Breaking; ತಮಿಳುನಾಡು ಸೇರಿ 4 ರಾಜ್ಯಕ್ಕೆ ರಾಜ್ಯಪಾಲರ ನೇಮಕ

ನವದೆಹಲಿ, ಸೆಪ್ಟೆಂಬರ್ 09; ತಮಿಳುನಾಡು, ಉತ್ತರಾಖಂಡ್, ಪಂಜಾಬ್ ಸೇರಿದಂತೆ ನಾಲ್ಕು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕವಾಗಿದೆ. ಆರ್. ಎನ್. ರವಿ ತಮಿಳುನಾಡು ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ಗುರುವಾರ ರಾತ್ರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ತಮಿಳುನಾಡು, ಉತ್ತರಾಖಂಡ್, ಪಂಜಾಬ್ ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕವಾಗಿದ್ದು, ನಾಗಲ್ಯಾಂಡ್ ರಾಜ್ಯಕ್ಕೆ ಉಸ್ತುವಾರಿ ರಾಜ್ಯಪಾಲರ ನೇಮಕವಾಗಿದೆ.

Ramnath Kovind Appointed New Governors To 4 States

ಲೆಫ್ಟಿನೆಂಟ್ ಗವರ್ನರ್ ಗುರ್‌ ಮೀತ್ ಸಿಂಗ್ ಉತ್ತರಾಖಂಡ್‌ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಉತ್ತರಾಖಂಡ್ ರಾಜ್ಯಪಾಲರಾಗಿದ್ದ ಬೇಬಿ ರಾಣಿ ಮೌರ್ಯ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2018ರ ಆಗಸ್ಟ್ 6ರಂದು ಬೇಬಿ ರಾಣಿ ಮೌರ್ಯ ಉತ್ತರಾಖಂಡ್ ರಾಜ್ಯಪಾಲರಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಅವಧಿಗೂ ಮೊದಲೇ ಬೇಬಿ ರಾಣಿ ಮೌರ್ಯ ರಾಜೀನಾಮೆ ನೀಡಿದ್ದರು.

ನಾಗಲ್ಯಾಂಡ್ ರಾಜ್ಯದ ಮಾಜಿ ರಾಜ್ಯಪಾಲ ಆರ್. ಎನ್. ರವಿ ತಮಿಳುನಾಡಿನ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಪಂಜಾಬ್ ರಾಜ್ಯದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು.

ಗುರುವಾರ ಹೊರಡಿಸುವ ಆದೇಶ ಪ್ರಕಾರ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಪಂಜಾಬ್ ರಾಜ್ಯದ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ಅಸ್ಸಾಂನ ರಾಜ್ಯಪಾಲ ಪ್ರೊ. ಜಗದೀಶ್ ಮುಖಿ ನಾಗಾಲ್ಯಾಂಡ್‌ನ ಉಸ್ತುವಾರಿ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+