ರೀಲ್ ನಿಂದ ರಿಯಲ್ ಮಹಾಭಾರತಕ್ಕೆ ರೂಪಾ ಗಂಗೂಲಿ
ಕೋಲ್ಕತ್ತಾ, ಜ.7: ಬಿಜೆಪಿ ಮತ್ತೊಬ್ಬ ಸೆಲೆಬ್ರಿಟಿಯನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬೆಳೆವಣಿಗೆಗಾಗಿ ಅಮಿತ್ ಶಾ ಅವರು ಕಾರ್ಯತಂತ್ರ ರೂಪಿಸಿದ್ದು ಅದರಂತೆ ವಿವಿಧ ಕ್ಷೇತ್ರದ ಗಣ್ಯರನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಿದೆ.
80 ರ ದಶಕದಲ್ಲಿ ಪ್ರಸಾರವಾದ ಮಹಾಭಾರತ ಧಾರಾವಾಹಿಯಲಿ ದ್ರೌಪದಿ ಪಾತ್ರ ನಿರ್ವಹಿಸಿದ್ದ ರೂಪಾ ಗಂಗೂಲಿ ಅವರು ಬೆಂಗಾಳಿ ಮೂಲದ ನಟಿ ಹಾಗೂ ಗಾಯಕಿ. ಜ.7ರಂದು ಹೌರಾದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಸಮಕ್ಷಮದಲ್ಲಿ ಬಿಜೆಪಿಗೆ ಸೇರಿದ್ದಾರೆ.
ಮಹಾಭಾರತ ಅಲ್ಲದೆ ಗೌತಮ್ ಘೋಷ್ ಅವರ 'ಪದ್ಮ ನದಿರ್ ಮಾಜ್ ಹಿ', ಅಪರ್ಣಾ ಸೇನ್ ಅವರ 'ಯುಗಾಂತ', ರಿತುಪರ್ಣ ಘೋಷ್ ಅವರ 'ಅಂತರ್ ಮಹಲ್' ಸಿನಿಮಾಗಳಲ್ಲಿ ಉತ್ತಮ ಅಭಿನಯ ನೀಡಿದ್ದರು. [ಮಹಾಭಾರತ' ಸೀರಿಯಲ್ ಖ್ಯಾತಿ ರವಿ ಛೋಪ್ರಾ ಇನ್ನಿಲ್ಲ]

ಪಶ್ಚಿಮ ಬಂಗಾಳದ ಜನಪ್ರಿಯ ಗಾಯಕ ಬಾಬುಲ್ ಸುಪ್ರಿಯೋ ಅವರನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಈಗ ಅವರು ಸಂಸದ ಹಾಗೂ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಪಶ್ಚಿಮ ಬಂಗಾಳದ ಬಿಜೆಪಿಗೆ ಗ್ಲಾಮರ್ ಟಚ್ ನೀಡಲು ಬಿಜೆಪಿ ಈಗ ರೂಪಾ ಗಂಗೂಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ.
Actress Roopa Ganguly of 'Draupadi' fame joins BJP http://t.co/aW3PZgqLj7 pic.twitter.com/KIJnWCbcbL
— NDTV (@ndtv) January 7, 2015 ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಟಾಲಿವುಡ್(ಬೆಂಗಾಳಿ ಚಿತ್ರರಂಗ) ದ ಅನೇಕ ನಟ, ನಟಿಯರು ಸೇರ್ಪಡೆಗೊಂಡ ನಂತರ ಎಚ್ಚೆತ್ತುಕೊಂಡ ಬಿಜೆಪಿ ಈಗ ತಾನು ಅದೇ ಮಾರ್ಗವನ್ನು ಅನುಸರಿಸುತ್ತಿದೆ. ದಕ್ಷಿಣ ಭಾರತದಲ್ಲೂ ಇದೇ ರೀತಿ ಕಾರ್ಯತಂತ್ರವನ್ನು ಬಿಜೆಪಿ ಅಧ್ಯಕ್ಶ ಅಮಿತ್ ಶಾ ಅವರು ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications