ಬಾಬ್ರಿ ಪ್ರಕರಣ: ಮುಸ್ಲಿಂ ಪರ ವಕೀಲ ರಾಜೀವ್ ಧವನ್ ವಜಾ
ನವದೆಹಲಿ, ಡಿಸೆಂಬರ್ 03: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 16 ರಂದು ಸುಪ್ರೀಂ ಕೋರ್ಟ್ ನಲ್ಲಿ ಅಂತಿಮ ವಿಚಾರಣೆ ನಡೆಯುತ್ತಿದ್ದ ವೇಳೆ, ರಾಮಜನ್ಮಸ್ಥಳದ ನಕ್ಷೆಯನ್ನು ಹರಿದುಹಾಕಿದ ಮುಸ್ಲಿಂ ಪರ ವಕೀಲ ರಾಜೀವ್ ಧವನ್ ಅವರನ್ನು ಪ್ರಕರಣದಿಂದ ವಜಾಗೊಳಿಸಲಾಗಿದೆ. ಮುಸ್ಲಿಮರ ಪರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ವಾದ ಮಾಡುವಂತಿಲ್ಲ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಿಂದ ಜಮಾಯತ್ ಪರ ವಾದಿಸುತ್ತಿದ್ದ ವಕೀಲ ಏಜಾಜ್ ಮಕ್ಬೂಲ್ ರಿಂದ ವಜಾಗೊಂಡ ಬಗ್ಗೆ ತಿಳಿದು ಬಂದಿದೆ. ಮೇಲ್ಮನವಿ ಸಲ್ಲಿಸುವ ಅಧಿಕಾರ ಈಗ ಇಲ್ಲ ಎಂದು ಫೇಸ್ಬುಕ್ ನಲ್ಲಿ ರಾಜೀವ್ ಧವನ್ ಬರೆದುಕೊಂಡಿದ್ದಾರೆ.
" ನನಗೆ ಆರೋಗ್ಯ ಸರಿಯಿಲ್ಲದ ಕಾರಣ ನನ್ನನ್ನು ಈ ಕೇಸಿನಿಂದ ವಜಾಗೊಳಿಸಲಾಗಿದೆ ಎಂಬ ಕಾರಣ ನೀಡಿದ್ದಾರೆ. ವಜಾಗೊಳಿಸುವ, ವಕೀಲರನ್ನು ಬದಲಿಸುವ ಅಧಿಕಾರ ಇರುತ್ತದೆ. ಇದನ್ನೇ ಎಒಆರ್ ಏಜಾಜ್ ಮಾಡಿದ್ದಾರೆ. ಆದರೆ, ನೀಡಿರುವ ಕಾರಣ ಸರಿಯಿಲ್ಲ ಹಾಗೂ ಸತ್ಯಕ್ಕೆ ದೂರವಾಗಿದೆ ಎಂದು ಧವನ್ ಹೇಳಿದ್ದಾರೆ.

ಅಕ್ಟೋಬರ್ ತಿಂಗಳಿನಲ್ಲಿ ನಡೆದ ರಾಮಜನ್ಮಭೂಮಿ ಸಿವಿಲ್ ಕೇಸಿನಲ್ಲಿ ಪ್ರತಿದಿನದ ವಿಚಾರಣೆಯಲ್ಲಿ 40 ದಿನಗಳ ಪೈಕಿ ಎರಡು ವಾರಕ್ಕೂ ಅಧಿಕ ಕಾಲ ಧವನ್ ಅವರು ಮುಸ್ಲಿಮರ ಪರ ವಾದಿಸಿದ್ದರು.
ಸುಪ್ರೀಂ ತೀರ್ಪು: ಅಲಹಾಬಾದ್ ಹೈಕೋರ್ಟ್ 2010ರಲ್ಲಿ ನೀಡಿದ ಆದೇಶವನ್ನು ಪಕ್ಕಕ್ಕಿಟ್ಟ ಸುಪ್ರೀಂಕೋರ್ಟ್, ಮೂವರು ಅರ್ಜಿದಾರರಿಗೆ ಸಮಾನವಾಗಿ ಮೂರನೇ ಒಂದು ಭಾಗ ಹಂಚಿಕೆ ಮಾಡಿದ್ದ ಆದೇಶವನ್ನು ತಿರಸ್ಕರಿಸಲಾಗಿದೆ. ವಿವಾದಿತ ಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕಾಗಿ ಸ್ಥಾಪನೆಯಾಗಿದ್ದ ಟ್ರಸ್ಟ್ ಗೆ ನೀಡಿದ ಕೋರ್ಟ್, ವಿವಾದಿತ ರಾಮಮಂದಿರ ನಿರ್ಮಾಣ ಮಾಡಲು ರಾಮಜನ್ಮಭೂಮಿ ನ್ಯಾಸ್ ಅಲ್ಲದೆ ಪ್ರತ್ಯೇಕ ಟ್ರಸ್ಟ್ ರಚನೆ ಆಗಬೇಕಿದೆ. ಮಸೀದಿಗೆ ಪರ್ಯಾಯ ಭೂಮಿಯನ್ನು 3 ರಿಂದ 4 ತಿಂಗಳುಗಳಲ್ಲಿ ಸರ್ಕಾರವು ನೀಡಬೇಕಾಗುತ್ತದೆ ಎಂದು ತೀರ್ಪು ನೀಡಿತ್ತು.












Click it and Unblock the Notifications