ಜಯಂತಿ ನಟರಾಜನ್ ಕಾಂಗ್ರೆಸ್ ವಿದಾಯದ ಹಿಂದಿನ ರಹಸ್ಯವೇ ಬೇರೆ?
ಕಾಂಗ್ರೆಸ್ ಪಕ್ಷ ಮತ್ತು ಹೈಕಮಾಂಡ್ ಸಂಸ್ಕೃತಿಯ ನಿಷ್ಟಾವಂತ ಹಿಂಬಾಲಕರಲ್ಲಿ ಗುರುತಿಸಿಕೊಂಡಿದ್ದ ಜಯಂತಿ ನಟರಾಜನ್ ಪಕ್ಷ ತೊರೆದಿದ್ದು ಕಾಂಗ್ರೆಸ್ ಮುಖಂಡರಿಗೆ ಶಾಕ್ ಜೊತೆ ಮುಜುಗುರವನ್ನು ಉಂಟು ಮಾಡಿರುವುದು ನಿಜ.
ಜಯಂತಿ ನಟರಾಜನ್ ಪಕ್ಷ ತೊರೆದಿರುವುದಕ್ಕೆ ಕಾರಣ ಬೇರೊಂದು ಇದೆ ಎನ್ನುವ ಮಾತು ಈಗ ಕೇಳಿ ಬರುತ್ತಿರುವುದು, ವಿಷಯದ ಗಂಭೀರತೆ ಈಗ ಬೇರೆ ಆಯಾಮ ಪಡೆದುಕೊಂಡಿದೆ. (ಕಾಂಗ್ರೆಸ್ಸಿಗೆ ಜಯಂತಿ ಗುಡ್ ಬೈ)
ಮುಂದೆ ಎದುರಿಸ ಬೇಕಾಗಿ ಬರಬಹುದಾದ ಸಿಬಿಐ ಕುಣಿಕೆಯಿಂದ ಬಚಾವ್ ಆಗಲು ಜಯಂತಿ ನಟರಾಜನ್ ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿ ಬಿಜೆಪಿಗೆ ಹತ್ತಿರವಾಗುವ ಪ್ರಯತ್ನವಿದು ಎಂದು ಹೇಳಲಾಗುತ್ತಿದೆ.
ಐರವತ್ತರ ದಶಕದಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ ಭಕ್ತವತ್ಸಲಂ ಮೊಮ್ಮಗಳಾಗಿದ್ದರಿಂದ ಜಯಂತಿಗೆ ರಾಜಕೀಯ ರಂಗದಲ್ಲಿ ನೆಲೆಕಾಣಲು ಶಿಫಾರಸಿನ ಅಥವಾ ಬೂತ್ ಮಟ್ಟದಿಂದ ಮೇಲೆ ಬರುವ ಅವಶ್ಯಕತೆ ಕಂಡು ಬಂದಿರಲೇ ಇಲ್ಲ.
ರಾಜೀವ್ ಗಾಂಧಿ ಕಾಲದಿಂದಲೂ ಗಾಂಧಿ ಕುಟುಂಬಕ್ಕೆ ನಿಯತ್ತಾಗಿದ್ದ ಜಯಂತಿ ನಟರಾಜನ್, ತಮಿಳುನಾಡಿನ ಎರಡು ಪ್ರಾದೇಶಿಕ ಪಕ್ಷಗಳ ನಡುವಿನ ಜಿದ್ದಾಜಿದ್ದಿನ ರಾಜಕೀಯದಲ್ಲಿ ಮಾತ್ರ ಆಟಕ್ಕುಂಟು ಲೆಕ್ಕಕ್ಕಿರಲಿಲ್ಲ. ಜಯಂತಿಗೆ ಅಲ್ಲಿನ ರಾಜಕೀಯ ಕೂಡಾ ಬೇಕಾಗಿಯೂ ಇರಲಿಲ್ಲ.
ರಾಜೀವ್ ಗಾಂಧಿ ಪ್ರಧಾನಿಯಾದ ನಂತರ ಕೇಂದ್ರ ರಾಜಕಾರಣದಲ್ಲಿ ಸ್ಟ್ರಾಂಗ್ ಮಹಿಳೆಯಾಗಿ ಗುರುತಿಸಿಕೊಂಡಿದ್ದ ಜಯಂತಿ, ಹೈಕಮಾಂಡ್ ಸಂಸ್ಕೃತಿಗೆ ಪುನಶ್ಚೇತನ ನೀಡಿದ್ದ ಸೋನಿಯಾ ಮೇಡಂಗೂ ಹತ್ತಿರವಾಗಿ ಬಿಟ್ಟಿದ್ದರು, ರಾಹುಲ್ ಗಾಂಧಿ ಕೂಡಾ ತನಗಿರುವ ರಾಜಕೀಯ ಚಿಂತನಾ ಮಟ್ಟದಲ್ಲಿ ಇವರನ್ನು ಬೆಂಬಲಿಸಿ ಕೊಂಡು ಬಂದಿದ್ದರೂ ಕೂಡಾ. (ಕಾಂಗ್ರೆಸ್ ತೊರೆದ ಜಯಂತಿ ನಟರಾಜನ್ ಯಾರು)
ಅಮಿತ್ ಶಾ ಅವರನ್ನು ಜಯಂತಿ ಭೇಟಿಯಾಗಿದ್ದು ಯಾಕೆ ಎನ್ನುವುದೇ ಇಲ್ಲಿ ಗಂಭೀರ ಟಾಪಿಕ್, ಮುಂದೆ ಓದಿ..

ತಮಿಳುನಾಡು ರಾಜಕೀಯ
ಡಿಎಂಕೆ ಅಥವಾ ಎಐಡಿಎಂಕೆ ಪಕ್ಷಗಳು ಜಯಂತಿ ನಟರಾಜನ್ ರಾಜೀನಾಮೆ ಬಗ್ಗೆ ಹೆಚ್ಚಾಗಿ ತಲೆನೇ ಕೆಡಿಸಿಕೊಂಡಿಲ್ಲ. ಯಾಕೆಂದರೆ ತಮಿಳುನಾಡು ರಾಜಕೀಯದಲ್ಲಿ ಕಾಂಗ್ರೆಸ್ಸಾಗಲಿ ಅಥವಾ ಜಯಂತಿ ನಟರಾಜನ್ ಆಗಲಿ ರೇಸಿನಲ್ಲಿ ಇಲ್ಲದ ಕುದುರೆ. ಜಿ ಕೆ ಮೂಪನಾರ್ ಅವರ ಟಿಎಂಸಿ ರಾಜಕೀಯ ಇಚ್ಚಾಶಕ್ತಿಯ ವಿಚಾರಕ್ಕಾಗಿ ಕಾಂಗ್ರೆಸ್ ಜೊತೆ ವಿಲೀನಗೊಂಡ ನಂತರ ಅಲ್ಲಿ ಕಾಂಗ್ರೆಸ್ ಲೆಕ್ಕಕ್ಕೇ ಇಲ್ಲ.

ಬಿಜೆಪಿಗೆ ನೆಲೆಬೇಕು
ತಮಿಳುನಾಡು ರಾಜಕೀಯವೇ ಬೇರೆ. ಪ್ರಾದೇಶಿಕ ಪಕ್ಷದ ಹೊರತಾಗಿ ಅಲ್ಲಿ ರಾಜಕೀಯ ನಡೆಸುವುದು ಕಷ್ಟಸಾಧ್ಯ. ಅಲ್ಲಿನ ಜನರಿಗೆ ಪ್ರಾದೇಶಿಕ ಸಮಸ್ಯೆ, ಭಾಷೆಯ ಮೇಲಿನ ಅಭಿಮಾನ, ನಮ್ಮವರು ತಮ್ಮವರು ಎನ್ನುವುದರ ಜೊತೆ ಯಾರು ರಾಜಕೀಯ ಮಾಡಿಕೊಂಡು ಮಾಡುತ್ತಾರೋ ಅದೇ ಮುಖ್ಯ. ಈಗ ಅಲ್ಲಿ ಬಿಜೆಪಿ ತಳವೂರುವ ನಿರ್ಧಾರಕ್ಕೆ ಬಂದಿರುವುದು ಇತ್ತೀಚಿನ ಬೆಳವಣಿಗೆ.

ಅಮಿತ್ ಶಾ ಭೇಟಿಯಾಗಿದ್ದ ಜಯಂತಿ?
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಜಯಂತಿ ನಟರಾಜನ್ ಭೇಟಿಯಾಗಿದ್ದರು ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ತನಗೆ ಎದುರಾಗ ಬಹುದಾದ ಸಿಬಿಐ ವಿಚಾರಣೆಯ ವಾಸನೆ ತಟ್ಟುತ್ತಿದ್ದಂತೇ ಜಯಂತಿ, ಶಾ ಭೇಟಿಯಾಗಿದ್ದರು. ಮನಮೋಹನ್ ಸಿಂಗ್ ಅಧಿಕಾರದ ಅವಧಿಯಲ್ಲಿ ಪರಿಸರ ಸಚಿವಾಲಯದ ಆಗುಹೋಗುಗಳು ಮೇಲೆ ಸಚಿವೆಯಾಗಿದ್ದ ಜಯಂತಿ ನಟರಾಜನ್ ಅವರಿಗೆ ಸಂಪೂರ್ಣ ಕಂಟ್ರೋಲ್ ಇದ್ದರೂ ಹಲವು ಒತ್ತಡದಿಂದ ಸುಮ್ಮನಿದ್ದ ಜಯಂತಿ ಈಗ ಸಚಿವಾಲಯದ ಅಕ್ರಮವನ್ನೆಲ್ಲಾ ಹೊರಹಾಕಿದ್ದಾರೆ. ಜೊತೆಗೆ ರಾಹುಲ್ ಗಾಂಧಿ ಹೆಸರನ್ನೂ ಭಯಂಕರವಾಗಿ ಪ್ರಸ್ತಾವಿಸಿದ್ದಾರೆ.

ಆದಿತ್ಯ ಬಿರ್ಲಾ ಗ್ರೂಪ್
ಸಚಿವೆಯಾಗಿದ್ದ ಅವಧಿಯಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ನಿಂದ ಕಿಕ್ ಬ್ಯಾಕ್ ಪಾವತಿಯಾಗಿದೆ ಎನ್ನುವ ಅನುಮಾನ ಈಗ ಕಾಡಲಾರಂಭಿಸಿದೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್ 2013ರಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಬಿರ್ಲಾ ಕಚೇರಿಗೆ ದಾಳಿ ನಡೆಸಿದ್ದಾಗ ಇದಕ್ಕೆ ಪೂರಕವಾದ ದಾಖಲೆಗಳು ಲಭ್ಯವಾಗಿದ್ದವು ಎನ್ನುವ ಸುದ್ದಿಯೂ ಇದೆ.

ಸ್ವಹಿತಾಶಕ್ತಿಗಿಗಾಗಿ ಬಿಜೆಪಿ ಬಾಗಿಲು ಬಡಿಯುತ್ತಿದ್ದಾರೆಯೇ?
ದೆಹಲಿ ಚುನಾವಣೆಗೆ ಮುನ್ನ ರಾಹುಲ್ ಗಾಂಧಿ ಮತ್ತು ಪಕ್ಷದ ಮೇಲೆ ಹರಿಹಾಯ್ದು ಕಾಂಗ್ರೆಸ್ ತೊರೆದಿರುವ ಜಯಂತಿ ನಟರಾಜನ್ ನಿರ್ಧಾರದ ಹಿಂದೆ ಸ್ವಹಿತಾಶಕ್ತಿ ಇದೆ ಎನ್ನುವುದು ಈಗ ಹರಿದಾಡುತ್ತಿರುವ ಸುದ್ದಿ. ಸಿಬಿಐ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜಯಂತಿ ನಟರಾಜನ್ ಬಿಜೆಪಿ ಬಾಗಿಲು ಬಡಿಯುತ್ತಿದ್ದಾರೆ ಎನ್ನುವುದು ಕೇಳಿ ಬರುತ್ತಿರುವ ಮಾತು. ಪ್ರಧಾನಿ ಮೋದಿ ಮೇಲೆ ವಾಗ್ದಾಳಿ ನಡೆಸುವುದು ಪ್ರಮುಖವಾಗಿ ಕಾಂಗ್ರೆಸ್ ಹೈಕಮಾಂಡ್ ಈ ಹಿಂದೆ ಇವರಿಗೆ ನೀಡಿದ್ದ ಜವಾಬ್ದಾರಿ. ಈಗ ಬದಲಾದ ರಾಜಕೀಯ ಕಾಲಘಟ್ಟದಲ್ಲಿ ಜಯಂತಿ ನಟರಾಜನ್ ಅವರಿಗೆ ಯಾರು ಹಿತವರಾಗುತ್ತಾರೋ ಕಾದು ನೋಡಬೇಕು.
-
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ?












Click it and Unblock the Notifications