• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲ ವಸೂಲಿಗೆ ಹೊರಗುತ್ತಿಗೆ ಏಜೆಂಟ್‌ಗಳನ್ನು ಬಳಸದಂತೆ ಮಹೀಂದ್ರಾ ಕಂಪನಿಗೆ ಆರ್‌ಬಿಐ ನಿರ್ದೇಶನ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 23: ಮಹೀಂದ್ರಾ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್‌ ಹೊರಗುತ್ತಿಗೆ ಏಜೆಂಟ್‌ಗಳ ಮೂಲಕ ಸಾಲ ವಸೂಲಾತಿ ಪ್ರಕ್ರಿಯೆಯನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ.
ಈ ಹಣಕಾಸು ಕಂಪನಿಯು ಇನ್ನು ಮುಂದೆ ಹೊರಗಿನ ವಸೂಲಾತಿ ಏಜೆಂಟ್‌ಗಳನ್ನು ಬಳಸುಕೊಂಡು ಸಾಲ ವಸೂಲಿ ಪ್ರಕ್ರಿಯೆಯನ್ನು ನಡೆಸುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ಸೂಚನೆ ನೀಡಿದೆ. ಇಂಥ ಕಟ್ಟುನಿಟ್ಟಿನ ಸೂಚನೆ ನೀಡುವುದಕ್ಕೆ ಜಾರ್ಖಂಡ್‌ನಲ್ಲಿ ನಡೆದ ಘಟನೆಯೊಂದು ಕಾರಣವಾಗಿದೆ.

ಸಂತೆಯ ಚಿಂತೆ: ಭಾರತದಲ್ಲಿ ಡಬಲ್-ತ್ರಿಬಲ್ ಆಗಿದ್ದು ಹೇಗೆ ದಿನಸಿ ಬೆಲೆ?ಸಂತೆಯ ಚಿಂತೆ: ಭಾರತದಲ್ಲಿ ಡಬಲ್-ತ್ರಿಬಲ್ ಆಗಿದ್ದು ಹೇಗೆ ದಿನಸಿ ಬೆಲೆ?

ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ಫೈನಾನ್ಸ್ ಕಂಪನಿಯ ವಸೂಲಾತಿ ಏಜೆಂಟ್‌ನಿಂದ ಟ್ರಾಕ್ಟರ್‌ನ ಚಕ್ರಗಳ ಅಡಿಯಲ್ಲಿ ಸಿಲುಕಿನ ಗರ್ಭಿಣಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಯ ಬೆನ್ನಲ್ಲೇ ಸಾಲ ವಸೂಲಾತಿ ಪ್ರಕ್ರಿಯೆ ಸಂದರ್ಭದಲ್ಲಿ ಹೊರಗುತ್ತಿಗೆ ಏಜೆಂಟ್ ಅನ್ನು ಬಳಸಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆ.

ಪೊಲೀಸರಿಗೆ ಮಾಹಿತಿ ನೀಡದೇ ಕ್ರಮಕ್ಕೆ ಮುಂದು:
ಹಜಾರಿಬಾಗ್‌ನಲ್ಲಿ ಸಾಲವನ್ನು ಪಾವತಿ ಮಾಡದ ಸಾಲಗಾರರಿಂದ ಟ್ರಾಕ್ಟರ್ ಅನ್ನು ವಾಪಸ್ ಪಡೆದುಕೊಳ್ಳುವುದಕ್ಕಾಗಿ ಸಂತ್ರಸ್ತರ ನಿವಾಸಕ್ಕೆ ಹೋಗುವುದಕ್ಕೂ ಮೊದಲು ಹಣಕಾಸು ಕಂಪನಿಯ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿರಲಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಮಹೀಂದ್ರಾ ಗ್ರೂಪ್ ವ್ಯವಸ್ಥಾಪಕರು ಹೇಳುವುದೇನು?:
"ನಾವು ಈ ಘಟನೆಯನ್ನು ಎಲ್ಲಾ ಅಂಶಗಳಿಂದ ತನಿಖೆ ಮಾಡುತ್ತೇವೆ. ಮೂರನೇ ವ್ಯಕ್ತಿಯ ಸಂಗ್ರಹ ಏಜೆನ್ಸಿಗಳನ್ನು ಬಳಸುವ ಅಭ್ಯಾಸವನ್ನು ಸಹ ಪರಿಶೀಲಿಸುತ್ತೇವೆ. ಈ ದುಃಖದ ಕ್ಷಣದಲ್ಲಿ ನಾವು ಕುಟುಂಬದೊಂದಿಗೆ ನಿಲ್ಲುತ್ತೇವೆ ಎಂದು ಮಹೀಂದ್ರಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಅನೀಶ್ ಶಾ ಪತ್ರಿಕಾ ಪ್ರಕಟಣೆಯಲ್ಲಿ ಘಟನೆಯ ಕುರಿತು ತಿಳಿಸಿದ್ದಾರೆ.

English summary
RBI directed Mahindra Finance to stop hire Recovery Agents; here read reason behind this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X