"ಮನುಕುಲದ ರಕ್ಷಣೆಗೆ ಮೇಡ್ ಇನ್ ಇಂಡಿಯಾ ಲಸಿಕೆಗಳೊಂದಿಗೆ ನಾವು ಸಿದ್ಧ"
ನವದೆಹಲಿ, ಜನವರಿ 09: ಕೊರೊನಾ ಸೋಂಕು ದೇಶದ ಆರ್ಥಿಕತೆ ಮೇಲೆ ಹೊಡೆತ ಕೊಡುತ್ತಿರುವ ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹದಗೆಡಿಸುತ್ತಿರುವ ಈ ಹೊತ್ತಿನಲ್ಲಿ ಮನುಕುಲವನ್ನು ರಕ್ಷಿಸಲು ಭಾರತವು, ಒಂದಲ್ಲ, ಎರಡು "ಮೇಡ್ ಇನ್ ಇಂಡಿಯಾ" ಲಸಿಕೆಯೊಂದಿಗೆ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೊರೊನಾ ಕಾಲಘಟ್ಟವಾದ ಇಂದು, ಇಡೀ ವಿಶ್ವದಲ್ಲೇ ಭಾರತ ಅತಿ ಕಡಿಮೆ ಮರಣ ಪ್ರಮಾಣ ಹಾಗೂ ಹೆಚ್ಚು ಚೇತರಿಕೆ ಪ್ರಮಾಣ ದಾಖಲಿಸಿರುವ ದೇಶಗಳಲ್ಲಿ ಒಂದಾಗಿದೆ. ಇಂದು ಭಾರತ ಮನುಕುಲದ ರಕ್ಷಣೆಗೆ ಒಂದಲ್ಲ, ಎರಡು ಲಸಿಕೆಗಳೊಂದಿಗೆ ಸಿದ್ಧವಾಗಿದೆ ಎಂದು ತಿಳಿಸಿದರು. ಮುಂದೆ ಓದಿ...
ಜ.11ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮೋದಿ ಸಭೆ

"ಆತ್ಮನಿರ್ಭರ ಭಾರತಕ್ಕೆ ಕೊಡುಗೆ"
16ನೇ ಪ್ರವಾಸಿ ಭಾರತೀಯ ದಿವಸದ ಸಮಾವೇಶದಲ್ಲಿ ಮಾತನಾಡಿದ ಅವರು, ಈ ವರ್ಚುಯಲ್ ಸಭೆಯ ಪರಿಕಲ್ಪನೆ "ಆತ್ಮನಿರ್ಭರ ಭಾರತಕ್ಕೆ ಕೊಡುಗೆ" ಆಗಿದೆ. ಭಾರತೀಯ ವಲಸಿಗರೊಂದಿಗೆ ಸಂವಹನ ನಡೆಸಲು ಇದು ಉತ್ತಮ ಅವಕಾಶ ನೀಡಿದೆ ಎಂದು ತಿಳಿಸಿದ್ದಾರೆ.

"ಸವಾಲು ಎದುರಿಸುವಲ್ಲಿ ಭಾರತೀಯರ ಪ್ರಯತ್ನ ದೊಡ್ಡದು"
ವಿಶ್ವದಾದ್ಯಂತ ನೆಲೆಸಿರುವ ಭಾರತೀಯರು "ಭಾರತ ಮಾತೆ" ಎಂಬ ಮನಸ್ಥಿತಿಯಿಂದ ಏಕತೆ ಸಾಧಿಸಿದ್ದಾರೆ. ಕಳೆದ ವರ್ಷ ಸವಾಲುಗಳನ್ನು ಎದುರಿಸುವಲ್ಲಿ ಭಾರತೀಯ ಮೂಲದ ಸಹೋದ್ಯೋಗಿಗಳ ಪ್ರಯತ್ನ ಶ್ಲಾಘನಾರ್ಹ ಎಂದಿದ್ದಾರೆ. ಇಂದು ನಾವು ವಿಶ್ವದ ಮೂಲೆ ಮೂಲೆಗಳಿಂದಲೂ ಅಂತರ್ಜಾಲದ ಮೂಲಕ ಸಂಪರ್ಕ ಸಾಧಿಸಿದ್ದೇವೆ. ಆದರೆ ನಮ್ಮೆಲ್ಲರ ಮನಸ್ಸುಗಳೂ ಭಾರತ ಮಾತೆ ಎಂಬ ಮನಸ್ಥಿತಿಯೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಿದ್ದಾರೆ.

"ಇದು ನಮ್ಮ ಮಣ್ಣಿನ ಸಂಸ್ಕೃತಿ"
ಕಳೆದ ವರ್ಷ ಎಲ್ಲರಿಗೂ ಅತಿ ಸವಾಲಿನ ವರ್ಷವಾಗಿತ್ತು. ಆದರೆ ಈ ಸವಾಲುಗಳ ನಡುವೆಯೂ ವಿಶ್ವದಾದ್ಯಂತ ನೆಲೆಸಿರುವ ಭಾರತ ಮೂಲದ ಸಹೋದ್ಯೋಗಿಗಳು ದೇಶದೆಡೆತೆ ತಮ್ಮ ಕರ್ತವ್ಯವನ್ನು ನಿರ್ವಹಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆ ಎಂದರು. ಇದು ನಮ್ಮ ಮಣ್ಣಿನ ಸಂಸ್ಕಾರ ಎಂದು ಶ್ಲಾಘಿಸಿದರು.
ಚೀನಾದ ಈ ಲಸಿಕೆಯಿಂದ 73 ಅಡ್ಡಪರಿಣಾಮ ಎಂದ ತಜ್ಞ; ಗಂಟೆಗಳಲ್ಲೇ ಪೋಸ್ಟ್ ಮಾಯ

"ಹೊಸ ಪೀಳಿಗೆಯ ಭಾಗವಹಿಸುವಿಕೆ ಹೆಚ್ಚಿದೆ"
Know India ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಪಂಚದಾದ್ಯಂತ ಸಾವಿರಾರು ಭಾರತೀಯರು ಭಾಗವಹಿಸಿದ್ದಾರೆ. ಬೇರುಗಳು ದೂರವಿದ್ದರೂ ಹೊಸ ಪೀಳಿಗೆಯ ಭಾಗವಹಿಸುವಿಕೆ ಹಿಂದೆಂದಿಗಿಂತ ಹೆಚ್ಚಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ದಕ್ಷಿಣ ಅಮೆರಿಕ ಸುರಿನೇಮ್ ಅಧ್ಯಕ್ಷ ಚಂದ್ರಿಕಾ ಪರ್ಸಾದ್ ಸಂತೋಖಿ ಈ ಬಾರಿಯ ಪ್ರವಾಸಿ ಭಾರತೀಯ ದಿವಸ್ ಸಮಾವೇಶದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.
ಕಳೆದ ಬಾರಿ ಜನವರಿ 21ರಿಂದ ಜನವರಿ 23,2019ರಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ 15ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ 7000 ಪ್ರತಿನಿಧಿಗಳು ಭಾಗವಹಿಸಿದ್ದರು.