Get Updates
Get notified of breaking news, exclusive insights, and must-see stories!

ಲೈಂಗಿಕ ಅಪರಾಧ ಪ್ರಕರಣ: ಪೊಲೀಸರಿಗೆ ಮತ್ತೆ ತರಬೇತಿ ಕೊಡಿ

ನವದೆಹಲಿ, ಏಪ್ರಿಲ್ 19: ಲೈಂಗಿಕ ಅಪರಾಧದ ವಿವಿಧ ಆಯಾಮಗಳ ಕುರಿತು ಪೊಲೀಸರಿಗೆ ಮತ್ತೆ ತರಬೇತಿ ನೀಡುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.

ಕತುವಾ ಮತ್ತು ಉನ್ನಾವೋದಲ್ಲಿ ಇತ್ತೀಚೆಗೆ ನಡೆದ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ಆರಂಭದ ತನಿಖೆ ನಡೆಸಿರುವ ಪೊಲೀಸರ ಕಾರ್ಯವೈಖರಿ ಕುರಿತು ಪ್ರಶ್ನೆಗಳು ಉದ್ಭವವಾಗಿದ್ದವು. ಕತುವಾ ಅತ್ಯಾಚಾರದಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಭಾಗಿಯಾದ ಆರೋಪ ಎದುರಿಸುತ್ತಿದ್ದರೆ, ಉನ್ನಾವೋದಲ್ಲಿ ಅತ್ಯಾಚಾರ ಆರೋಪಿ ಬಿಜೆಪಿ ರಾಜಕಾರಣಿ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಪೊಲೀಸರು ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಲೈಂಗಿಕ ಅಪರಾಧ ಪ್ರಕರಣಗಳ ತನಿಖೆಯ ವಿವಿಧ ಆಯಾಮಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಪೊಲೀಸರಿಗೆ ಮತ್ತೆ ತರಬೇತಿ ನೀಡಬೇಕು ಎಂದು ಮೇನಕಾ ಗಾಂಧಿ ಪತ್ರದಲ್ಲಿ ಸೂಚಿಸಿದ್ದಾರೆ.

Re-train police officers in various aspects of sexual offences: maneka

ಮೇನಕಾ ಸೂಚಿಸಿದ ನಾಲ್ಕು ಕ್ರಮಗಳು
* ಸಾಕ್ಷ್ಯ ಸಂಗ್ರಹಣೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಬೇಕು.
* ಮಕ್ಕಳ ಮೇಲಿನ ಲೈಂಗಿಕ ಅಪರಾಧ ಪ್ರಕರಣಗಳ ತನಿಖೆಯನ್ನು ಕಾನೂನಿನ ಅಡಿ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಪೊಲೀಸರು ಆದ್ಯತೆ ನೀಡುವಂತೆ ನಿರ್ದೇಶನ ನೀಡಬೇಕು.
* ಅಂತಹ ಪ್ರಕರಣಗಳಲ್ಲಿ ಆರೋಪಿಗಳ ಜತೆ ನಿಕಟ ಸಂಪರ್ಕ ಹೊಂದಿರುವ ಅಥವಾ ತನಿಖೆಗೆ ಅಡ್ಡಿಪಡಿಸುವುದು ಕಂಡುಬಂದರೆ ಅಂತಹ ಪೊಲೀಸ್ ಅಧಿಕಾರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.
* ಇವು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದ್ದು, ತ್ವರಿತ ಮತ್ತು ತಕ್ಷಣದ ತನಿಖೆ ಕೈಗೊಂಡರೆ ಮಾತ್ರ ಅಪರಾಧಿಯನ್ನು ಕೂಡಲೇ ಬಂಧಿಸಲು ಸಾಧ್ಯ. ಲೈಂಗಿಕ ಅಪರಾಧಗಳ ತನಿಖೆಗೆ, ಮುಖ್ಯವಾಗಿ ಮಕ್ಕಳ ಮೇಲಿನ ಲೈಂಗಿಕ ಅಪರಾಧದ ತನಿಖೆ ನಿರ್ವಹಣೆಗೆ ಪ್ರತ್ಯೇಕ ವಿಶೇಷ ಘಟಕ ಸ್ಥಾಪಿಸುವುದು ಒಳಿತು.

ಇಂತಹ ಪ್ರಕರಣಗಳಲ್ಲಿ ಸಲಹೆಗಳನ್ನು ನೀಡುವುದಲ್ಲದೆ, ವಿಧಿ ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದು ಮೇನಕಾ ಗಾಂಧಿ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+