Maharashtra Election 2024: ಇವಿಎಂಗೆ ಸವಾಲು, ಬ್ಯಾಲೆಟ್ ಪೇಪರ್‌ನಿಂದ ಮರು ಮತದಾನ
ಮುಂಬೈ, ಡಿಸೆಂಬರ್ 03: ಭಾರತದಲ್ಲಿ ವಿರೋಧ ಪಕ್ಷಗಳು ಚುನಾವಣೆಗಳಲ್ಲಿ ಬಳಕೆ ಮಾಡುವ ವಿದ್ಯುನ್ಮಾನ ಮತಯಂತ್ರ (ಇವಿಎಂ) ಕಾರ್ಯ ವೈಖರಿ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಳಿಕ ಬ್ಯಾಲೆಟ್ ಪೇಪರ್ನೊಂದಿಗೆ ಮತದಾನ ನಡೆಸಬೇಕು ಎಂಬ ಕೂಗು ಹೆಚ್ಚಾಗಿದೆ. ಈ ಕುರಿತು ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡು ಸರ್ಕಾರ ರಚನೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ ರಾಜ್ಯದ ಮರ್ಕವಾಡಿ ಗ್ರಾಮದ ಜನರು ಈಗ ಇವಿಎಂಗೆ ಸವಾಲು ಹಾಕಿದ್ದಾರೆ. ಬ್ಯಾಲೆಟ್ ಪೇಪರ್ ಬಳಕೆ ಮಾಡಿಕೊಂಡು ಮಂಗಳವಾರ ಮರು ಮತದಾನ ನಡೆಸುತ್ತಿದ್ದಾರೆ.

ಈ ಗ್ರಾಮ ಸೊಲ್ಲಾಪುರದ ಮಲ್ಯಿರಾಸ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಈ ಕ್ಷೇತ್ರದಲ್ಲಿ ನವೆಂಬರ್ 20ರಂದು ನಡೆದ ಚುನಾವಣೆಯಲ್ಲಿ ಎನ್‌ಸಿಪಿ (ಶರದ್ ಪವಾರ್ ಬಣ) ಉತ್ತಮರಾವ್ ಜನ್ಕರ್ ಜಯಗಳಿಸಿದ್ದರು. ಚುನಾವಣೆಯಲ್ಲಿ ಅವರು 1,21,713 ಮತಗಳನ್ನು ಪಡೆದು 13,147 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಇಂದು ಮರು ಮತದಾನ: ಚುನಾವಣಾ ಫಲಿತಾಂಶದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮರ್ಕವಾಡಿ ಗ್ರಾಮದ ಜನರು ಇವಿಎಂಗೆ ಸವಾಲು ಹಾಕಿ ಇಂದು ಬ್ಯಾಲೆಟ್ ಪೇಪರ್ ಮೂಲಕ ಮರು ಮತದಾನವನ್ನು ನಡೆಸುತ್ತಿದ್ದಾರೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಗ್ರಾಮದಲ್ಲಿ ಡಿಸೆಂಬರ್ 5ರ ತನಕ ಕರ್ಫ್ಯೂ ಜಾರಿಗೊಳಿಸಿದ್ದಾರೆ.
ಅಚ್ಚರಿಯ ಸಂಗತಿ ಎಂದರೆ ಚುನಾವಣೆಯಲ್ಲಿ ಜಯಗಳಿಸಿರುವ ಉತ್ತಮರಾವ್ ಜನ್ಕರ್ ಬ್ಯಾಲೆಟ್ ಪೇಪರ್ ಬಳಕೆ ಮಾಡಿ ಮರು ಮತದಾನಕ್ಕೆ ಬೇಡಿಕೆ ಇಟ್ಟಿದ್ದರು. ಗ್ರಾಮದಲ್ಲಿರುವ ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಬೆಂಬಲಿಗರು ಸಹ ಮತದಾನದ ಬಗ್ಗೆ, ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ.
ಮಲ್ಯಿರಾಸ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ರಾಮ್ ಸಾತ್ಪುಳೆ ಅಭ್ಯರ್ಥಿಯಾಗಿದ್ದರು. ಅವರು ಚುನಾವಣೆಯಲ್ಲಿ 108566 ಮತಗಳನ್ನು ಪಡೆದಿದ್ದಾರೆ. ಗ್ರಾಮದಲ್ಲಿ ರಾಮ್ ಸಾತ್ಪುಳೆ ಅವರಿಗೆ ಮುನ್ನಡೆ ದೊರಕಿತ್ತು. ಆದರೆ ಉತ್ತಮರಾವ್ ಜನ್ಕರ್‌ಗೆ ಸಿಕ್ಕಿರುವ ಮತಗಳ ಕುರಿತು ಅನುಮಾನಗೊಂಡಿರುವ ಗ್ರಾಮಸ್ಥರು ಮರು ಮತದಾನವನ್ನು ಬ್ಯಾಲೆಟ್ ಪೇಪರ್ ಮೂಲಕ ಮಾಡುತ್ತಿದ್ದಾರೆ.
ಮರು ಮತದಾನದ ಬಳಿಕ ಗ್ರಾಮದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಸೊಲ್ಲಾಪುರ ಜಿಲ್ಲಾಡಳಿತ ಗ್ರಾಮದ ಜನರಿಗೆ ಮರು ಮತದಾನ ನಿಲ್ಲಿಸುವಂತೆ ನೋಟಿಸ್ ನೀಡಿತ್ತು. ಇದು ಕೇವಲ ಅಣಕು ಮತದಾನವಾಗಿದೆ. ಇದಕ್ಕೆ ಆಯೋಗದಿಂದ ಯಾವುದೇ ಮಾನ್ಯತೆ ಇಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.
ಸೊಲ್ಲಾಪುರ ಎಸ್ಪಿ ಅತುಲ್ ಕುಲಕರ್ಣಿ ಮಾತನಾಡಿ, "ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮರು ಮತದಾನ ಕೈ ಬಿಡುವಂತೆಯೂ ಗ್ರಾಮಸ್ಥರ ಮನವೊಲಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಮರ್ಕವಾಡಿ ಗ್ರಾಮದಲ್ಲಿ 2 ಸಾವಿರ ಅರ್ಹ ಮತದಾರರು ಇದ್ದಾರೆ. ನವೆಂಬರ್ 20ರಂದು ಇವಿಎಂ ಮೂಲಕ ಮತದಾನ ನಡೆದಿತ್ತು. 1900 ಜನರು ಮತದಾನ ಮಾಡಿದ್ದರು. ಗ್ರಾಮದ ಜನರು ಮೊದಲಿನಿಂದಲೂ ಉತ್ತಮರಾವ್ ಜನ್ಕರ್ ಕುಟುಂಬ ಬೆಂಬಲಿಸುತ್ತಾ ಬಂದಿದ್ದಾರೆ. ಗ್ರಾಮದಲ್ಲಿ ಅವರಿಗೆ 843 ಮತಗಳು ಬಂದಿವೆ. ಬಿಜೆಪಿಯ ರಾಮ್ ಸಾತ್ಪುಳೆಗೆ 1003 ಮತಗಳು ಬಂದಿವೆ. ಆದ್ದರಿಂದ ಚುನಾವಣಾ ಆಯೋಗದ ಅಂಕಿ-ಅಂಶ, ಇವಿಎಂ ಬಗ್ಗೆ ನಮಗೆ ನಂಬಿಕೆ ಇಲ್ಲ. ಬ್ಯಾಲೆಟ್ ಪೇಪರ್ ಮೂಲಕ ಮರು ಮತದಾನ ಮಾಡಿ ನಾವು ಮತ ಹಂಚಿಕೆ ಬಗ್ಗೆ ಸಾಕ್ಷ್ಯ ತೋರಿಸಲಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications