ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ 21 ಅಭ್ಯರ್ಥಿಗಳ ಪಟ್ಟಿ

By Balaraj
|
Google Oneindia Kannada News

ಮತಕ್ಕಾಗಿ ಹಣದ ಬೇಡಿಕೆಯಿಟ್ಟ ಕುಟುಕು ಕಾರ್ಯಾಚರಣೆಯ ಕಪ್ಪುಚುಕ್ಕೆಯ ನಡುವೆ, ರಾಜ್ಯಸಭೆಗೆ ವಿವಿಧ ರಾಜ್ಯಗಳಿಂದ ಮತ್ತು ಪಕ್ಷಗಳಿಂದ 21 ಮಾಜಿ ಸಚಿವರು, ಶಾಸಕರು, ಹಾಲೀ ಸಚಿವರು, ಉದ್ಯಮಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

15 ರಾಜ್ಯಗಳಿಂದ ತೆರವಾಗಿರುವ 57 ಸ್ಥಾನಕ್ಕೆ ಜೂನ್ 11ರಂದು ಮತದಾನ ನಡೆಯಲಿದೆ. ಇದರಲ್ಲಿ 21 ಸ್ಪರ್ಧಿಗಳು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಉಳಿದ 36 ಸ್ಥಾನಕ್ಕೆ ಚುನಾವಣೆ ನಡೆಯಲಿದೆ. (ರಾಜ್ಯಸಭೆಗೆ ಸದಸ್ಯರ ಆಯ್ಕೆ ಹೇಗೆ)

ಬಿಜೆಪಿಯ ಲೆಕ್ಕಾಚಾರ ಸರಿಯಾದ ದಾರಿಯಲ್ಲಿ ಸಾಗಿದರೆ, ಈ ಚುನಾವಣೆಯ ನಂತರ ರಾಜ್ಯಸಭೆಯಲ್ಲಿ ಎನ್ಡಿಎ ಮೈತ್ರಿಕೂಟದ ಬಲ ವೃದ್ದಿಯಾಗಲಿದೆ. ಇದು ಜಿಎಸ್ಟಿ ಸೇರಿದಂತೆ ಹಲವು ಮಸೂದೆಗಳನ್ನು ಜಾರಿಗೆ ತರಲು ಬಿಜೆಪಿಗೆ ಅನುಕೂಲವಾಗಲಿದೆ.

ನಾಮಪತ್ರ ಹಿಂದಕ್ಕೆ ಪಡೆಯಲು ಶುಕ್ರವಾರ (ಜೂನ್ 3, 3 ಗಂಟೆ) ಅಂತಿಮ ದಿನವಾಗಿದ್ದರಿಂದ, ಕಣದಲ್ಲಿದ್ದ 21 ಅಭ್ಯರ್ಥಿಗಳು, ಯಾವುದೇ ತೊಂದರೆ, ಗೊಂದಲವಿಲ್ಲದೇ, ನಿರೀಕ್ಷೆಯಂತೆ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಕರ್ನಾಟಕದಲ್ಲಿನ ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್ಸಿನಿಂದ ಮೂವರು ಮತ್ತು ಬಿಜೆಪಿ, ಜೆಡಿಎಸ್ ನಿಂದ ತಲಾ ಒಬ್ಬರು ಕಣದಲ್ಲಿರುವುದರಿಂದ ಜೂನ್ ಹನ್ನೊಂದರಂದು ಚುನಾವಣೆ ನಡೆಯಲಿದೆ. (ಸ್ಟಿಂಗ್ ಆಪರೇಷನ್, 3ಕಾಸಿಗೆ ಹರಾಜಾದ ರಾಜ್ಯ ಶಾಸಕರ ಮರ್ಯಾದೆ)

ಕುಟುಕು ಕಾರ್ಯಾಚರಣೆಯ ವರದಿಯನ್ನು ಕೇಂದ್ರ ಚುನಾವಣಾ ಆಯೋಗ ತರಿಸಿಕೊಂಡಿರುವ ಹಿನ್ನಲೆಯಲ್ಲಿ, ಚುನಾವಣೆಯ ದಿನಾಂಕ ಮುಂದಕ್ಕೆ ಹೋಗುವ ಸಾಧ್ಯತೆಯಿಲ್ಲದಿಲ್ಲ. ಅವಿರೋಧವಾಗಿ ಆಯ್ಕೆಯಾದ 21 ಅಭ್ಯರ್ಥಿಗಳು ಯಾರು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...

ಸುರೇಶ್ ಪ್ರಭು

ಸುರೇಶ್ ಪ್ರಭು

1. ಹಾಲಿ ಕೇಂದ್ರ ರೈಲ್ವೆ ಸಚಿವ, ಸುರೇಶ್ ಪ್ರಭಾಕರ್ ಪ್ರಭು (ಬಿಜೆಪಿ), ಆಂಧ್ರದಿಂದ ಆಯ್ಕೆ
2. ಟಿ ಜಿ ವೆಂಕಟೇಶ್, ಮಾಜಿ ಶಾಸಕ, ಉದ್ಯಮಿ (ಟಿಡಿಪಿ), ಆಂಧ್ರದಿಂದ ಆಯ್ಕೆ
(ಚಿತ್ರದಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು)

ಆಂಧ್ರಪ್ರದೇಶ

ಆಂಧ್ರಪ್ರದೇಶ

3. ಹಾಲಿ ಕೇಂದ್ರ ವಿಜ್ಞಾನ, ತಂತ್ರಜ್ಞಾನ ಸಚಿವ ವೈ ಸತ್ಯನಾರಾಯಣ ಚೌಧುರಿ (ಟಿಡಿಪಿ)
4. ವಿ ವಿಜಯಸಾಯಿ ರೆಡ್ಡಿ, ಉದ್ಯಮಿ, ಜಗನ್ ಮೋಹನ್ ರೆಡ್ಡಿ ಆಪ್ತ ( ವೈ ಎಸ್ ಆರ್ ಸಿ)
(ಚಿತ್ರದಲ್ಲಿ ವಿಜಯಸಾಯಿ ರೆಡ್ಡಿ)

ಪಿ ಚಿದಂಬರಂ

ಪಿ ಚಿದಂಬರಂ

5. ಮಾಜಿ ಕೇಂದ್ರ ಹಣಕಾಸು, ಗೃಹ ಸಚಿವ ಪಿ ಚಿದಂಬರಂ ( ಕಾಂಗ್ರೆಸ್, ಮಹಾರಾಷ್ಟ್ರದಿಂದ ಆಯ್ಕೆ)

6. ಪ್ರಪುಲ್ ಪಟೇಲ್, ಮಾಜಿ ವಿಮಾನಯಾನ ಖಾತೆ ಸಚಿವ ( ಎನ್ಸಿಪಿ, ಮಹಾರಾಷ್ಟ್ರದಿಂದ ಆಯ್ಕೆ)
(ಚಿತ್ರದಲ್ಲಿ ಪಿ ಚಿದಂಬರಂ)

ಮಹಾರಾಷ್ಟ್ರ

ಮಹಾರಾಷ್ಟ್ರ

7. ಪಿಯೂಶ್ ಗೋಯಲ್, ಕೇಂದ್ರ ಇಂಧನ ಖಾತೆಯ ಸಚಿವ (ಬಿಜೆಪಿ)
8. ವಿನಯ್ ಸಹಸ್ರಬುಧೆ, ಅಂಕಣಗಾರ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ
(ಚಿತ್ರದಲ್ಲಿ ಪಿಯೂಶ್ ಗೋಯಲ್)

ಶಿವಸೇನೆ

ಶಿವಸೇನೆ

9. ಸಂಜಯ್ ರಾವತ್, ಶಿವಸೇನೆಯ ಮುಖವಾಣಿ ಸಾಮ್ನಾದ ಪ್ರಧಾನ ಸಂಪಾದಕ ( ಮಹಾರಾಷ್ಟ್ರ, ಮರು ಆಯ್ಕೆ)
10. ಡಾ. ವಿಕಾಸ್ ಮಹಾತ್ಮೆ, ಸಾಮಾಜಿಕ ಕಾರ್ಯಕರ್ತ, ಬಿಜೆಪಿ ಮುಖಂಡ ( ಮಹಾರಾಷ್ಟ್ರ)
(ಚಿತ್ರದಲ್ಲಿ ಸಂಜಯ್ ರಾವತ್)

ಬಿಹಾರ

ಬಿಹಾರ

11. ಮಾಜಿ ಜೆಡಿಯು ರಾಷ್ಟ್ರಾಧ್ಯಕ್ಷ, ಕೇಂದ್ರ ಸಚಿವ ಶರದ್ ಯಾದವ್ (ಜೆಡಿಯು)
12. ಖ್ಯಾತ ವಕೀಲ, ಮಾಜಿ ಕೇಂದ್ರ ಕಾನೂನು ಸಚಿವ, ರಾಂ ಜೇಠ್ಮಲಾನಿ (ಆರ್ಜೆಡಿ)
13. ಬಿಹಾರದ ಮಾಜಿ ಸಿಎಂ ಲಾಲೂ ಪುತ್ರಿ ಮಿಸಾ ಭಾರತಿ (ಆರ್ಜೆಡಿ)
14. ರಾಮಚಂದ್ರ ಪ್ರಸಾದ್ ಸಿಂಗ್ (ಜೆಡಿಯು)
15. ಗೋಪಾಲ್ ನಾರಾಯಣ್ ಸಿಂಗ್ (ಬಿಜೆಪಿ)

ತಮಿಳುನಾಡು

ತಮಿಳುನಾಡು

16. ಆರ್ ವೈತಿಲಿಂಗಂ (ಎಐಎಡಿಎಂಕೆ)
17. ಎ ನವನೀತ ಕೃಷ್ಣಮ್ (ಎಐಎಡಿಎಂಕೆ)
18. ಎ ವಿಜಯಕುಮಾರ್ (ಎಐಎಡಿಎಂಕೆ)
19. ಎಸ್ ಆರ್ ಬಾಲಸುಬ್ರಮಣಿಯನ್ (ಎಐಎಡಿಎಂಕೆ)
20. ಆರ್ ಎಸ್ ಭಾರತಿ (ಡಿಎಂಕೆ)
21. ಟಿಕೆಎಸ್ ಎಳಗೋಂವನ್ (ಡಿಎಂಕೆ)

English summary
With the process for withdrawing nominations to Rajya Sabha elections ending at 3 pm on Friday, June 3, 21 candidates across the country have been elected to their RS seats unopposed. List includes P Chidambaram, Ram Jethmalani, Sharad Yadav, Piyush Goyal, Suresh Prabhu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X