Get Updates
Get notified of breaking news, exclusive insights, and must-see stories!

ಉತ್ತರಕಾಶಿ ಸಿಲ್ಕಯಾರಾ ಸುರಂಗ ಕುಸಿತ: ಸಿಕ್ಕಿಕೊಂಡ ಕಾರ್ಮಿಕರನ್ನು ತಲುಪಲು ಕೆಲವೇ ಮೀಟರ್ ಬಾಕಿ!

ಉತ್ತರಾಖಂಡದ ಉತ್ತರ ಕಾಶಿಯಲ್ಲಿ ನವೆಂಬರ್ 12ರಂದು ಸಿಲ್ಕಯಾರಾ ಸುರಂಗದ ಒಂದು ಭಾಗ ಕುಸಿದು 41 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯಾಚರಣೆ 12ನೇ ದಿನಕ್ಕೆ ಕಾಲಿಟ್ಟಿದೆ. ಈ ರಕ್ಷಣಾ ಕಾರ್ಯಾಚರಣೆ ಈಗ ಕೊನೆಯ ಹಂತದಲ್ಲಿದೆ.

ಆದರೆ ಇಂದು ಬೆಳಗ್ಗೆ ಸಿಲ್ಕಯಾರಾ ಸುರಂಗದಲ್ಲಿ ಪರಿಹಾರ ಕಾರ್ಯದ ವೇಳೆ ಆಗರ್ ಯಂತ್ರ ಕೆಟ್ಟು ನಿಂತಿದೆ. ಹೀಗಾಗಿ ಇಂದು ಕೊನೆಯ ಹಂತದಲ್ಲಿದ್ದ ರಕ್ಷಣಾ ಕಾರ್ಯಚರಣೆಗೆ ಅಡ್ಡಿಯಾಗಿದೆ. ಇದನ್ನು ಸರಿಪಡಿಸಲು ದೆಹಲಿಯಿಂದ 7 ತಜ್ಞರು ಹೆಲಿಕಾಪ್ಟರ್ ಮೂಲಕ ಉತ್ತರಕಾಶಿಗೆ ಕರೆಸಲಾಗಿದ್ದು, ಆಗರ್ ಯಂತ್ರ ದುರಸ್ತಿಗೆ ಹೆಲಿಕಾಪ್ಟರ್ ಮೂಲಕ ಮತ್ತೊಂದು ಯಂತ್ರವನ್ನೂ ತರಲಾಗಿದೆ.

rescue-of-trapped-workers-in-uttarkashi-tunnel

ಸಿಲ್ಕಯಾರಾ ಸುರಂಗದಿಂದ ಕಾರ್ಮಿಕರನ್ನು ರಕ್ಷಿಸಲು ಸಾಧ್ಯವಾಗದೆ ಕೆಟ್ಟು ನಿಂತ ಯಂತ್ರವನ್ನು ಸರಿಪಡಿಸಲು ದೆಹಲಿಯಿಂದ ವೆಲ್ಡಿಂಗ್ ತಜ್ಞರನ್ನು ಕರೆಸಲಾಗಿದೆ. ಘಟನಾ ಸ್ಥಳಕ್ಕಾಗಮಿಸಿದ ದೆಹಲಿಯ ವೆಲ್ಡಿಂಗ್ ತಜ್ಞ ವೆಲ್ಡರ್ ರಾಧೆ ರಮಣ್ ದುಬೆ, 'ಸುರಂಗದ ಒಳಗಿನ ಎಂಎಸ್ ಪೈಪ್ ವೆಲ್ಡಿಂಗ್ ಮಾಡಲು ಇಲ್ಲಿಗೆ ಬಂದಿದ್ದೇವೆ. ಇದಕ್ಕಾಗಿ ಐವರು ವೆಲ್ಡರ್ ಗಳು ಇಲ್ಲಿಗೆ ಬಂದಿದ್ದಾರೆ. ವೆಲ್ಡಿಂಗ್ ಸಹಾಯದಿಂದ ಈ ಯಂತ್ರಗಳ ಕೆಲಸ ಮಾಡುತ್ತೇವೆ" ಎಂದಿದ್ದಾರೆ.

ಇತ್ತ ಉತ್ತರಕಾಶಿ ಡಿಎಂ ಅಭಿಷೇಕ್ ರುಹೇಲಾ ಅವರು ಇತ್ತೀಚಿನ ಹೇಳಿಕೆಯಲ್ಲಿ "ನಾವು ಹೆಚ್ಚಿನ ದೂರವನ್ನು ಕ್ರಮಿಸಿದ್ದೇವೆ ಮತ್ತು ಸ್ವಲ್ಪ ಕೆಲಸ ಉಳಿದಿದೆ. ನಾವು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ತಂಡಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ನಾವು ತಜ್ಞರನ್ನು ಸಂಪರ್ಕಿಸುತ್ತಿದ್ದೇವೆ. ಮತ್ತು ನುರಿತ ವ್ಯಕ್ತಿಗಳಿಂದ ಸಲಹೆ ಪಡೆಯುತ್ತಿದ್ದೇವೆ. ಅವರಲ್ಲಿ ಕೆಲವರನ್ನು ಕೂಡ ಸ್ಥಳಕ್ಕೆ ಕರೆಸಲಾಗಿದೆ. ರಕ್ಷಣೆ ಯಾವಾಗ ಕೊನೆಗೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಕೆಲಸ ನಿರಂತರವಾಗಿ ನಡೆಯುತ್ತಿದೆ ಮತ್ತು ಇದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರವು ಮೇಲ್ವಿಚಾರಣೆ ಮಾಡುತ್ತಿದೆ. ಭಾರತ ಸರ್ಕಾರವು ನಮಗೆ ಬೆಂಬಲ ನೀಡುತ್ತಿದೆ. ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೇ ಉತ್ತರಕಾಶಿಯಲ್ಲಿದ್ದು, ಇಡೀ ಘಟನೆಯ ಮೇಲೆ ನಿಗಾ ಇಟ್ಟಿದ್ದಾರೆ'' ಎಂದಿದ್ದಾರೆ.

41 ಪುರುಷರು ಈಗ 12 ದಿನಗಳಿಂದ ಒಳಗೆ ಇದ್ದಾರೆ. ಈ ಸಮಯದಲ್ಲಿ ಅವರು ಒಂದೆರಡು ಬಾರಿ ಮಾತ್ರ ಸರಿಯಾದ ಊಟವನ್ನು ಸ್ವೀಕರಿಸಿದ್ದಾರೆ. ಸುರಂಗ ಮತ್ತು ಹೊರಭಾಗದ ನಡುವಿನ ತಾಪಮಾನ ವ್ಯತ್ಯಾಸ ಮತ್ತು ಕಾರ್ಮಿಕರ ಮೇಲೆ ಈ ಬಂಧನದ ಮಾನಸಿಕ ಪ್ರಭಾವವನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.

ರಕ್ಷಣಾ ಪೈಪ್ ಕಾರ್ಮಿಕರನ್ನು ತಲುಪಿದ ನಂತರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಕಾರ್ಮಿಕರನ್ನು ಸಂಪರ್ಕಿಸಿದ ನಂತರ ವೈದ್ಯರು ಹೋಗಿ ಅವರ ಸ್ಥಿತಿಯನ್ನು ಪರಿಶೀಲಿಸುತ್ತಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಇದಕ್ಕಾಗಿ ಸ್ಟ್ರೆಚರ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಕಾರ್ಮಿಕರು ಆಸ್ಪತ್ರೆಗೆ ತಲುಪಿದ ನಂತರ ವಿವರವಾದ ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ. ಅವರಿಗೆ ಚಿಕಿತ್ಸೆ ನೀಡಲು ಚಿನ್ಯಾಲಿಸೌರ್‌ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 41 ಹಾಸಿಗೆಗಳ ಆಸ್ಪತ್ರೆಯನ್ನು ಸಿದ್ಧಪಡಿಸಲಾಗಿದೆ.

ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಈಗಾಗಲೇ 45 ಮೀಟರ್‌ ರಂಧ್ರ ಕೊರೆಯಲಾಗಿದ್ದು, 800 ಎಂಎಂ ಪೈಪ್ ನ ಮೂಲಕ ರಕ್ಷಣಾ ತಂಡ ಸಂತ್ರಸ್ತರು ಸಿಲುಕಿರುವ ಸ್ಥಳಕ್ಕೆ ಕ್ಯಾಮರಾ ತಲುಪಿದೆ. ಅವರು ಸಿಲುಕಿಕೊಂಡಿರುವ ಪ್ರದೇಶವು ಸುಮಾರು 8.5 ಮೀಟರ್ ಎತ್ತರ ಮತ್ತು 2 ಕಿಮೀ ಉದ್ದವಿದ್ದು ಅದೃಷ್ಟವಶಾತ್ ಅದು ನಿರ್ಮಾಣ ಹಂತದಲ್ಲಿರುವ ಸುರಂಗದ ಭಾಗವು ವಿದ್ಯುತ್ ಮತ್ತು ನೀರಿನ ಪೂರೈಕೆಯನ್ನು ಹೊಂದಿದೆ. ಅವರನ್ನು ತಲುಪಲು ಸುರಂಗದಲ್ಲಿ ಕೇವಲ 6-8 ಮೀಟರ್ ಕೊರೆತ ಬಾಕಿ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಬಹುಬೇಗ ಕಾರ್ಮಿಕರನ್ನು ರಕ್ಷಣಾ ತಂಡ ತಲುಪಲಿದೆ.

ಕಳೆದ 12 ದಿನಗಳಲ್ಲಿ ಹಿಮಾಲಯ ಪ್ರದೇಶದ ಭೂವಿನ್ಯಾಸ ಮತ್ತು ಮಣ್ಣಿನ ಸ್ವರೂಪದಿಂದಾಗಿ ರಕ್ಷಣಾ ಕಾರ್ಯಾಚರಣೆಗಳು ಅನೇಕ ತೊಂದರೆಗಳನ್ನು ಎದುರಿಸುತ್ತಿವೆ. ಆಗಾಗ್ಗೆ ರಸ್ತೆ ತಡೆಗಳು ಕಾರ್ಯಾಚರಣೆಯಲ್ಲಿ ವಿಳಂಬ ಪ್ರಗತಿಗೆ ಕಾರಣವಾಗಿದೆ. ಈ ಸವಾಲುಗಳ ಕಾರಣದಿಂದಾಗಿ ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ನಿಖರವಾದ ಸಮಯವನ್ನು ನೀಡುವಲ್ಲಿ ಇನ್ನೂ ಸಾಧ್ಯವಾಗುತ್ತಿಲ್ಲ. ಎಲ್ಲವೂ ಸರಿಯಾಗಿ ನಡೆದರೆ ಮುಂದಿನ ಎರಡು ಗಂಟೆಗಳಲ್ಲಿ ಕಾರ್ಮಿಕರನ್ನು ಹೊರಗೆ ಕರೆತರಬಹುದು ಎನ್ನಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+