Ramya - Gen Z: ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ರಾಮ ಮಂದಿರದ, ಈ ವಿಷಯದ ಬಗ್ಗೆ ಮಾತನಾಡೋಣ ಬನ್ನಿ ಎಂದ ರಮ್ಯಾ!
Ramya - Gen Z: ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರ ವಿರುದ್ಧ ಮೋಹಕತಾರೆ, ಮಾಜಿ ಸಂಸದೆ ರಮ್ಯಾ ಅವರು ವಾಗ್ದಾಳಿ ನಡೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಅವರು ಹಂಚಿಕೊಂಡಿರುವ ಪೋಸ್ಟ್ ಇದೀಗ ವೈರಲ್ ಆಗಿದೆ. ಈಚೆಗೆ ಜೆನ್‌ಜೀಗಳ ಹೋರಾಟಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಕಂಗನಾ ಅವರು ನೀಡಿದ್ದ ಹೇಳಿಕೆಯು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಜೆನ್‌ಜೀ ಸಮುದಾಯವೂ ಗಟರ್ (ಚರಂಡಿ / ಕೊಳಕು) ಎಂಬರ್ಥದ ಪದಗಳನ್ನು ಕಂಗನಾ ಅವರು ಬಳಸಿದ್ದರು. ಇದು ಭಾರೀ ಟೀಕೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ತಮ್ಮ ಹೇಳಿಕೆಗೆ ಕಂಗನಾ ಅವರು ಸಮರ್ಥನೆ ನೀಡಿದರೂ ಸಹ ಈ ವಿವಾದ ತಣ್ಣಗಾಗಿಲ್ಲ. ಈ ನಡುವೆ ರಮ್ಯಾ ಅವರು ಕಂಗನಾ ಕಾಲೆಳೆದಿದ್ದಾರೆ.
ಕಂಗನಾ ರಣಾವತ್ ಅವರು ಜೆನ್‌ಜೀ ಅವರಿಗೆ ಗೌರವದ ಬಗ್ಗೆ ಉಪನ್ಯಾಸ ನೀಡುತ್ತಿರುವುದು 2026 ರ ಪ್ರಮುಖ ಘಟನೆಯಾಗಿದೆ. ಮೋದಿ ಕೆಲವರಿಗೆ ಭಗವಾನ್ ಎಂದು ಅವರು ಹೇಳುತ್ತಾರೆ, ಆದ್ದರಿಂದ ಜೆನ್‌ಜೀ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. 82 ವರ್ಷದ ಮಹಿಳಾ ರೈತ ಮಹಿಳೆಯನ್ನು ನೋಡಿ ತಾನು "100 ರೂಪಾಯಿಗೆ ಲಭ್ಯವಿರುವವರು" ಎಂದು ಹೇಳಿದ ಮಹಿಳೆ ಈಕೆ ಎಂದು ರಮ್ಯಾ ಅವರು ಹೇಳಿದ್ದಾರೆ.

ಮುಂದುವರಿದು ಕೋಟ್ಯಂತರ ಭಾರತೀಯರಿಗೆ ಆ ಮಹಿಳೆ ಅನ್ನದಾತರು - ಭಗವಾನ್. ಆ ದಿನ ಯಾವುದೇ ಭಾವನೆಗಳಿಗೆ ನೋವಾಗಲಿಲ್ಲವೇ? ಭಗವಾನ್ ಬಗ್ಗೆ ಹೇಳುವುದಾದರೆ- ರಾಮ ಮಂದಿರದ ಬಗ್ಗೆ ಮಾತನಾಡೋಣ. ರಾಮ ನನಗೆ ಭಗವಾನ್. ಒಬ್ಬ ಹಿಂದೂವಾಗಿ, ನನ್ನ ಭಾವನೆಗಳಿಗೆ ನೋವಾಗಿದೆ. ಈ ವಿಚಾರದಲ್ಲಿ ಆಕ್ರೋಶ ಇಲ್ಲವ್ಯಾಕೆ ಅಂತ ರಮ್ಯಾ ಅವರು ಕಂಗನಾ ಅವರನ್ನು ಪ್ರಶ್ನಿಸಿದ್ದಾರೆ. ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನ ಸ್ಟೇಟಸ್‌ನಲ್ಲಿ ರಮ್ಯಾ ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ.
Ramya: ಕಂಗನಾ ರಣಾವತ್ ಜೆನ್‌ಜೀಗಳ ಬಗ್ಗೆ ಹೇಳಿದ್ದೇನು
ದೇಶದಾದ್ಯಂತ ಈಚೆಗೆ ನಡೆದ ಜೆನ್‌ಜೀ ಹೋರಾಟವು ವಿಶ್ವದಾದ್ಯಂತ ಸುದ್ದಿ ಮಾಡಿತ್ತು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಅಕ್ರಮದ ವಿರುದ್ಧ ಇಡೀ ದೇಶದ ಯುವ ಸಮೂಹವು ಸಿಡಿದೆದ್ದಿತ್ತು. ದೇಶದಾದ್ಯಂತ ನಡೆದ ಪಕ್ಷಾತೀತ ಪ್ರತಿಭಟನೆ ಇದಾಗಿತ್ತು. ಯಾವುದೇ ರಾಜಕೀಯ ಪಕ್ಷಗಳ ಬೆಂಬಲ, ಸಹಕಾರವಿಲ್ಲದೆ ವಿದ್ಯಾರ್ಥಿಗಳೇ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದರು. ಜೆನ್‌ಜೀ ಹೋರಾಟವು ಯಶಸ್ಸು ಸಹ ಕಂಡಿತ್ತು. ಇತ್ತೀಚಿನ ದಶಕಗಳಲ್ಲಿ ಯಶಸ್ಸು ಕಂಡ ಅತ್ಯಂತ ದೊಡ್ಡ ಅಭಿಯಾನವೂ ಇದಾಗಿದೆ. ಆದರೆ, ಈ ಬೃಹತ್ ಅಭಿಯಾನದ ಬಗ್ಗೆ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) Gen-Zಗಳ ಬಗ್ಗೆ ಮಾತನಾಡಿದ್ದು ಭಾರೀ ಟೀಕೆಗೆ ಗುರಿಯಾಗಿತ್ತು.
Gen-Z ಹೋರಾಟದ ಬಗ್ಗೆ ಮಾತನಾಡಿದ್ದ ಕಂಗನಾ ಅವರು ಪ್ರತಿಭಟನಾಕಾರರು ಬಳಸಿದ ಭಾಷೆ ಹಾಗೂ ಪೋಸ್ಟರ್‌ಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ನಮ್ಮ ಸಂಸ್ಕೃತಿಯಲ್ಲ ಎಂದಿದ್ದರು. ಇಷ್ಟೊಂದು ಅಸಹ್ಯಕರ ದೃಶ್ಯಗಳನ್ನು ನಾನು ಎಂದಿಗೂ ನೋಡಿಲ್ಲ. ಈ ಪ್ರತಿಭಟನೆಗಳ ವಿಡಿಯೋ ನೋಡಿದರೆನೇ ವಾಂತಿ ಬರುತ್ತದೆ ಎಂದಿದ್ದರು. ನೀವೇ ನಿಮ್ಮನ್ನು ಜಿರಳೆಗಳು ಎಂದು ಕರೆದುಕೊಳ್ಳುತ್ತಿದ್ದೀರಿ. ನಿಮ್ಮ ವರ್ತನೆಯೂ ಸಹ ಅದೇ ತರ ಇದೆ. ನಿಮ್ಮನ್ನ ಬೆಳಸಿದವರಾದರೂ ಯಾರು? ಇದನ್ನೆಲ್ಲ ನೋಡಿದ ಮೇಲೆ ನನಗೆ ಡಿಜಿಟಲ್ ಡೀಟಾಕ್ಸ್‌ನ ಬೇಕು ಅಂತ ಅವರು ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಹೇಳಿಕೊಂಡಿದ್ದರು. ಅಲ್ಲದೆ ಇದೊಂದು ಗಟರ್ ಅಂತಲೂ ಹೇಳಿದ್ದರು.
Gen-Z ಎಂದರೆ ಜನರೇಷನ್ ಗಟರ್ ಅಂತೆಲ್ಲ ಹೇಳಿದ್ದು ಸೋಶಿಯಲ್ ಎಂದು ಕಂಗನಾ ಅವರು ಹೇಳಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಈ ವಿಚಾರಕ್ಕೆ ರಮ್ಯಾ ಅವರು ಸಹ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications
