಡಿಯಿಂದ ತಂದಿದ್ದ ಮದ್ಯವನ್ನು ಸೇವಿಸಿ ಸಂಭ್ರಮಾಚರಣೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಸಹ-ಪ್ರಯಾಣಿಕರು ಗದ್ದಲವನ್ನು ವಿರೋಧಿಸಿದಾಗ, ಆರೋಪಿಗಳಲ್ಲಿ ಒಬ್ಬರು ಮದ್ಯದ ಬಾಟಲಿಯೊಂದಿಗೆ ವಿಮಾನದಲ್ಲಿ ನಡೆಯಲು ಪ್ರಾರಂಭಿಸಿದರು.

Riot in Indigo flight under the influence of alcohol - two arrested!

ಈ ವೇಳೆ ಪ್ರಯಾಣೀಕರಿಂದ ಸಿಬ್ಬಂದಿ ಬಾಟಲಿಗಳನ್ನು ಕಸಿದುಕೊಳ್ಳಬೇಕಾಯಿತು. ವಿಮಾನ ಮುಂಬೈನಲ್ಲಿ ಇಳಿದ ನಂತರ ಇಬ್ಬರು ಪ್ರಯಾಣಿಕರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಾದ ದತ್ತಾತ್ರೇಯ ಬಾಪರ್ಡೇಕರ್ ಮತ್ತು ಜಾನ್ ಜಾರ್ಜ್ ಡಿಸೋಜಾ ವಿರುದ್ಧ ಐಪಿಸಿ ಸೆಕ್ಷನ್ 336 (ಇತರರ ಜೀವ ಮತ್ತು ಸುರಕ್ಷತೆಗೆ ಅಪಾಯ) ಮತ್ತು ಏರ್‌ಕ್ರಾಫ್ಟ್ ನಿಯಮಗಳ 21,22 ಮತ್ತು 25 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

"ದುಬೈನಿಂದ ಮುಂಬೈಗೆ 6E 1088 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಅಮಲೇರಿದ ಸ್ಥಿತಿಯಲ್ಲಿದ್ದರು ಮತ್ತು ಸಿಬ್ಬಂದಿಯ ಅನೇಕ ಎಚ್ಚರಿಕೆಗಳ ಹೊರತಾಗಿಯೂ ಮದ್ಯಪಾನವನ್ನು ಮುಂದುವರೆಸಿದರು. ಅವರು ಸಿಬ್ಬಂದಿ ಮತ್ತು ಸಹ-ಪ್ರಯಾಣಿಕರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ" ಎಂದು ಇಂಡಿಗೋ ಹೇಳಿದೆ.

Riot in Indigo flight under the influence of alcohol - two arrested!

"ಪ್ರೋಟೋಕಾಲ್ ಪ್ರಕಾರ, ಅಶಿಸ್ತಿನ ವರ್ತನೆಗಾಗಿ ಅವರನ್ನು ಸಿಐಎಸ್ಎಫ್ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ. ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ" ಎಂದು ಏರ್ಲೈನ್ಸ್ ಹೇಳಿದೆ. ಈ ವರ್ಷದಲ್ಲಿ ಇದು ಏಳನೇ ಘಟನೆಯಾಗಿದ್ದು, ಫ್ಲೈಯರ್ಸ್ ಅಶಿಸ್ತಿನ ವರ್ತನೆಗಾಗಿ ಪ್ರಕರಣ ದಾಖಲಿಸಲಾಗಿದೆ.

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ

ನವೆಂಬರ್ 26 ರಂದು AI 102 ಬೋರ್ಡ್‌ನಲ್ಲಿ ಮಧ್ಯಾಹ್ನದ ಊಟ ಬಡಿಸಿದ ನಂತರ ಮತ್ತು ದೀಪಗಳನ್ನು ಆಫ್ ಮಾಡಿದ ಸ್ವಲ್ಪ ಸಮಯದ ನಂತರ, ಬಿಸಿನೆಸ್ ಕ್ಲಾಸ್ ಸೀಟ್ 8A ನಲ್ಲಿ ಕುಳಿತಿದ್ದ ಪುರುಷ ಪ್ರಯಾಣಿಕನು ವಯಸ್ಸಾದ ಮಹಿಳೆಯ ಸೀಟ್ ಬಳಿ ಹೋಗಿ, ತನ್ನ ಪ್ಯಾಂಟ್ ಬಿಚ್ಚಿ ಅವರ ಮೇಲೆ ಮೂತ್ರ ವಿಸರ್ಜಿಸಿದ್ದಾನೆ ಎಂದು ಎಫ್‌ಐಆರ್ ದಾಖಲಾಗಿತ್ತು. ವಿಮಾನವು ಜಾನ್ ಎಫ್. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಜೆಎಫ್‌ಕೆ) ದಿಂದ ನವದೆಹಲಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು.

ಬಳಿಕ ವ್ಯಕ್ತಿ ಸಂತ್ರಸ್ತೆಯ ಬಳಿ ಕ್ಷಮೆಯಾಚಿಸಿದ್ದನು. ಅಲ್ಲದೆ ತನಗೆ ಕುಟುಂಬ ಇದ್ದು, ತನ್ನ ವಿರುದ್ಧ ಕೇಸ್ ದಾಖಲಿಸಬೇಡಿ. ಹೆಂಡತಿ ಮತ್ತು ಮಗುವಿಗೆ ತೊಂದರೆಯಾಗುತ್ತದೆ ಎಂದು ಬೇಡಿಕೊಂಡಿದ್ದ ಎನ್ನಲಾಗಿದೆ.

ಸಂತ್ರಸ್ತ ಮಹಿಳೆ ಏರ್ ಇಂಡಿಯಾಗೆ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು, ಅದರಲ್ಲಿ ಆರೋಪಿ ತನ್ನ ವಿರುದ್ಧ ಕೇಸ್ ದಾಖಲಿಸಬೇಡಿ ಎಂದು ಬೇಡಿಕೊಂಡಿರುವುದಾಗಿ ಉಲ್ಲೇಖಿಸಲಾಗಿದೆ.

ವಿಮಾನದ ಸಿಬ್ಬಂದಿ ಮೇಲೆ ಹಲ್ಲೆ

ಕಳೆದ ಜನವರಿಯಲ್ಲಿ ಅಬುಧಾಬಿಯಿಂದ ಮುಂಬೈಗೆ ಆಗಮಿಸಿದ ವಿಸ್ತಾರಾ ವಿಮಾನದಲ್ಲಿ ಇಟಲಿಯ ಮಹಿಳಾ ಪ್ರಯಾಣಿಕೆ ಅರೆಬೆತ್ತಲಾಗಿ ಓಡಾಡಿದ್ದಲ್ಲದೇ ಗಲಾಟೆ ನಡೆಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪೊಲೀಸರ ಅತಿಥಿಯಾಗಿದ್ದಳು.

ವಿಸ್ತಾರಾ ಏರ್‌ಲೈನ್ಸ್ ವಿಮಾನದಲ್ಲಿ ಇಟಲಿಯ 45 ವರ್ಷದ ಮಹಿಳೆಯೊಬ್ಬರು ರಂಪಾಟ ನಡೆಸಿ, ವಿಸ್ತಾರಾ ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಎಕಾನಮಿ ಕ್ಲಾಸ್ ಟಿಕೆಟ್ ಹೊಂದಿದ್ದ ಪಾವೊಲಾ ಪೆರುಕ್ಕಿಯೋ ಎಂಬಾಕೆ, ಬಿಜಿನೆಸ್ ಕ್ಲಾಸ್ ನಲ್ಲಿ ಕೂರಬೇಕು ಎಂದು ಪಟ್ಟುಹಿಡಿದಿದ್ದರು.

ಅದಕ್ಕೆ ತಡೆಯೊಡ್ಡಿದ ಸಿಬ್ಬಂದಿಯ ಮುಖಕ್ಕೆ ಗುದ್ದಿ ಹಲ್ಲೆ ಮಾಡಿದ್ದರು. ಅಷ್ಟೇ ಅಲ್ಲದೆ ಸಿಬ್ಬಂದಿ ಮೇಲೆ ಉಗುಳಿದ್ದಾರೆ. ಬಳಿಕ ವಿಮಾನದಲ್ಲಿ ಅರೆನಗ್ನಳಾಗಿ ಓಡಾಡಿದ್ದರು. ವಿಮಾನದ ಸಿಬ್ಬಂದಿಯ ದೂರಿನ ಅನ್ವಯ ಮುಂಬಯಿ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಆದರೆ ಮುಂಬಯಿ ಕೋರ್ಟ್ ಒಂದು ಅವರಿಗೆ ಜಾಮೀನು ಮಂಜೂರು ಮಾಡಿದೆ.

'ವಿಮಾನ ಹೈಜಾಕ್' ಪ್ರಯಾಣಿಕನ ತಪ್ಪು ಸಂದೇಶ

ಜನವರಿಯಲ್ಲಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 29 ವರ್ಷ ವಯಸ್ಸಿನ ಮೋತಿ ಸಿಂಗ್‌ ರಾತೋಡ್‌ ಎಂಬ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ. ದುಬೈನಿಂದ ಜೈಪುರಕ್ಕೆ ಆಗಮಿಸುತ್ತಿದ್ದ ಈತ ವಿಮಾನ ಹೈಜಾಕ್‌ ಆಗಿದೆ ಎಂದು ಟ್ವೀಟ್‌ ಮಾಡಿ ಪೊಲೀಸರ ಅತಿಥಿಯಾಗಿದ್ದನು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+