ಹೊಸ ವರ್ಷಾರಂಭದಲ್ಲಿ ಹೊಸ ಪ್ರಯೋಗಕ್ಕೆ ಮುಂದಾದ ಆರ್‌ಎಸ್‌ಎಸ್

Posted By:
Subscribe to Oneindia Kannada

ನವದೆಹಲಿ, ಜ 5: ಪುಣೆಯ ಹಿಂಜೇವಾಡಿಯಲ್ಲಿ ಭಾನುವಾರ (ಜ 3) ನಡೆದ ಅಭೂತಪೂರ್ವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮಾವೇಶದ ನಂತರ, ಆರ್‌ಎಸ್‌ಎಸ್ ತನ್ನ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದೆ.

ಸಂಘಟನೆಯು ಬರೀ ಹಿಂದೂ ಸಮುದಾಯಕ್ಕೆ ಸೀಮಿತವಾಗದಂತೆ ರೂಪಿತವಾಗಿರುವ ಈ ಯೋಜನೆಯ ಪ್ರಕಾರ, ಆರ್‌ಎಸ್‌ಎಸ್ ಸದ್ಯದಲ್ಲೇ ಕ್ರೈಸ್ತ ಸಂಘಟನೆಯನ್ನು ಹುಟ್ಟುಹಾಕಲು ನಿರ್ಧರಿಸಿದೆ.(ರಾಮ್ ಮಾಧವ್ ಹೊಸ ಕನಸೇನು)

ಈಗಾಗಲೇ ಈ ಯೋಜನೆಯನ್ನು ಜಾರಿತರುವ ನಿಟ್ಟಿನಲ್ಲಿ ಸಂಘಟನೆಯ ಪ್ರಮುಖರು, ಹಲವು ಕ್ರೈಸ್ತ ಸಂಘಗಳ ನಾಯಕರ ಜೊತೆ ಮಾತುಕತೆ ಆರಂಭಿಸಿದ್ದಾರೆ.

ದಶಕಗಳ ಹಿಂದೆ ಹುಟ್ಟು ಹಾಕಲಾಗಿದ್ದ 'ಮುಸ್ಲಿಂ ರಾಷ್ಟ್ರೀಯ ಮಂಚ್' ನಿರೀಕ್ಷಿತ ಮಟ್ಟದಲ್ಲಿ ಯಶಸ್ಸನ್ನು ಪಡೆಯದಿದ್ದರೂ, ಈಗ ಆರ್‌ಎಸ್‌ಎಸ್ ಕ್ರೈಸ್ತ ಸಮುದಾಯವನ್ನು ತಲುಪಲು ಈ ಯೋಜನೆ ರೂಪಿಸಿದೆ.

ಅಸ್ತಿತ್ವಕ್ಕೆ ಬರಲಿರುವ ಹೊಸ ಸಂಘಟನೆಗೆ ಹೆಸರನ್ನು ಇನ್ನೂ ಅಂತಿಮಗೊಳಿಸದಿದ್ದರೂ 'ರಾಷ್ಟ್ರೀಯ ಇಸಾಯಿ ಮಂಚ್' ಎನ್ನುವ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದೆ.

ಕಳೆದ ವರ್ಷದ ಡಿಸೆಂಬರ್ ಮಧ್ಯ ಭಾಗದಲ್ಲೇ ನಡೆದಿತ್ತು ಸಭೆ, ಮುಂದೆ ಓದಿ..

ಡಿಸೆಂಬರ್ ನಲ್ಲಿ ನಡೆದಿದ್ದ ಸಭೆ

ಡಿಸೆಂಬರ್ ನಲ್ಲಿ ನಡೆದಿದ್ದ ಸಭೆ

ಹೋದ ವರ್ಷದ ಡಿಸೆಂಬರ್ ಹದಿನೇಳರಂದು ಆರ್ ಎಸ್ ಎಸ್ ಸಂಘಟನೆಯ ಪ್ರಮುಖರು, ಹನ್ನೆರಡು ರಾಜ್ಯದ 5 ಆರ್ಚ್ ಬಿಷಪ್, 40-50 ಬಿಷಪ್ ಗಳ ಜೊತೆ ಮಾತುಕತೆ ನಡೆಸಿದ್ದರು ಎಂದು ಸಂಘಟನೆಯ ಪ್ರಮುಖ ಇಂದ್ರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಅಸಹಿಷ್ಣುತೆ ಬಗೆಗಿನ ಚರ್ಚೆ

ಅಸಹಿಷ್ಣುತೆ ಬಗೆಗಿನ ಚರ್ಚೆ

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಸಹಿಷ್ಣುತೆ ಹೆಚ್ಚುತ್ತಿದೆ ಎನ್ನುವ ಚರ್ಚೆಯ ನಂತರ, ಆರ್ ಎಸ್ ಎಸ್ ಸಂಘಟನೆ ಈ ಸಭೆಯನ್ನು ಕರೆದಿತ್ತು. ಸಭೆಯಲ್ಲಿ ವಿಎಚ್ಪಿ ಮುಖಂಡರೂ ಭಾಗವಹಿಸಿದ್ದರು. ಸಭೆಗೆ ದೇಶದ ಪ್ರಮುಖ ಆರ್ಚ್ ಬಿಷಪ್ ಗಳು ಸಾಕ್ಷಿಯಾಗಿದ್ದು ವಿಶೇಷ.

ಧರಮ್ ಜಾಗರಣ್ ಮಂಚ್

ಧರಮ್ ಜಾಗರಣ್ ಮಂಚ್

ಉತ್ತರಪ್ರದೇಶದ ಆಗ್ರಾದಲ್ಲಿ ಆರ್ ಎಸ್ ಎಸ್ ಸಂಘಟನೆಯ ಅಂಗವಾದ ಧರಮ್ ಜಾಗರಣ್ ಮಂಚ್ ಭಾರೀ ಕ್ರೈಸ್ತ ಸಮುದಾಯದ ಮತಾಂತರಕ್ಕೆ ಮುಂದಾಗಿತ್ತು. ಕೇಂದ್ರ ಸರಕಾರಕ್ಕೆ ಇದು ತೀವ್ರ ಮುಜುಗರ ತರುವ ಸಾಧ್ಯತೆ ಇದ್ದದ್ದರಿಂದ ಬಿಜೆಪಿ ಈ ಕಾರ್ಯಕ್ರಮವನ್ನು ರದ್ದು ಮಾಡಲು ವಿನಂತಿಸಿತ್ತು.

ಜೇಟ್ಲಿ, ರಾಜನಾಥ್ ಹೇಳಿಕೆ

ಜೇಟ್ಲಿ, ರಾಜನಾಥ್ ಹೇಳಿಕೆ

ಗೃಹಸಚಿವ ರಾಜನಾಥ್ ಸಿಂಗ್ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ, ವಿವಿಧ ಕ್ರೈಸ್ತ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೇಂದ್ರ ಸರಕಾರದಿಂದ ಸಮುದಾಯಕ್ಕೆ ಮತ್ತು ಚರ್ಚುಗಳಿಗೆ ರಕ್ಷಣೆ ನೀಡುವ ಭರವಸೆಯನ್ನು ನೀಡಿದ್ದರು.

ಕಾಂಗ್ರೆಸ್ ಮುಖಂಡರ ಲೇವಡಿ

ಕಾಂಗ್ರೆಸ್ ಮುಖಂಡರ ಲೇವಡಿ

ಆರ್ ಎಸ್ ಎಸ್ ಹೊಸ ಯೋಜನೆಗೆ ಎಂದಿನಂತೆ ಲೇವಡಿ ಮಾಡಿರುವ ಕಾಂಗ್ರೆಸ್, ಇದು ಬಿಜೆಪಿ ಪ್ರಾಯೋಜಿತ ಹೊಸ ನಾಟಕ. ಒಂದೆಡೆ ಅಲ್ಪಸಂಖ್ಯಾತರ ಸಂಘಟನೆ ಹುಟ್ಟು ಹಾಕಲು ಹೊರಟಿರುವ ಆರ್ ಎಸ್ ಎಸ್, ಇತ್ತ ರಾಮಮಂದಿರ ನಿರ್ಮಾಣಕ್ಕೂ ಒತ್ತಾಯಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಲೇವಡಿ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rashtriya Swayam Sevak Sangh (RSS) plans to launch a Christian outfit. RSS leaders had a detailed meeting with Christian leaders, Arch Bishop's as part of a plan to reach out to the community.
Please Wait while comments are loading...