ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ಆಗಿರುವ ಸುಂದರ ಯುವತಿಯ ಫೋಟೊದ ಹಿಂದಿನ ಅಸಲಿ ಕತೆ ಏನು?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 06: ಸುಂದರ ಯುವತಿಯೊಬ್ಬಳು ವಯಸ್ಸಾದ ವ್ಯಕ್ತಿಯೊಬ್ಬನನ್ನು ತಳ್ಳುವ ಬಂಡಿಯ ಮೇಲೆ ಕೂರಿಸಿಕೊಂಡು ಎಳೆದುಕೊಂಡು ಹೋಗುತ್ತಿರುವ ಚಿತ್ರವೊಂದು ಫೇಸ್‌ಬುಕ್‌ನಲ್ಲಿ ಭಾರಿ ವೈರಲ್ ಆಗಿದೆ.

'ಐಎಎಸ್‌ ಟಾಪರ್ ಹುಡುಗಿ ಬಂಡಿ ಎಳೆಯುವ ತನ್ನ ತಂದೆಯನ್ನು ಅದೇ ಬಂಡಿಯಲ್ಲಿ ಕೂರಿಸಿಕೊಂಡು ಎಳೆದುಕೊಂಡು ಹೋಗಿ ಜಗತ್ತಿಗೆ ಪರಿಚಯಿಸಿದ್ದಾಳೆ' ಎಂಬ ಕತೆಯೊಂದಿಗೆ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಈ ಚಿತ್ರವನ್ನು ಕಾಂಗ್ರೆಸ್‌ ನ ಮಾಜಿ ಸಚಿವ ಶಶಿ ತರೂರ್, ತಮಿಳುನಾಡು ಕಾಂಗ್ರೆಸ್ ಮುಖಂಡ ಅಸ್ಲಂ ಬಾಷಾ, ನಟಿ ಖುಷ್ಬು, ಕಾಂಗ್ರೆಸ್‌ನ ಕಮ್ಯುನಿಕೇಷನ್ ವಿಭಾಗ, ಇನ್ನೂ ಹಲವು ಪ್ರಮುಖ ರಾಜಕೀಯ ಮುಖಂಡರು, ನಟ-ನಟಿಯರು ಸಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ.

ಏಳು ತಿಂಗಳ ಈ ಚೆಂದದ ಗೊಂಬೆಯ ಕೂದಲು ಬಲು ಫೇಮಸ್ಏಳು ತಿಂಗಳ ಈ ಚೆಂದದ ಗೊಂಬೆಯ ಕೂದಲು ಬಲು ಫೇಮಸ್

ಆದರೆ ಈ ಚಿತ್ರದ ಹಿಂದಿನ ಅಸಲಿ ಕತೆ ಬೇರೆಯೇ ಇದೆ. ಸುಂದರವಾದ ಈ ಚಿತ್ರವನ್ನು ಕೋಟ್ಯಂತರ ಮಂದಿ ಶೇರ್ ಮಾಡಿದ್ದಾರೆ. ಆದರೆ ಅದರ ಹಿಂದೆ ಸುಳ್ಳು ಕತೆಯೊಂದನ್ನು ಹರಿಬಿಟ್ಟಿದ್ದಾರೆ.

ಅಸಲಿ ಕತೆ ಬೇರೆಯೇ ಇದೆ

ಅಸಲಿ ಕತೆ ಬೇರೆಯೇ ಇದೆ

ಆದರೆ ಈ ಸುಂದರ ಚಿತ್ರದ ಹಿಂದಿರುವ ಅಸಲಿ ಕತೆ ಬೇರೆಯೇ ಇದೆ. ಚಿತ್ರದಲ್ಲಿ ಬಂಡಿ ಎಳೆಯುತ್ತಿರುವ ಯುವತಿ ಐಎಎಸ್‌ ಟಾಪರ್ ಅಲ್ಲ, ಬಂಡಿಯ ಮೇಲೆ ಕುಳಿತ ವ್ಯಕ್ತಿ ಆಕೆಯ ತಂದೆಯೂ ಅಲ್ಲ. ಯಾವುದೋ ಬ್ರಾಂಡ್‌ಗಾಗಿ ಶೂಟಿಂಗ್ ನಡೆಯುತ್ತಿದ್ದ ವೇಳೆ ತೆಗೆದಿರುವ ಚಿತ್ರ ಅದು.

ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ಕಳ್ಳತನ ಮಾಡಿದ, ಅದೇನು ಗೊತ್ತಾ..?!ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ಕಳ್ಳತನ ಮಾಡಿದ, ಅದೇನು ಗೊತ್ತಾ..?!

ಚಿತ್ರದಲ್ಲಿರುವ ಯುವತಿಯ ಹೆಸರು ಶ್ರಮೋನಾ

ಚಿತ್ರದಲ್ಲಿರುವ ಯುವತಿಯ ಹೆಸರು ಶ್ರಮೋನಾ

ಚಿತ್ರದಲ್ಲಿರುವ ಯುವತಿಯ ಹೆಸರು ಶ್ರಮೋನಾ ಪೊಡ್ಡಾರ್‌. ಆಕೆಯ ತಂದೆ ವೈದ್ಯರಾಗಿದ್ದು, ಆಕೆ ಯಾವ ಐಎಎಸ್‌ ಟಾಪರ್‌ ಸಹ ಅಲ್ಲ. ಆಕೆ ಖಾಸಗಿ ಬ್ರಾಂಡ್‌ ಪ್ರಚಾರಕ್ಕಾಗಿ ಕೊಲ್ಕತ್ತಕ್ಕೆ ತೆರಳಿದ್ದಾಗ ಅಲ್ಲಿನ ಶೋಭಾ ಮಾರ್ಕೆಟ್‌ ಬಳಿ ತನ್ನ ಗೆಳೆಯ ಕ್ಲಿಕ್ಕಿಸಿದ್ದ ಫೋಟೊ ಇದು ಎಂದು ಶ್ರಮೋನಾ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಕುತೂಹಲಕ್ಕಾಗಿ ರಿಕ್ಷಾ ಎಳೆದೆ

ಕುತೂಹಲಕ್ಕಾಗಿ ರಿಕ್ಷಾ ಎಳೆದೆ

'ನನಗೆ ಮುಂಚಿನಿಂದಲೂ ರಿಕ್ಷಾ ಬಂಡಿ ಎಳೆಯುವವರ ಬಗ್ಗೆ ಕುತೂಹಲ ಇತ್ತು, ಹಾಗಾಗಿ ನಾನು ಅವರನ್ನು ಹಿಂದೆ ಕೂರಿಸಿಕೊಂಡು ಬಂಡಿ ಎಳೆದೆ. ಆಗ ನನ್ನ ಗೆಳೆಯ ಆ ಚಿತ್ರವನ್ನು ತೆಗೆದಿದ್ದ ಅದನ್ನು ನಾನೇ ನನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದೆ' ಎಂದು ಶ್ರುಮೋನಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತನ್ನ ಪೋಷಕರ ಹೆಸರನ್ನೂ ಈ ಸುದ್ದಿಯಲ್ಲಿ ತಂದಿರುವ ಬಗ್ಗೆಯೂ ಬೇಸರ ವ್ಯಕ್ತಪಡಿಸಿರುವ ಅವರು, ನನ್ನ ತಂದೆ ವೈದ್ಯರಾಗಿದ್ದು ಅವರನ್ನು ಸಹ ಈ ಸುಳ್ಳು ಸುದ್ದಿಯಲ್ಲಿ ಎಳೆದು ತರಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಮುಂಚೆಯೂ ಹಲವು ಬಾರಿ ಈ ರೀತಿ ಆಗಿತ್ತು

ಮುಂಚೆಯೂ ಹಲವು ಬಾರಿ ಈ ರೀತಿ ಆಗಿತ್ತು

ಕೆಲವು ದಿನಗಳ ಮುಂಚೆ ವೃದ್ಧಾಶ್ರಮದಲ್ಲಿ ಅಜ್ಜಿ ಹಾಗೂ ಮೊಮ್ಮಗಳು ಭೇಟಿಯಾದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶಾಲಾ ಪ್ರವಾಸದ ವೇಳೆ ವೃದ್ಧಾಶ್ರಮಕ್ಕೆ ಭೇಟಿ ನೀಡಿದ್ದ ಬಾಲಕಿಗೆ ತನ್ನ ಅಜ್ಜಿ ಸಿಕ್ಕಾಗ ತೆಗೆದ ಚಿತ್ರ ಇದು ಎಂದು ಅದನ್ನು ವೈರಲ್ ಮಾಡಲಾಗಿತ್ತು. ಆದರೆ ಇದು ಸಹ ಸತ್ಯವಾಗಿರಲಿಲ್ಲ. ಅಜ್ಜಿ ಆ ವೃದ್ಧಾಶ್ರಮದಲ್ಲಿರುವುದು ಬಾಲಕಿಗೆ ಮೊದಲೇ ಗೊತ್ತಿತ್ತು.

English summary
A Image went viral in social media in that a young girl pulling a cart. story told that she is pulling his father and she is a IAS topper. But the real story is not like that. She is doctor's daughter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X