ವೈರಲ್ ವಿಡಿಯೋ: ಹೋಳಿ ಹಬ್ಬದಂದು ಡಾನ್ಸ್ ಮಾಡಿದ್ದ ವಾಜಪೇಯಿ!

ನವದೆಹಲಿ, ಆಗಸ್ಟ್ 16: ದೇಶದ ಪ್ರಧಾನಿಯಾದರೂ ಸಾಮಾನ್ಯರೊಂದಿಗೆ ಸಾಮಾನ್ಯರಾಗಿರುತ್ತಿದ್ದ ಕಾರಣಕ್ಕೇ ಅಟಲ್ ಬಿಹಾರಿ ವಾಜಪೇಯಿ ಅವರು ಕೋಟ್ಯಂತರ ಜನರ ಹೃದಯದಲ್ಲಿ ನೆಲೆಸಿದ್ದಾರೆ.

ಹೋಳಿ ಹಬ್ಬದಂದು ಬಣ್ಣ ಹಚ್ಚಿಕೊಂಡು ಅವರು ಜನಸಾಮಾನ್ಯರೊಂದಿಗೆ ಕುಣಿಯುತ್ತಿರುವ ಅತ್ಯಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಹಾನ್ ನಾಯಕರೊಬ್ಬರ ಸರಳ ಬದುಕಿಗೆ ಈ ವಿಡಿಯೋ ಕನ್ನಡಿ ಹಿಡಿಯುತ್ತದೆ.

ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು(ಆ.16) ನಮ್ಮನ್ನಗಲಿದ್ದಾರೆ. 93 ವರ್ಷ ವಯಸ್ಸಿನ ವಾಜಪೇಯಿ ಅವರು ಇನ್ನಿಲ್ಲ ಎಂಬುದು ಅರಗಿಸಿಕೊಳ್ಳಲಾಗದ ವಿಷಯ. ಆದರೆ ಜನಸಾಮಾನ್ಯರೊಂದಿಗೂ ಆತ್ಮೀಯರಾಗಿ, ಜನರ ಪ್ರಧಾನಿ ಎನ್ನಿಸಿದ್ದ, ಸರಳತೆಯ, ಸಜ್ಜನಿಕೆಯ ವಾಜಪೇಯಿ ಅವರು ಹಲವು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ.

Rare video of Former PM Atal Bihari Vajpayee dancing

ಅವರು ನೃತ್ಯ ಮಾಡುತ್ತಿರುವ ಈ ಅಪರೂಪದ ವಿಡಿಯೋ ಸಹ ಬದುಕಿನ ಬಗೆಗಿನ ಅವರ ಪ್ರೀತಿಯನ್ನು, ಪ್ರತಿಕ್ಷಣವನ್ನೂ ಸಂಭ್ರಮಿಸುವ ಅವರ ಮಗುವಿನಂಥ ಮನಸ್ಸಿನ ಪ್ರತೀಕವೆನ್ನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+